ಚನ್ನಪಟ್ಟಣ ಟಿಕೆಟ್ ಫೈಟ್; ಎನ್‌ಡಿಎ ಅಭ್ಯರ್ಥಿ ಯಾರು? ನಿಖಿಲ್ ಕುಮಾರಸ್ವಾಮಿ ಏನಂದ್ರು?
ತುಮಕೂರು, ಆಗಸ್ಟ್ 30: ರಾಜ್ಯದ ಜನತೆ ಜೆಡಿಎಸ್ ಬಿಜೆಪಿ ಮೈತ್ರಿಯನ್ನ ಒಪ್ಪಿದ್ದಾರೆ. ಟಿಕೆಟ್ ವಿಚಾರದಲ್ಲಿ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ.ಈ ವಿಚಾರದಲ್ಲಿ ಚರ್ಚೆಗಳು ಆಗಬೇಕಾಗುತ್ತೆ. ಆಗ ಫಲಿತಾಂಶ ನಮ್ಮ ಪರ ಬರಲು ಸಾಧ್ಯ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂತಿಮವಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ NDA ಅಭ್ಯರ್ಥಿ ಸ್ಪರ್ಧಿಸುತ್ತಾರೆ. ಜೆಡಿಎಸ್ ಬಿಜೆಪಿ ಚರ್ಚೆಯಿಲ್ಲ ನಾವು ಒಟ್ಟಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ಹಾಗಾಗಿ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ಕಣದಲ್ಲಿ ಇರಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್ ಗೆ ಹುಮ್ಮಸ್ಸು ಬಂದಿದೆ.ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಮೈತ್ರಿ ಒಪ್ಪಿದ್ದಾರೆ.ಹೆಚ್ಚು ಸಂಸದರನ್ನ ಆಯ್ಕೆ ಮಾಡಿ ಪ್ರಧಾನಿ ಮೋದಿ ಅವರಿಗೆ ಕೊಡುಗೆ ನೀಡಿದ್ದಾರೆ. ಸ್ಥಳೀಯ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನಾವು ಒಟ್ಟಾಗಿ ಹೋಗುತ್ತೇವೆ ಎಂದರು.
ಪಕ್ಷದ ಬಲವರ್ಧನೆ ಮತ್ತು ಪಕ್ಷದ ಸಂಘಟನೆ ಮಾಡಲು ಒತ್ತು ನೀಡಿದ್ದೇವೆ.ನಮ್ಮ ಪಕ್ಷದ ವರಿಷ್ಠರು, ಮಾಜಿ ಪ್ರಧಾನಿ ದೇವೇಗೌಡರು ಸದಸ್ಯತ್ವ ನೊಂದಣಿ ಹಾಗೂ ಬೂತ್ ಕಮಿಟಿ ರಚನೆ ಮಾಡಬೇಕೆಂದು ಕನಸುಗಳನ್ನ ಕಂಡು ಆದೇಶ ಹೊರಡಿಸಿದ್ದರು. ಹಾಗೆಯೇ ಕೇಂದ್ರ ಸಚಿವರಾದ ಕುಮಾರಣ್ಣ ಅವರ ಆದೇಶದ ಮೇರೆಗೆ ಇಂದು ತುಮಕೂರಿನಲ್ಲಿ ಪಕ್ಷದ ಸದಸ್ಯತ್ವ ನೊಂದಣಿಗೆ ಚಾಲನೆ ನೀಡಿದ್ದೇವೆ ಎಂದರು
ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಪಕ್ಷದ ನೊಂದಣಿ ಹಾಗೂ ಬೂತ್ ಮಟ್ಟದ ಸಮಿತಿಯ ಮೊದಲ ಸಭೆಯನ್ನ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಭವಿಷ್ಯದಲ್ಲಿ 25-30 ವರ್ಷಗಳ ಕಾಲ ಸದೃಢವಾಗಿ ಪಕ್ಷ ವನ್ನು ಕಟ್ಟಿ ಬೆಳೆಸಬೇಕು, ದೇವೇಗೌಡರು ಮತ್ತು ಕುಮಾರಣ್ಣನ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟಿ ಹಳ್ಳಿ ಹಳ್ಳಿ ಗಳಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದ್ದಿದ್ದಿರಿ, ಪ್ರತಿಯೊಬ್ಬರನ್ನು ಗುರುತಿಸಿ, ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರಿಗೆ ಮುಂಬರುವ ಚುನಾವಣೆಗಳಲ್ಲಿ ಅವಕಾಶಗಳನ್ನ ಕೊಡಲಾಗುತ್ತೆ, ಹಾಗೆಯೇ ಪಕ್ಷದ ಕಡೆಯಿಂದ ಗೌರವ ಕೊಡಲಾಗುತ್ತದೆ ಎಂದರು.
ಕುಮಾರಣ್ಣ ಅವರು ಕೇಂದ್ರ ಸಚಿವರಾದ ಬಳಿಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು, ಹೊಸ ಹುಮ್ಮಸ್ಸು ಪ್ರಾರಂಭವಾಗಿದೆ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಶಕ್ತಿ ಇದೇ. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ 9 ಶಾಸಕರನ್ನ ಆಯ್ಕೆ ಮಾಡಿರುವ ಇತಿಹಾಸ ಇವತ್ತು ಕಣ್ಮುಂದೆ ಇದೆ. ಕಳೆದ ವಿಧಾನ ಸಭಾ ಚುನಾವಣೆ ಯಲ್ಲೂ ಕೂಡ ಶಾಸಕರು ಹೆಚ್ಚಾಗಿ ಗೆಲ್ಲದೆ ಇರಬಹುದು ಆದರೆ ಇವತ್ತು ನಂಬರ್ 1 ಸ್ಥಾನ ಜಿಲ್ಲೆಯ ಜನತೆ ಆಶೀರ್ವಾದ ಅತೀ ಹೆಚ್ಚು ಮತಗಳು ಜನತಾದಳ ಪಕ್ಷದ ಪರವಾಗಿಲ್ಲ ಕೃಡಿಕರಿಸಿದೆ.
2018ರ ಕಾಂಗ್ರೆಸ್ ಪಕ್ಷ, ರಾಷ್ಟೀಯ ಕಾಂಗ್ರೆಸ್ ನಾಯಕರು ಯಾರು ಮನೆ ಬಾಗಿಲಿಗೆ ಬಂದಿದ್ದರು. ಕುಮಾರಣ್ಣ ಅವರನ್ನ 5ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ, ನಾವೆಲ್ಲರೂ ನಿಮಗೆ ಸಹಕಾರ ಕೊಡುತ್ತೇವೆ ಎಂದು ಕುಮಾರಣ್ಣಗೆ ಮಾತುಕೊಟ್ರು, ಆದರೆ ತುಮಕೂರು ಜಿಲ್ಲೆಯಲ್ಲಿ ದೇವೇಗೌಡರನ್ನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸಿ ಕತ್ತು ಕೊಯ್ಯುವ ಕೆಲಸ ಮಾಡಿದ್ದಾರೆ. ಆದ್ರೆ ಜೆಡಿಎಸ್ ಬಿಜೆಪಿ ಪಕ್ಷ ಒಗ್ಗಟ್ಟಗಿ ತುಮಕೂರು ವಿ ಸೋಮಣ್ಣ ಅವರನ್ನ ಕೇಂದ್ರ ಸಚಿವರನನ್ನಾಗಿ ಮಾಡಿದ್ದಾರೆ. ನಿಮ್ಮೆಲ್ಲರ ಹೋರಾಟ ಪ್ರತಿಫಲ ಜೆಡಿಎಸ್ ಪಕ್ಷ ಹಳೇ ಮೈಸೂರು ಪ್ರಾಂತ್ಯದಲ್ಲಿ 14 ಲೋಕಸಭಾ ಕ್ಷೇತ್ರದಲ್ಲಿ 12 ಕ್ಷೇತ್ರಗಳಲ್ಲಿ NDA ಅಭ್ಯರ್ಥಿಗಳು ಗೆದ್ದಿದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮಿತೃತ್ವವನ್ನ ರಾಜ್ಯದ ಜನತೆ ಒಪ್ಪಿ ಸಹಿ ಹಾಕಿದ್ದಾರೆ.
ಪಕ್ಷದ ಸಂಘಟನೆ ಅಂತ ಬಂದಾಗ ಬಿಜೆಪಿ ಪಕ್ಷದ ತನ್ನದೇ ಆದ ಸಂಘಟನೆ ಮುದುವರೆಸಿದ್ದಾರೆ. ಜನತಾದಳ ಪಕ್ಷವು ಕೂಡ ಸಂಘಟನೆಯಲ್ಲಿ ಹೆಚ್ಚು ಒತ್ತು ಕೊಟ್ಟು ಮುಂಬರುವ ಬಿಬಿಎಂಪಿ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಆಸ್ತಿತ್ವ ಉಳಿಸಿಕೊಳ್ಳವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.
ಪಕ್ಷ ನಮಗೆ ಸಾಕಷ್ಟು ಕೊಟ್ಟಿದೆ, ನಾವು ಪಕ್ಷಕ್ಕೆ ಏನು ಕೊಟ್ಟಿದೀವಿ ಅನ್ನುವುದು ಮುಖ್ಯ. ಆಗಾಗಿ ನಾನು ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ನಿಮ್ಮ ಜೊತೆ ನಾವೆಲ್ಲರೂ ನಿಲುತ್ತೇವೆ. ಜಿಲ್ಲೆಯಲ್ಲೂ ಪ್ರವಾಸ ಮಾಡುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ಕೊಟ್ಟರು ಅವರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಅವರು, ಹಿರಿಯರು ನಾಯಕರಾದ ಕುಣಿಗಲ್ ಡಿ. ನಾಗರಾಜಯ್ಯ ಅವರು, ಮಾಜಿ ಶಾಸಕರಾದ ವೀರಭದ್ರಯ್ಯ ಅವರು, ಸುಧಾಕರ್ ಲಾಲ್ ಅವರು, ಹೆಚ್ ನಿಂಗಪ್ಪ ಅವರು, ಹರಿಹರ ತುಮಕೂರು ಜಿಲ್ಲಾ ಜಿಲ್ಲಾಧ್ಯಕ್ಷರಾದ ಆಂಜಿನಪ್ಪ ಅವರು, ಬೆಂಗಳೂರು ಗ್ರಾಮೀಣ ವಿಭಾಗದ ಮೇಲುಸ್ತುವಾರಿಯಾದ ಕೆ. ವಿವೇಕಾನಂದ ಅವರು,ತುಮಕೂರು ಜಿಲ್ಲಾ ಬೂತ್ ಸಮಿತಿಯ ಉಸ್ತುವಾರಿಗಳಾದ ಎ.ಮಂಜುನಾಥ್ ಅವರು, ಶಿವ ಶಂಕರ್ ಅವರು, ಹಾಗೂ ತಿಪಟೂರು ಶಾಂತಕುಮಾರ್, ಶ್ರೀ ಶಿರಾ ಉಗ್ರೇಶ್ ಅವರು ತಾಲ್ಲೂಕು ಜೆಡಿಎಸ್ ಅಧ್ಯಕ್ಷರುಗಳು ಹಾಗೂ ತುಮಕೂರು ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications