Power Cut: ಕರ್ನಾಟಕ ಕಾಂಗ್ರೆಸ್‌ಗೆ 8 ಗಂಟೆ ವಿದ್ಯುತ್ ಕಡಿತದ ಕೀರ್ತಿ: ಪ್ರಹ್ಲಾದ್ ಜೋಶಿ
ಬೆಂಗಳೂರು, ಅಕ್ಟೋಬರ್ 13: ಕರ್ನಾಟಕ ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ಉಚಿತ ಘೋಷಣೆಯನ್ನು ಮಾಡಿ ಇದೀಗ ಇಡೀ ರಾಜ್ಯವನ್ನೇ ಕತ್ತಲೆಯಲ್ಲಿ ಕೊಳೆಯುವಂತೆ ಮಾಡಿದ ಕೀರ್ತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ತಿವಿಯುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಅನಧಿಕೃತ ಲೋಡ್ ಶೆಡ್ಡಿಂಗ್ ಅನ್ನು ಖಂಡಿಸಿದ್ದಾರೆ.
ಕರ್ನಾಟಕದಲ್ಲಿ ಹಾಲಿ ವಿದ್ಯುತ್ ಸರಬರಾಜು, ಅನಧಿಕೃತ ಲೋಡ್ ಶೆಡ್ಡಿಂಗ್ ನಿಂದಾಗುತ್ತಿರುವ ಸಮಸ್ಯೆ ವಿಚಾರ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆಜೆ ಜಾರ್ಜ್ ಅವರನ್ನು ಉಲ್ಲೇಖಿಸಿ ಕಿಡಿ ಕಾರಿದ್ದಾರೆ.

ಸುಸ್ಥಿರವಾಗಿದ್ದ ಕರ್ನಾಟಕದ ಸ್ಥಿತಿಯನ್ನು ದುಸ್ಥಿತಿಗೆ ತಂದಿಟ್ಟ ಕೀರ್ತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಬಿಜೆಪಿ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆಯಡಿ ಮಕ್ಕಳನ್ನು ಬೆಳಕಿನೆಡೆಗೆ ತರುತ್ತಿದ್ದರೆ, ವಿದ್ಯುತ್ ಕಡಿತಗೊಳಿಸುವ ಮೂಲಕ ಮೇಣದ ಬತ್ತಿ ಬೆಳಕಿನಡಿ ಕಲಿಯುವಂತೆ ಮಾಡಿದ ಕೀರ್ತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಖಂಡಿತವಾಗಿಯೂ ನುಡಿದಂತೆ ನಡೆದ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಲ್ಲಬೇಕು!
— Pralhad Joshi (@JoshiPralhad) October 13, 2023
ಸುಸ್ಥಿರವಾಗಿದ್ದ ಕರ್ನಾಟಕದ ಸ್ಥಿತಿಯನ್ನು ದುಸ್ಥಿತಿಗೆ ತಂದಿಟ್ಟ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ.
ತಮ್ಮ ರಾಜಕೀಯ ಲಾಭಕ್ಕಾಗಿ ಉಚಿತ ಘೋಷಣೆಯನ್ನು ಮಾಡಿ ಇದೀಗ ಇಡೀ ರಾಜ್ಯವನ್ನೇ ಕತ್ತಲೆಯಲ್ಲಿ ಕೊಳೆಯುವಂತೆ ಮಾಡಿದ ಕೀರ್ತಿ ರಾಜ್ಯ… pic.twitter.com/ix32sRxzR8
8 ಗಂಟೆ ವಿದ್ಯುತ್ ಕಡಿತದ ಕೀರ್ತಿ ಕಾಂಗ್ರೆಸ್‌ಗೆ
ಬಿಜೆಪಿ ಸರ್ಕಾರವು ದಿನದ 24 ಗಂಟೆಯೂ ವಿದ್ಯುತ್ ನೀಡುತ್ತಿದ್ದರೆ, ದಿನದ 8 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಿದ ಕೀರ್ತಿ ರಾಜ್ಯ ಕಾಂಗ್ರೆಸ್ ಗೆ ಧಕ್ಕುತ್ತದೆ. ಬಿಜೆಪಿ ಸರ್ಕಾರ ರೈತರ ಪರವಾಗಿದ್ದು, ರೈತರ ಬಳಕೆಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ ಕರ್ನಾಟಕ ಕಾಂಗ್ರೆಸ್ ರಾಜ್ಯದ ರೈತರ ಬಳಕೆಗೂ ವಿದ್ಯುತ್ ಇಲ್ಲದಂತೆ ಮಾಡಿದೆ ಎಂದು ಟೀಕಿಸಿದರು.

ಕರ್ನಾಟಕವು ಅಭಿವೃದ್ಧಿಯಲ್ಲಿ ಮುಂಚೂನಿಯಲ್ಲಿತ್ತು, ಇದನ್ನು ನಾಶ ಮಾಡುವನ್ನು ಸಂಕಲ್ಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ಅವರು ಮಾಡಿದಂತಿದೆ ಎಂದು ಜೋಶಿ ತಿಳಿಸಿದರು.
ವಿದ್ಯುತ್ ಕಡಿತ: ರೈತರಿಗೆ ತೊಂದರೆ
ಸದ್ಯ ರಾಜ್ಯದಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿದೆ. ಮತ್ತೊಂದೆಡೆ ಆಗಾಗ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದೆ.
ರಾಜ್ಯದಲ್ಲಿ ಬರಗಾಲ ಉಂಟಾಗಿದ್ದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಅಷ್ಟಾಗಿ ಆಗಿಲ್ಲ ಎಂದು ಸರ್ಕಾರ ಸಬೂಬು ನೀಡಿದೆ. ವಿದ್ಯುತ್ ಅಸಮರ್ಪಕ ಪೂರೈಕೆಯಿಂದಾಗಿ ರೈತರು, ವಿಪಕ್ಷ ನಾಯಕರು ಸರ್ಕಾರದ ಮೇಲೆ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications