Power Cut Tomorrow: ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ಕರೆಂಟ್ ಕಟ್, ವಿವರ
Power Cut News: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಾಳೆ ಭಾನುವಾರ ಅಕ್ಟೋಬರ್ 26ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಮಾಹಿತಿ ನೀಡಿದೆ. ಆದ್ದರಿಂದ ವಿದ್ಯುತ್ ಪೂರೈಕೆ ನೋಡಿಕೊಂಡು ಅದಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಯೋಜಿಸಿಕೊಳ್ಳಬೇಕಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಪ್ರಕಾರ, ದಿನಾಂಕ 26.10.2025 ಭಾನುವಾರದಂದು 110 ಕೆ.ವಿ ಹಾವೇರಿ ಮತ್ತು 33 ಕೆವಿ ಕೇರಿಮತ್ತಿಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ. ಈ ಸಂಬಂಧ 110 ಕೆವಿ ಹಾವೇರಿಯಿಂದ ಹೊರಡುವ 33 ಕೆ.ವಿ ಕೇರಿಮತ್ತಿಹಳ್ಳಿ 11 ಕೆವಿ ಮಾರ್ಗಗಳು ಹಾಗೂ ಹಾವೇರಿ 110 ಕೆವಿಯಿಂದ ಹೊರಡುವ ಎಪಿಎಂಸಿ, ಡಿಸಿ ಆಫೀಸ್,ಮತ್ತು, ಮೆಡಿಕಲ್ ಕಾಲೇಜ್, ಫೀಡರ್‌ಗಳಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 06.00 ಗಂಟೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ. ವಿದ್ಯುತ್ ಸರಬರಾಜಿನ ಕಡಿತದ ಸ್ಥಳಗಳ ಮಾಹಿತಿ ಇಲ್ಲಿದೆ.

ವಿದ್ಯುತ್ ಕಡಿತದ ಪ್ರದೇಶಗಳು ಯಾವುವು?
ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಗೆ ಬರುವ ಮೆಡಿಕಲ್ ಕಾಲೇಜ್, ಡಿಸಿ ಆಫೀಸ್ ವಸತಿ ಗೃಹಗಳು, ಪತ್ರಿ ಕೋಳಿ ಪಾರಂ,, ನಾಗೇಂದ್ರನ ಮಟ್ಟಿ, ನೆಹರು ನಗರ, ಶಾಂತಿ ನಗರ, ಎಪಿಎಂಸಿ, ಉದಯ ನಗರ ವಿಜಯ ನಗರ, ವೀರಾಪುರ ರಸ್ತೆ, ಆಗಡಿ ರಸ್ತೆ, ಶಿವಬಸದ ನಗರ, ಶಿವಯೋಗಿಶ್ವರ ನಗರ, ಹೊಸ ನಗರ ನಗರ. ಆಲದಕಟ್ಟಿ, ಚಿಕ್ಕಲಿಂಗದಹಳ್ಳಿ, ದೇವಿಹೊಸೂರು, ಬೆಂಚಿಹಳ್ಳಿ, ದಿಡಗುರ, ಹಿರೇಲಿಂಗದಹಳ್ಳಿ, ನೆಲೋಗಲ್, ಹೊಂಬರಡಿ, ಹೊಸಳ್ಳಿ, ಕಬ್ಬರ್, ಕಲ್ಲಾಪುರ, ಕನಕಪುರ, ಕೇರಿಮತ್ತಿಹಳ್ಳಿ, ಸಂಗೂರ, ತೋಟದಯೆಲ್ಲಾಪುರ, ವೀರಾಪುರ, ವೆಂಕಟಾಪುರ, ಬೆನಕನಹಳ್ಳಿ, ಗೌರಾಪುರ, ಎಸ್.ಪಿ. ಆಫೀಸ್, ಕುರುಬಗೊಂಡ, ಬಿದರಗಡ್ಡಿ, ಕೋಡಿಹಳ್ಳಿ, ತಿಮ್ಮಾಪುರ, ಕುಳೆನೂರು, ಕಲ್ಲಾಪುರ, ಹೊಸೂರು ಹಾಗೂ ಸದರಿ ಫೀಡರ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಆದ್ದರಿಂದ ಸಾರ್ವಜನಿಕರು ಹಾಗೂ ಸದರಿ ಫೀಡರನ ವ್ಯಾಪ್ತಿಗೆ ಬರುವ ಕೇರಿಮತ್ತಿಹಳ್ಳಿ 11 ಕೆವಿ ಎಲ್ಲಾ ಮಾರ್ಗಗಳು ಮತ್ತು ಹಾವೇರಿ 110 ಕೆವಿಯಿಂದ ಹೊರಡುವ, ಎಪಿಎಂ ಸಿ, ಡಿಸಿ ಆಫೀಸ್, ಮತ್ತು ಮೆಡಿಕಲ್ ಕಾಲೇಜ್ ಫೀಡರ್‌ಗಳ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications