Narendra Modi: ನರೇಂದ್ರ ಮೋದಿಗೆ ಇನ್ನೊಂದು ವರ್ಷ ಶತ್ರುಬಾಧೆ: ಲೋಕಸಮರದಲ್ಲಿ ಗೆಲುವು ಯಾರಿಗೆ?: ಖ್ಯಾತ ಜ್ಯೋತಿಷಿ ಭವಿಷ್ಯ!
ಬೆಂಗಳೂರು, ಆಗಸ್ಟ್ 05: 2024 ರ ಲೋಕಸಭಾ ಚುನಾವಣೆಗೆ ಕೇವಲ 9 ತಿಂಗಳು ಮಾತ್ರ ಬಾಕಿ ಉಳಿದಿದ್ದು, ಲೋಕಸಮರಕ್ಕೆ ಮೋದಿ ವಿರುದ್ದ 26 ಮೈತ್ರಿ ಕೂಟಗಳು ಸಜ್ಜಾಗಿದ್ದು, ಹಲವು ತಂತ್ರಗಾರಿಕೆಯನ್ನ ನಡೆಸಿವೆ.
ಲೋಕಸಮರ ಸಿದ್ದತೆಯ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಜ್ಯೋತಿರ್ವಿಜ್ಞಾನದಿಂದ ತಾವು ಅರಿತ ವಿಚಾರಗಳನ್ನು ಹಂಚಿಕೊಂಡಿದ್ದು, ಮುಂದಿನ ಚುನಾವಣೆ ಸಂದರ್ಭದಲ್ಲಿ ಮೋದಿಯವರ ಶತ್ರುಗಳಿಂದ ದಂಗೆಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜಾತಕವನ್ನು ಕೂಲಂಕಷವಾಗಿ ಪರಿಶೀಲಿಸಿರುವ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಗೋಚರ ರೀತಿಯಲ್ಲಿ ಲಗ್ನ ,ಲಗ್ನದ ರಾಶ್ಯಾಧಿಪ(ಕುಜ) ಇರುವ ರಾಶಿಗೆ ಷಷ್ಟದಲ್ಲಿ ಗುರು ಸಂಚಾರ ( no option). ಶತ್ರು ಬಾಧೆ ವಿಪರೀತ. ಅವಮಾನ ಹಿಂಸೆಗಳು ಆಗುತ್ತಿರುತ್ತದೆ ಎಂದು ಹೇಳಿದ್ದಾರೆ.
ಈ ಶತ್ರು ಬಾಧೆಯೂ 2024 ಮೇ ವರೆಗೂ ಇರಲಿದೆ ಎಂದು ತಿಳಿಸಿರುವ ಅವರು, ಯಾರು ಏನೇ ತಂತ್ರಗಾರಿಕೆ ಮಾಡಿದರೂ ಅದೆಲ್ಲವನ್ನೂ ಸಮರ್ಥವಾಗಿ ತನಿಖೆಗೊಳಪಡಿಸಿ ನೋಡುವ ಜ್ಞಾನ ಪ್ರಧಾನಿಯವರಿಗೆ ಇರುವುದರಿಂದ, ಅವರ ಜಾತಕದಲ್ಲಿ ಗ್ರಹಗಳ ಸೂಕ್ತ ಬೆಂಬಲವೂ ಇರುವುದಿರಂದ ಮುಂದಿನ ಚುನಾವಣೆಯಲ್ಲಿ ಅವರೇ ಗೆಲುವು ಸಾಧಿಸುತ್ತಾರೆ ಎಂದೂ ಹೇಳಿದ್ದಾರೆ.
ನಮಗೆ ಮಾತ್ರ ಭಯ ಆಗುತ್ತಿದೆ ಅಷ್ಟೆ. ಮುಂದಿನ ಚುನಾವಣೆಯ ಸಂದರ್ಭದಲ್ಲಿ ವೃಷಭ ಗುರುವು ಕನ್ಯಾರಾಶಿ ವೀಕ್ಷಣೆ, ಲಗ್ನವೀಕ್ಷಣೆ, ತೃತೀಯ ವೀಕ್ಷಣೆ, ಸಪ್ತಮ ಸ್ಥಿತಿಯಲ್ಲಿ ಲಾಭದಾಯಕನಾಗುತ್ತಾನೆ. ಶತ್ರುಗಳು ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲೋದು ಎಂದು ತೊಡೆ ತಟ್ಟಿದರೂ ಗೆಲುವು ಮೋದಿಯದ್ದೆ. ಯಾಕೆಂದರೆ ಈ ಶತ್ರುಗಳು ಈಗಿನ ಮೋದಿಯವರ ಜಾತಕದಲ್ಲಿ (ಷಷ್ಟ ಗುರು) ಗೋಚರ ಪ್ರಕಾರ ಗಲಭೆ ಎಬ್ಬಿಸುವಂತದ್ದು ತಾರಕಕ್ಕೇರಬಹುದು ಎಂದು ಹೇಳಿದ್ದಾರೆ.
ವಿಪಕ್ಷಗಳಿಗೆ ಅಧಿಕಾರ ಬರಲು ಸಾಧ್ಯವೇ ಇಲ್ಲ!
ಕೊನೆಯ ಅಸ್ತ್ರ ಕೋಮು ಗಲಭೆ, ಬೆಂಕಿ ಬಾಂಬ್ ಇತ್ಯಾದಿಗಳ ಮೂಲಕ ಭೀಕರ ಸಮಸ್ಯೆ ತರಬಹುದು. ಮೋದಿಯವರು ಸಾವಧಾನದಿಂದ ಗಲಭೆಗಳ ಮೂಲ ಶೋಧಿಸಿ ಪ್ರಜೆಗಳ ಮುಂದೆ ಇಟ್ಟೇ ಇಡುತ್ತಾರೆ. ಇದುವೇ ಅದ್ಭುತ ಗೆಲುವಿಗೆ ಕಾರಣವೂ ಆಗುತ್ತದೆ. ವಿಪಕ್ಷಗಳಿಗೆ ಅಧಿಕಾರ ಬರಲು ಸಾಧ್ಯವೇ ಇಲ್ಲ. ಈಗಿನ ವಿದ್ಯಾಮಾನ( ಗಲಭೆಗಳಿಗೆ)ಕೇವಲ ಮೋದಿಯ ಜಾತಕದ ಗೋಚರ ಎಂದು ಹೇಳಲಾಗದು.
ಸ್ವಾತಂತ್ರ್ಯ ಲಭಿಸುವ ಸಂದರ್ಭದ ಗ್ರಹ ಸ್ಥಿತಿಯಲ್ಲಿ ಕರ್ಕರಾಶಿಯಲ್ಲಿ ಶನಿ ಇದ್ದ. ಈಗ ಅದೇ ಶನಿಗೆ ಮಂದಾಷ್ಟಮ( ಕುಂಭ) ಶನಿ ಇರುವುದರಿಂದ ಉಂಟಾಗುವ ಗಲಾಟೆಗಳನ್ನು ನೋಡುವ, ನಿಭಾಯಿಸುವ, ಅನುಭವಿಸುವ ಯೋಗ ಮೋದಿಗೂ ಇರೋದ್ರಿಂದ ಗಾಬರಿಯಾಗಬೇಕಿಲ್ಲ. ಇದು ಮುಂದಿನ ದಿನಗಳಲ್ಲಿ ಪ್ರಧಾನಿಯಾಗಿ ಬರುವ ಸನ್ಯಾಸಿಯೊಬ್ಬರಿಗೆ ಉತ್ತಮ ಆಹಾರ ಸಿಕ್ಕಿದಂತಾಗುತ್ತದೆ. ಬಹುಷಃ ಅತ್ಯಾಧುನಿಕ ಬುಲ್ಡೋಜರ್ ಗಳನ್ನು ಆ ಸನ್ಯಾಸಿಯು ಈಗಲೇ order ಮಾಡುವುದು ಒಳ್ಳೆಯದು. ಇದು ನನ್ನ ಪ್ರೆಡಿಕ್ಷನ್ (prediction )ಅಲ್ಲ.ಪ್ರಕೃತಿಯ ಪ್ರೆಡಿಕ್ಷನ್(prediction ) ಎಂದು ಜ್ಯೋತಿಷಿ ಹೇಳಿದ್ದಾರೆ.












Click it and Unblock the Notifications