JDS-BJP Alliance: ಯಾವ ಶಕ್ತಿಯೂ ಕಾಂಗ್ರೆಸ್ ತಡೆಯಲು ಸಾಧ್ಯವಿಲ್ಲ: ಪರಮೇಶ್ವರ್ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 11: ರಾಜ್ಯದಲ್ಲಿ ಬಿಜೆಪಿ ವೀಕ್ ಆಗಿದೆ. ಹೀಗಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ, ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಹೆದರಿಸಲು ಹೊರಟಿದ್ದಾರೆ. ಯಾವ ಶಕ್ತಿ ಬಂದ್ರು ಕಾಂಗ್ರೆಸ್ ತಡೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ ಬಾರಿ ಬಿಜೆಪಿ ಯಾರ ಜೊತೆಗೂ ಮೈತಿ ಮಾಡಿಕೊಂಡಿರಲಿಲ್ಲ. ಗೆದ್ದು ಬಿಡ್ತೇವೆ ಅಂತ ಕಳೆದ ಬಾರಿ ಗೆಲುವು ಸಾಧಿಸಿದ್ರು. ಈಗ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಅಂದ್ರೆ ವೀಕ್ ಆಗಿದ್ದಾರೆ ಅಂತ ಅಲ್ವಾ? ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಹೆದರಿಸಲು ಹೊರಟಿದ್ದಾರೆ ಎಂದರು.

ಕಾಂಗ್ರೆಸ್ ಗಟ್ಟಿಯಾಗಿದೆ ಅಂತ ಅವರೆ ಹೇಳುತ್ತಿದ್ದಾರೆ. ನಾವು ರೆಡಿಯಾಗಿದ್ದೇವೆ. ಬಹಳ ವರ್ಷದಿಂದ ಕಾಂಗ್ರೆಸ್ ಇಂತಹದ್ದು ನೋಡಿಕೊಂಡು ಬಂದಿದೆ. ಯಾವ ಶಕ್ತಿ ಬಂದ್ರು ಕಾಂಗ್ರೆಸ್ ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ನಿರ್ನಾಮ ಮಾಡುತ್ತೇವೆ ಅನ್ನೋದು ಸಾಧ್ಯವಿಲ್ಲ ಎಂದು ಹೇಳಿದರು.
ಬಿಕೆ ಹರಿಪಸ್ರಾದ್ ಹೇಳಿಕೆ ಕುರಿತು ಮಾತನಾಡಿ, ಅದು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ, ನಾನು ಕಾಮೆಂಟ್ ಮಾಡುವುದು ಏನಿದೆ. ನನ್ನ ಬಗ್ಗೆ ಹೇಳಿದ್ದಾರೆ ಅವರಿಗೆ ಅಭಿನಂದನೆ, ಎಲ್ಲವೂ ವರಿಷ್ಠರ ಹಂತದಲ್ಲಿ ಚರ್ಚೆ ಆಗುತ್ತದೆ. ಹೈಕಮಾಂಡ್ ಕೂಡ ಹೇಳಿಕೆ ಗಮನಿಸಿದೆ ಎಂದು ಹೇಳಿದರು.
ಇನ್ನೂ 2019 ರ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡರನ್ನು ನಾನು ತುಮಕೂರಿಗೆ ಕರೆದುಕೊಂಡು ಹೋಗಿಲ್ಲ. ಅವರು ಐದು ಸೀಟ್ ಕೇಳಿದ್ರು, ಕಾಂಗ್ರೆಸ್ ವರಿಷ್ಠರು ಕೊಟ್ಟಿದ್ದರು. ಅವರೆ ತುಮಕೂರನ್ನು ಆಯ್ಕೆ ಮಾಡಿಕೊಂಡಿದ್ದರು. ಅವರು ಬೇಕಿದ್ರೆ ಹೇಳಲಿ ಆರಿಸಿಕೊಂಡಿಲ್ಲ ಅಂತ. ನಾನು ಗೆಲ್ಲಿಸಲು ಬಹಳ ಪ್ರಯತ್ನ ಮಾಡಿದ್ದೇನೆ, ನಮಗೆ ಅವರು ಗೆದ್ದಿದ್ರೆ ಬಹಳ ಖುಷಿ ಆಗ್ತಾ ಇತ್ತು
ದುರ್ದೈವ ಅವರು ಗೆಲ್ಲಲಿಲ್ಲ. ಅವರನ್ನು ಕರೆದುಕೊಂಡು ಹೋಗಿದ್ದು ತಪ್ಪೆನಿದೆ ಎಂದು ಪ್ರಶ್ನಿಸಿದರು.
ತುಮಕೂರಿನಲ್ಲಿ ಈ ಹಿಂದೆ ನಾನೇ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದೆ. ಕೆಲವರು ಚುನಾವಣೆಯಲ್ಲಿ ಕೆಲಸ ಮಾಡುತ್ತಾರೆ, ನಮ್ಮಲ್ಲೆ ಇದ್ದುಕೊಂಡು ಮೋಸ ಮಾಡುತ್ತಾರೆ. ಕೆಲವರು ಹೊರಗಡೆಯಿಂದ ಮೋಸ ಮಾಡುತ್ತಾರೆ. ಸ್ವತಃ ನನಗೆ ಆ ಅನುಭವ ಆಗಿದೆ, ಬಿಜೆಪಿಯ ಅಧಿಕೃತ ಬಿ ಟೀಮ್ ಆಗಿ ಜೆಡಿಎಸ್ ಆಗಿದೆ ಎಂದು ಹೇಳಿದರು.
ಸಚಿವ ಡಿ. ಸುಧಾಕರ್ ಭೇಟಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಬಂದು ಭೇಟಿ ಮಾಡಿದ್ದಾರೆ. ಯಾವ ಕೇಸ್ ಅಂತ ಗೊತ್ತಿಲ್ಲ, ನಾನು ಈಗ ವಿಚಾರ ಮಾಡುತ್ತೇನೆ
ಯಾರೋ ಬಂದು ದೂರು ಕೊಟ್ಟಾಗ ಎಫ್ ಐಆರ್ ಮಾಡುವುದು ಸಹಜ. ಯಾವ ಕಾರಣಕ್ಕೆ ಎಫ್ ಐಆರ್ ಹಾಕಿದ್ದಾರೆ. ಒಬ್ಬ ಸಚಿವರ ಮೇಲೆ ಎಫ್ ಐರ್ ಹಾಕಲು ಆಧಾರ ಇರಬೇಕು.
ಅದೇನು ಅಂತ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications