ಮಳೆಯಿಂದ ಬೆಳೆ ಹಾನಿ; ಒಂದು ಎಕರೆ ಪ್ರದೇಶಕ್ಕೆ ₹25 ಸಾವಿರ ಪರಿಹಾರಕ್ಕೆ...

ಕಲಬುರಗಿ, ಸೆಪ್ಟೆಂಬರ್‌ 16: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಒಂದು ಎಕರೆ ಪ್ರದೇಶ ಬೆಳೆ ನಾಶಕ್ಕೆ ₹25000 ಪರಿಹಾರ ಘೋಷಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಗಂಭೀರವಾಗಿ ಒತ್ತಾಯಿಸಿದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಈ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಮಾಡುವಲ್ಲಿ ಈ ಸರ್ಕಾರ ವಿಫಲವಾಗಿದೆ. ಘೋಷಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಖಜಾನೆಯಲ್ಲಿ ದುಡ್ಡ ಇದಿಯೋ, ಇಲ್ಲವೋ ಸರ್ಕಾರನೇ ಉತ್ತರಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.

Nikhil Kumaraswamy Demands Compensation Of 25 000 Per Acre For Crop Damage

ಕೆಕೆಆರ್ ಡಿ ಬಿ ಯ ಕೆಲಸಗಳನ್ನು ಶೇ 30% ಗೆ ಲ್ಯಾಂಡರ್ಮಿಗೆ ಮಾರಿಕೊಂಡಿದ್ದಾರೆ. KKRDB ಇರೋದು ದುಡ್ಡು ಮಾಡಕ್ಕೆ. ಕಮಿಷ ನಡೆಯೋಕೆ. ಪರ್ಸೆಂಟೇಜ್ ರಾಜಕಾರಣಕ್ಕೆ ಇಟ್ಟಿರುವುದು. ಅಭಿವೃದ್ಧಿ ವಿಷಯ ಬಂದಾಗ ಕೆಕೆಆರ್ ಡಿಬಿ ಹೆಸರನ್ನು ಮುಂದೆ ಇಡುತ್ತಾರೆ ಎಂದು ಆರೋಪಿಸಿದರು. ಕಲಬುರಗಿ ನಗರದ ರಸ್ತೆಗಳೆಲ್ಲ ಗುಂಡಿಗಳು ಬಿದ್ದಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5000 ಕೊಟ್ಟಿದೆ ಅಂತ ಹೇಳ್ತಾರೆ. ಕಲ್ಬುರ್ಗಿಯ ರಸ್ತೆಗಳನ್ನು ನಿರ್ಮಿಸುವುದನ್ನು ಬಿಡಿ. ಗುಂಡಿಗಳನ್ನು ಮುಚ್ಚುವ ಕೆಲಸ ಕಲ್ಬುರ್ಗಿಯಿಂದ ಆರಂಭಿಸಲಿ ಎಂದು ಸರ್ಕಾರ ವಿರುದ್ಧ ಗುಡುಗಿದರು.

ಇಡೀ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಸರ್ಕಾರಿ ಹಾಗೂ ಖಾಸಗಿ ಆಸ್ತಿ ಹಾಳು ಮಾಡಿದೆ. ಜನ ಜಾನುವಾರುಗಳ ಮೇವು ಕೂಡ ಪರಿಣಾಮ ಆಗಿದೆ. ರೈತರ ಮೇಲೆ ಮಳೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಆಗಸ್ಟ್ ತಿಂಗಳಲ್ಲಿ ಬಾರಿ ಮಳೆ ಆಗಿದೆ. 1ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಉದ್ದು ಹೆಸರು ಮತ್ತಿತರ ಬೆಳೆಗಳು ಹಾಳಗಿದೆ ಎಂದು ತಿಳಿಸಿದರು. ಈಗಾಗಲೇ ಸರ್ಕಾರಿಂದ ವರದಿ ಕೂಡ ಸಿದ್ದ ಮಾಡಿದ್ದಾರೆ. ಕಲಬುರಗಿ ಜಿಲ್ಲೆ ತೊಗರಿ ಕಣಜ.50 ಸಾವಿರ ಹೆಕ್ಟೇರ್ ಪ್ರದೇಶ ಸಂಪೂರ್ಣ ಹಾಳಾಗಿದೆ

ರಾಜ್ಯದಲ್ಲಿ ಬೆಳೆ ಹಾನಿ ಪ್ರದೇಶದಲ್ಲಿ ಸಂತ್ರಸ್ತರ ಬೇಟಿ ಮಾಡುತ್ತಿದ್ದೆವೆ ನಮ್ಮ ಪಕ್ಷದಿಂದ ವರದಿ ತಯಾರು ಮಾಡುತ್ತೆವೆ. ಅದನ್ನ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು. ಕಲಬುರಗಿ ನಗರದ ಎಪಿಎಂಸಿಯಲ್ಲಿ ರೈತರ ಜೊತೆಗೆ ಸಂವಾದ ಮಾಡಿದ್ದೆ. ರೈತರ ಸಮಸ್ಯೆಗಳನ್ನು ಕುಮಾರಣ್ಣ ಮೂಲಕ ಕೇಂದ್ರದ ಗಮಕ್ಕೆ ತಂದಿದ್ದೇನೆ. ರೈತರು ಪ್ರತಿ ವರ್ಷ ಎರಡು ಮೂರು ಬೆಳೆ ಬೆಳೆಯಲು ಸಾಲಸೂಲ ಮಾಡುತ್ತಾನೆ. ಒಂದು ಎಕರೆಗೆ ಆರರಿಂದ ಎಂಟು ಕ್ಟಿಂಟಲ್ ಬೆಳೆ ಬೆಳೆಯುತ್ತಿದ್ದಾನೆ. ಆದರೂ ಅರ್ಧ ಕ್ವಿಂಟಲ್ ಬೆಳೆಯಲು ಸಾದ್ಯ ಆಗುತ್ತಿಲ್ಲ. ಎಕರೆಗೆ 25 ಸಾ ಪರಿಹಾರ ನೀಡಿ ಅಂತ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಸರ್ಕಾರ ನಡೆಸುವಂತವರು ಅತಿವೃಷ್ಟಿಯನ್ನ ಗಂಭೀರವಾಗಿ ಪರಿಗಣಿಸಬೇಕು. ಬಾರಿ ಪ್ರಮಾಣದ ಮಳೆ ಆಗಿದೆ ಇದು ರೈತರ ಮೇಲೆ ಪರಿಣಾಮ ಬೀರಿದೆ. ಇನ್ಸೂರೆನ್ಸ್ ಕಂಪನಿಗಳು ಏನ್ ಮಾಡುತ್ತಿವೆ ,ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ವೈಜ್ಞಾನಿಕವಾಗಿ ತಲುಪಿಸಲು ಹೊರಟಿದೆ ಎಂದು ಕಿಡಿಕಾರಿರದು. ಬೆಳೆಹಾನಿ ಸಮೀಕ್ಷೆ ಮಾಡುವವರು ನಮ್ಮ ಹೊಲಗಳಿಗೆ ಬಂದಿಲ್ಲ ಎಂದು ರೈತರು ಆತಂಕದಲ್ಲಿ ಇದ್ದಾರೆ. ರಾಜ್ಯ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೆನೆ. 100 ಕ್ಕೂ ಅಧಿಕ ಜಾನುವಾರುಗಳು ಸತ್ತಿವೆ ಜನರು ಸತ್ತಿದ್ದಾರೆ. ಸಿಎಂ ಅವರು ವಿಡಿಯೋ ಕಾಲ್ ಮೂಲಕ ಸಭೆ ಮಾಡಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಕೃಷಿ ಸಚಿವರು ತಮ್ಮ ಕ್ಷೇತ್ರಕ್ಕೆ ಸಚಿವರಾ ಅಥವಾ ರಾಜ್ಯದ ಸಚಿವರಾ.? ಇಷ್ಟು ಮಳೆ ಆದರು ಯಾವುದೇ ಪ್ರದೇಶಕ್ಕೆ ಭೇಟಿ ನೀಡಿಲ್ಲ. ರೈತರ ಸಂಕಷ್ಟದ ದಿನಗಳಲ್ಲಿ ಸರ್ಕಾರ ಯಾವ ರೀತಿ ನೆರವು ನೀಡುತ್ತದೆ ಎಂದು ಉತ್ತರ ಕೋಡಬೇಕು ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಎಕರೆಗೆ 25,000 ಸಾವಿರ ಪರಿಹಾರ ಸರ್ಕಾರ ನೀಡಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಬೀಜ ರಸಗೊಬ್ಬರ ನೀಡಬೇಕು. ರೈತರಿಗೆ ಉಳಿಸುವ ಕೆಲಸ ಸರ್ಕಾರ ಮಾಡಬೇಕು. ಕೇಂದ್ರದ NDRF ಪ್ರಕಾರ ಹೆಕ್ಟೇರ್ ಗೆ 6 ಸಾವಿರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕುಮಾರಣ್ಣವರು ಕೂಡ ರೈತರ ಜೊತೆಗೆ ದೂರವಾಣಿ ಮೂಲಕ ಕರೆ ಮಾಡಿ ಭರವಸೆ ನೀಡಿದ್ದಾರೆ. ರೈತರಿಗೆ ಕೇಂದ್ರದಿಂದ ಪರಿಹಾರ ಕೋಡಿಸುವ ಭರವಸೆ ನೀಡಿದ್ದಾರೆ. ತುಂಬಾಕು ಬೆಳೆಯನ್ನು ಕುಮಾರಸ್ವಾಮಿಯವರ ಗಮನಕ್ಕೆ ತಂದು ಖರೀದಿ ಮಾಡಿಸಲಾಗಿತ್ತು ಅದೇ ರೀತಿ ಈ ಭಾಗದ ರೈತರ ಪರ ಕೆಲಸ ಮಾಡುತ್ತೆನೆ ಅವರು ರೈತರಿಗೆ ಭರವಸೆ ನೀಡಿದ್ದಾರೆ. ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ರೈತರು ಕುಮಾರಣ್ಣ ರೈತ ಸಾಲ ಮನ್ನಾ ವಿಚಾರ ಸ್ಮರಿಸಿದ್ದಾರೆ. 14 ತಿಂಗಳ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾಲ ಮನ್ನಾ ಮಾಡಿದ್ದಾರೆ. ರೈತರ ವಿಷಯಕ್ಕೆ ಬಂದಾಗ ರಾಜಕೀಯ ಮಾಡಲ್ಲ. ನಮ್ಮ ಶಕ್ತಿ ಮೀರಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+