'ಬ್ರಾಹ್ಮಣ ಸಿಎಂ' ಪರ ಪೇಜಾವರ, ಮಂತ್ರಾಲಯ ಶ್ರೀಗಳ ಬ್ಯಾಟಿಂಗ್- ಬಿಜೆಪಿಗೆ ಸಂಕಷ್ಟ? ಮತ್ತೆ ಹೇಳಿಕೆ ಸಮರ್ಥಿಸಿಕೊಂಡ ಎಚ್‌ಡಿಕೆ
'ಬ್ರಾಹ್ಮಣ ಸಿಎಂ' ಪರ ಪೇಜಾವರ, ಮಂತ್ರಾಲಯ ಶ್ರೀಗಳ ಬ್ಯಾಟ್ ಬೀಸಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಆದರೆ, ಇದು ಬಿಜೆಪಿಗೆ ಸಂಕಷ್ಟವನ್ನು ತಂದೊಡ್ಡಿದೆ. ಈ ಬೆಳವಣಿಗೆ ಕರ್ನಾಟಕದ ಚುನಾವಣೆ ಮೇಲೆಯೂ ಪರಿಣಾಮ ಬೀರಲ
ಬೆಂಗಳೂರು, ಫೆಬ್ರವರಿ 08: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಅತಿ ದೊಡ್ಡ ಸಂಚಲನ ಮೂಡಿಸಿದೆ. ತಮ್ಮ ಮಾತನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಎಚ್‌ಡಿಕೆ, 'ನಾನು ಕೆಲವು ವೈಯಕ್ತಿಕ ಟೀಕೆಗಳನ್ನು ಮಾಡಿದ್ದೇನೆ. ಆದರೆ ಯಾವುದೇ ಸಮುದಾಯವನ್ನು ಟೀಕಿಸಿಲ್ಲ. ಅವರು (ಪ್ರಲ್ಹಾದ್ ಜೋಶಿ) ಮಹಾತ್ಮ ಗಾಂಧಿ ಮತ್ತು ಮರಾಠಾ ದೊರೆ ಶಿವಾಜಿಯನ್ನು ಕೊಂದ ಸಮುದಾಯಕ್ಕೆ ಸೇರಿದವರು ಎಂದು ನಾನು ಮಾತನಾಡಿದ್ದೇನೆ. ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ' ಎಂದು ತಿಳಿಸಿದ್ದಾರೆ.

ಬ್ರಾಹ್ಮಣರನ್ನು ಅವಮಾನಿಸುವ ಹಿನ್ನೆಲೆ ಹೊಂದಿಲ್ಲ
'ನಾನು ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ಸಾರ್ವಜನಿಕರ ಅಹವಾಲು ಆಲಿಸಿದಾಗ ಅವರು ಯಾವ ಜಾತಿಯವರು ಎಂದು ಕೇಳುವುದಿಲ್ಲ. ಮೊದಲಿನಿಂದಲೂ ನಮ್ಮ ಕುಟುಂಬ ಎಲ್ಲ ಸಮುದಾಯಗಳನ್ನು ಗೌರವಿಸುತ್ತಿದೆ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಾನು ಯಾವುದೇ ಸಮುದಾಯವನ್ನು ಅದರಲ್ಲೂ ಬ್ರಾಹ್ಮಣರನ್ನು ಅಥವಾ ದಲಿತರನ್ನು ಅವಮಾನಿಸುವ ಹಿನ್ನೆಲೆ ಹೊಂದಿಲ್ಲ. ಈ ದೇಶದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಅಥವಾ ಶಾಸಕರಾಗಬಹುದು. ವಿವಿಧ ಜಾತಿ, ಮತಗಳ ಸಂಸದರು ಮತ್ತು ಶಾಸಕರಿದ್ದಾರೆ. ಆದರೆ ಜನಾಭಿಪ್ರಾಯಕ್ಕೆ ನಾವು ತಲೆಬಾಗಬೇಕು' ಎಂದೂ ಹೇಳಿದ್ದಾರೆ.

ಸಮಾಜವನ್ನು ಒಡೆಯುವ ಬ್ರಾಹ್ಮಣರ ಪಂಗಡದ ಜೋಶಿ
ಜೋಶಿಯವರು ಸಮಾಜವನ್ನು ಒಡೆಯುವ ಅಸಂಸ್ಕೃತ ಬ್ರಾಹ್ಮಣರ ಪಂಗಡಕ್ಕೆ ಸೇರಿದವರು. ದಕ್ಷಿಣ ಭಾರತೀಯ ಸಂಪ್ರದಾಯಗಳನ್ನು ಪ್ರತಿನಿಧಿಸುವುದಿಲ್ಲ. ಜೋಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕರ್ನಾಟಕವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಪ್ರಹ್ಲಾದ್ ಜೋಶಿ ಅವರು ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಪಂಗಡಕ್ಕೆ ಸೇರಿದವರು ಎಂದು ಎಚ್‌ಡಿಕೆ ಹೇಳಿಕೆ ನೀಡಿದ್ದಾರೆ.

ಕೆಂಡವಾದ ಬಿಜೆಪಿ ನಾಯಕರು
ಚುನಾವಣೆ ಹೊಸ್ತಿಲಲ್ಲೇ ಎಚ್‌ಡಿಕೆ ಅವರ ಈ ಹೇಳಿಕೆಯು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಪ್ರಬಲ ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಇದು ಸಂಕಷ್ಟವನ್ನು ತಂದೊಡ್ಡಿದೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಬಿಜೆಪಿ ಪ್ರಮುಖ ನಾಯಕರಾದ ಸಿಟಿ ರವಿ, ರವಿಕುಮಾರ್ ಸೇರಿದಂತೆ ಹಲವು ನಾಯಕರು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೇಜಾವರ ಶ್ರೀಗಳ ಸ್ವಾಮೀಜಿ ಅಸಮಾಧಾನ
ಮಂಡ್ಯದ ಮದ್ದೂರಿನಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಎಚ್‌ಡಿಕೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಬ್ರಾಹ್ಮಣರ ಮೇಲಿನ ಅಗೌರವದ ಹೇಳಿಕೆ ಎಂದಿದ್ದಾರೆ. ಬ್ರಾಹ್ಮಣ ಮುಖ್ಯಮಂತ್ರಿಯಾದರೆ ಆಗಲಿ. ಬ್ರಾಹ್ಮಣರೇ ಏಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿದ್ದಾರೆ. ಅವರು ಭಾರತದ ಪ್ರಜೆಗಳಲ್ಲವೇ ಎಂದು ಕೇಳಿದ್ದಾರೆ. ಮಹಾತ್ಮ ಗಾಂಧೀಜಿಯವರ ಹತ್ಯೆಯ ವಿಚಾರವಾಗಿ ಪ್ರತಿಕ್ರಿಯಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, 'ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಪ್ರಜಾಪ್ರಭುತ್ವ ಹೊಂದಿರುವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು ಎಂದಿದ್ದಾರೆ.

ಮಂತ್ರಾಲಯ ಶ್ರೀ ಹೇಳಿದ್ದೇನು?
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮಿಗಳು ಮಂಗಳವಾರ ಮಾತನಾಡಿ, ‘ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದರೆ ಬ್ರಾಹ್ಮಣರು ಮುಖ್ಯಮಂತ್ರಿಯಾಗಲು ಯಾವುದೇ ವಿರೋಧವಿರುವುದಿಲ್ಲ. ಒಂದು ಸಮುದಾಯದ ಜನರು ಪ್ರಮುಖ ಹುದ್ದೆಗಳನ್ನು ಅಲಂಕರಿಸಬಾರದು ಎಂದು ಹೇಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ಜನರು ಮತ್ತು ಪಕ್ಷಗಳು ನಿರ್ಧರಿಸುತ್ತವೆ' ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಜೆಡಿಎಸ್‌ನ ಪಂಚರತ್ನ ಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, 'ಅವರು ಅದನ್ನು (ಪಂಚಾರತ್ನ ಯಾತ್ರೆ) ಎಂದು ಏಕೆ ಹೆಸರಿಸಿದರು ಎಂದು ನನಗೆ ಗೊಂದಲವಾಯಿತು. ಏಕೆಂದರೆ, ದೇವೇಗೌಡರು, ಅವರ ಇಬ್ಬರು ಮಕ್ಕಳು, ಅವರ ಪತ್ನಿಯರು, ಅವರ ಇಬ್ಬರು ಮಕ್ಕಳು... ನಾನು ಒಟ್ಟು ಒಂಬತ್ತು (ಕುಟುಂಬದ ಸದಸ್ಯರು) ಎಣಿಸಿದ್ದೇನೆ. ಅದಕ್ಕೆ ನವಗ್ರಹ ಯಾತ್ರೆ ಎಂದು ಹೆಸರಿಡಬೇಕಿತ್ತು' ಎಂದು ಜೋಶಿ ವ್ಯಂಗ್ಯವಾಡಿದ್ದರು.












Click it and Unblock the Notifications