Get Updates
Get notified of breaking news, exclusive insights, and must-see stories!

PM Kisan: ಯುಗಾದಿ ಹಬ್ಬಕ್ಕೆ ಕರ್ನಾಟಕ ರೈತರಿಗೆ ಸಿಹಿ ಸುದ್ದಿ, ಸರ್ಕಾರದಿಂದ ಇಂದು 2ನೇ ಕಂತಿನ ಹಣ ಬಿಡಗಡೆ

ಕರ್ನಾಟಕ ರಾಜ್ಯದ ರೈತರಿಗೆ ಯುಗಾದಿ ಹಬ್ಬದ ಮುನ್ನಾ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅರ್ಹ ಫಲಾನುಭವಿಗಳು ನಿಮ್ಮ ಖಾತೆ ಪರಿಶೀಲಿಸಿಕೊಳ್ಳಿ.

ಬೆಂಗಳೂರು, ಮಾರ್ಚ್ 21: ಕರ್ನಾಟಕ ರಾಜ್ಯದ ರೈತರಿಗೆ ಯುಗಾದಿ ಹಬ್ಬದ ಮುನ್ನಾ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅರ್ಹ ಫಲಾನುಭವಿ ರೈತರಿಗೆ ನೀಡುವ ಆರ್ಥಿಕ ಸಹಾಯ ಇಂದು ಮಂಗಳಾವಾರ ಮಾರ್ಚ್ 21ರಂದು ಲಕ್ಷಾಂತರ ರೈತರ ಕೈ ಸೇರಲಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan) ಅಡಿಯಲ್ಲಿ ಕೇಂದ್ರ ಸರ್ಕಾರದಂತೆ ಕರ್ನಾಟಕ ಸರ್ಕಾರವು ರಾಜ್ಯದ ಅರ್ಹ ಫಲಾನುಭವಿಗಳಿಗೆ ತಲಾ 2000ರೂಪಾಯಿಯಂತೆ ಧನ ಸಹಾಯ ನೀಡುತ್ತಿದೆ. ಪ್ರಸಕ್ತ ಸಾಲಿನ ಯೋಜನೆಯ ಕಂತಿನ ಬಗ್ಗೆ ಸರ್ಕಾರದ ಮಹತ್ವದ ಘೋಷಣೆ ಮಾಡಿದೆ.

PM Kisan: CM Bommai to release Rs 975 Cr 2nd installment of PM-KISAN benefiting 48.75 lakh farmers

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಸಕ್ತ 2022-2023 ನೇ ಸಾಲಿನ ಎರಡನೇ ಕಂತಿನ ಹಣ ನಾಲ್ಕೂವರೆ ಮಿಲಿಯನ್‌ಗೂ ಹೆಚ್ಚು ರೈತರಿಗೆ 975 ಕೋಟಿ ರೂಪಾಯಿ ಹಣ ಮಂಗಳವಾರ ಬಿಡುಗಡೆಯಾಗುತ್ತಿದೆ. ಬಿಜೆಪಿಯ ಉದ್ದೇಶದಂತೆ ಮಧ್ಯವರ್ತಿಗಳ ಹಾವಳಿ ಇಲ್ಲದೇ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (DBT) ಜಮೆಯಾಗುತ್ತದೆ.

ಈ ಕುರಿತು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಅರ್ಹ ರೈತರಾದ ಒಟ್ಟು 48,75,000 ಮಂದಿಗೆ 975 ಕೋಟಿ ರೂಪಾಯಿ ಹಣ ಈ ಸಾಲಿನ ಎರಡನೇ ಕಂತಿನ ರೂಪದಲ್ಲಿ ಪಾವತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

PM Kisan: CM Bommai to release Rs 975 Cr 2nd installment of PM-KISAN benefiting 48.75 lakh farmers

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವರ್ಷಕ್ಕೆ ಮೂರು ಕಂತಿನಂತೆ ಒಟ್ಟು 6,000 ರೂಪಾಯಿ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' ಯೋಜನೆಯನ್ನು ಜಾರಿಗೆ ತಂದಿತು. ಇದರ ಬೆನ್ನಲ್ಲೆ ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರವು ವಾರ್ಷಿಕವಾಗಿ ಎರಡು ಕಂತುಗಳಂತೆ ಅರ್ಹರಿಗೆ ಒಟ್ಟು 4,000 ರೂಪಾಯಿ ನೀಡುವುದಾಗಿ ಘೋಷಿಸಿತು.

ಇನ್ನೂ ಕರ್ನಾಟಕದಲ್ಲಿ 2019-20ನೇ ಸಾಲಿನಿಂದ ಈವರೆಗೆ ಸರ್ಕಾರ ನೀಡಿದ ಹಣ, ಅರ್ಹಫಲಾನುಗಳ ಅಂಕಿ-ಸಂಖ್ಯೆ ಮಾಹಿತಿ ಈ ಕೆಳಗಿನಂತಿದೆ.

2019-2020ನೇ ಸಾಲಿನಲ್ಲಿ ಒಟ್ಟು 45,28,735 ರೈತರಿಗೆ 905.75 ಕೋಟಿ ರೂಪಾಯಿ ಹಣ ಎರಡು ಕಂತುಗಳಲ್ಲಿ ನೀಡಲಾಗಿದೆ. ಇನ್ನೂ 2020-2021ನೇ ವರ್ಷದಲ್ಲಿ 49,18,973 ಮಂದಿ ರೈತರಿಗೆ 983.79 ಕೋಟಿ ರೂಪಾಯಿಯನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ.

ಇನ್ನೂ 2021-2022ರ ವರ್ಷದಲ್ಲಿ ರಾಜ್ಯ ಸರ್ಕಾರ 50,35,650 ಕೃಷಿಕರಿಗೆ 1,975.12 ಕೋಟಿ ರೂಪಾಯಿಯನ್ನು ವಿತರಿಸಿತ್ತು. ಇನ್ನೂ ಮುಗಿಯಲಿರುವ ಪ್ರಸಕ್ತ ವರ್ಷ 2022-2023 ಸಾಲಿನ ಮೊದಲ ಕಂತು 47, 83,562 ಅರ್ಹ ಫಲಾನುಭವಿಗಳಿಗೆ 956.71 ಕೋಟಿ ರೂಪಾಯಿ ಹಣವನ್ನು ನೀಡಿದೆ. ಸದ್ಯ ಇದೇ ಸಾಲಿನ ಎರಡನೇ ಕಂತಿನ ಹಣ 48,75,000 ಮಂದಿಗೆ 975 ಕೋಟಿ ರೂಪಾಯಿ ಇಂದು ಮಾರ್ಚ್ 21ರಂದು ತಲುಪಲಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಬ್ಯಾಂಕ್ ಖಾತೆ ಪರಿಶೀಲನೆ ಹೇಗೆ?

ಫಲಾನುಭವಿಗಳು ಮೊದಲು ಅಧಿಕೃತ ಜಾಲತಾಣ https://pmkisan.gov.in/beneficiarystatus.aspx ಕ್ಕೆ ಭೇಟಿ ನೀಡಿ. ನಿಮ್ಮ PM ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ಸ್ಟೇಟಸ್‌ ಅನ್ನು ಪರೀಕ್ಷಿಸಲು ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ. ಅಗತ್ಯಗನುಗುಣವಾಗಿ ಟ್ಯಾಬ್ ಆಯ್ಕೆ ಮಾಡಿಕೊಳ್ಳಿ. ಅಗತ್ಯ ಮಾಹಿತಿ ಒದಗಿಸಿ. ಬಳಿಕ ಅಲ್ಲಿರುವ 'ಡೇಟಾ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಬಂದಿದೆಯಾ ಇಲ್ಲವೇ ಎಂಬುದು ತಿಳಿಯುತ್ತದೆ. y

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+