ಕೊಲೆ ಆರೋಪಿ ಈಗ ಕಾಂಗ್ರೆಸ್ ಅಭ್ಯರ್ಥಿ! ಇವೆಲ್ಲವೂ ಕೊತ್ವಾಲ್ ಕಾಂಗ್ರೆಸ್‌ನಲ್ಲಿ ಮಾತ್ರ ಸಾಧ್ಯ ಎಂದು ಕಟೀಲ್ ಕಿಡಿ
ಬೆಂಗಳೂರು,ಏಪ್ರಿಲ್ 7: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಈಗಾಗಲೇ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹಲವು ತಂತ್ರಗಳನ್ನ ನಡೆಸುತ್ತಿರುವ ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ಗೊಂದಲವಾಗಿದೆ.
ಈಗಾಗಲೇ ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗುರುವಾರ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳನ್ನ ಬಿಡುಗಡೆ ಮಾಡಿದ್ದು, ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಹೆಸರನ್ನು ಅಂತಿಮಗೊಳಿಸಿದೆ. ಈ ವಿಚಾರವಾಗಿ ರಾಜಕೀಯ ಟೀಕೆ ಟಿಪ್ಪಣಿಗಳು ಜೋರಾಗಿವೆ.

ಇನ್ನೂ ಬಿಜೆಪಿ ಮುಖಂಡ ಹಾಗೂ ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶ್ ಗೌಡ ಬರ್ಬರ ಕೊಲೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಪ್ರಕರಣದ ವಿಚಾರಣೆ ಅಂತಿಮಗೊಳ್ಳುವ ಮೊದಲೇ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೊಲೆ ಆರೋಪಿ ಈಗ ಕಾಂಗ್ರೆಸ್ ಅಭ್ಯರ್ಥಿ!
— Nalinkumar Kateel (@nalinkateel) April 6, 2023
ನಮ್ಮ ಪಕ್ಷದ ಯೋಗೀಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಜಾಮೀನು ಪಡೆದು ಜೈಲಿನಿಂದ ಹೊರಗಿರುವ ಹಾಗೂ ಈತ ಧಾರವಾಡ ಪ್ರವೇಶಿಸುವುದನ್ನೇ ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕಿದೆ.
ಇವೆಲ್ಲವೂ ಕೊತ್ವಾಲ್ ಕಾಂಗ್ರೆಸ್‌ನಲ್ಲಿ ಮಾತ್ರ ಸಾಧ್ಯ! https://t.co/fdfmzgQSqw
ಈ ಕುರಿತು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, ನಮ್ಮ ಪಕ್ಷದ ಯೋಗೀಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಜಾಮೀನು ಪಡೆದು ಜೈಲಿನಿಂದ ಹೊರಗಿರುವ ಹಾಗೂ ಈತ ಧಾರವಾಡ ಪ್ರವೇಶಿಸುವುದನ್ನೇ ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕಿದೆ. ಇವೆಲ್ಲವೂ ಕೊತ್ವಾಲ್ ಕಾಂಗ್ರೆಸ್‌ನಲ್ಲಿ ಮಾತ್ರ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ಧಾರಾವಾಡ ಸ್ಥಳೀಯ ನ್ಯಾಯಾಲಯದಲ್ಲಿ ಯೋಗೀಶ್ ಗೌಡ ಹತ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶದ ಬಗ್ಗೆ ಈವರೆಗೂ ನ್ಯಾಯಾಲಯ ತೀರ್ಪು ನೀಡಿಲ್ಲ. ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ವಿನಯ್ ಕುಲಕರ್ಣಿ ಧಾರವಾಡ ಪ್ರವೇಶ, ಕಾನೂನಾತ್ಮಕವಾಗಿ ತೀರ್ಮಾನ ಅಂತಿಮ ಗೊಂಡಿಲ್ಲ.
ಇನ್ನೂ ಕೆಲ ದಿನಗಳಲ್ಲಿ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶದ ಬಗ್ಗೆ ನ್ಯಾಯಾಲಯದ ತೀರ್ಪು ಹೊರ ಬೀಳಲಿದ್ದು, ಒಂದು ವೇಳೆ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶ ಸಿಕ್ಕರೆ ಧಾರವಾಡ ಗ್ರಾಮೀಣ ಕ್ಷೇತ್ರದ ರಾಜಕೀಯ ರಣಕಣ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಎರಡನೇ ಪಟ್ಟಿ ಇಲ್ಲಿದೆ.
1. ನಿಪ್ಪಾಣಿ: ಕಾಕಾ ಸಾಹೇಬ್ ಪಾಟೀಲ್
2. ಬೀಳಗಿ: ಜಿ.ಟಿ ಪಾಟೀಲ್
3. ಕಲಘಟಗಿ: ಸಂತೋಷ ಲಾಡ್
4. ಧಾರವಾಡ: ವಿನಯ್ ಕುಲಕರ್ಣಿ
5. ಕಡೂರ್: ಆನಂದ್
6. ಗುಬ್ಬಿ : ಶ್ರೀನಿವಾಸ್
7. ಗುರುಮಠಕಲ್: ಬಾಬುರಾವ್ ಚಿಂಚನಸೂರ್
8. ಗೋಕಾಕ್: ಮಹಾಂತೇಶ್ ಕಾಡಡಿ
9. ಕಿತ್ತೂರು: ಬಾಬಾ ಸಾಹೇಬ್ ಪಾಟೀಲ್
10. ಮುದೋಳ್: ರಾಮಣ್
11.ಸೌದತ್ತಿ ಯಲ್ಲಮ್ಮ: ವಿಶ್ವಾಸ್ ವಸಂತ್ ವೈದ್ಯ
12.ಬಾದಾಮಿ :ಭೀಮಸೇನ್ ಬಿ. ಚಿಮ್ಮನಕಟ್ಟಿ
13. ಬಾಗಲಕೋಟೆ : ಹುಲ್ಲಪ್ಪ ವೈ. ಮೇಟಿ
14. ಸಿರ್ಸಿ: ಭೀಮಣ್ಣ ನಾಯ್ಕ್
15. ಯಲ್ಲಾಪುರ: ವಿ.ಎಸ್.ಪಾಟೀಲ್
16.ಕುಡ್ಲಿಗಿ ಎಸ್ಟಿ: ಡಾ.ಶ್ರೀನಿವಾಸ್ ಎಂ.ಟಿ.
17. ಮೊಳಕಾಲ್ಮೂರು (ಎಸ್ಟಿ): ಎನ್.ವೈ. ಗೋಪಾಲಕೃಷ್ಣ
18. ಚಿತ್ರದುರ್ಗ : ಕೆ.ಸಿ.ವೀರೇಂದ್ರ (ಪಪ್ಪಿ)
19.ಹೊಳಲ್ಕೆರೆ ಎಸ್ಸಿ: ಆಂಜನೇಯ ಎಚ್.
20. ಚೆನ್ನಗಿರಿ :ಬಸವರಾಜು ವಿ. ಶಿವಗಂಗ
21.ತೀರ್ಥಹಳ್ಲಿ :ಕಿಮ್ಮನೆ ರತ್ನಾಕರ್
22. ಉಡುಪಿ : ಪ್ರಸಾದ್‌ರಾಜ್ ಕಾಂಚನ್
23.ತುಮಕೂರು ನಗರ: ಇಕ್ಬಾಲ್ ಅಹ್ಮದ್
24. ಯಲಹಂಕ :ಕೇಶವ ರಾಜಣ್ಣ ಬಿ.
25.ಯಶವಂತಪುರ : ಬೈರಾಜ್ ಗೌಡ
26.ಮಹಾಲಕ್ಷ್ಮಿ ಲೇ ಔಟ್: ಕೇಶವಮೂರ್ತಿ
27.ಪದ್ಮನಾಭ ನಗರ: ವಿ.ರಘುನಾಥ ನಾಯ್ಡು
28.ಮೇಲುಕೋಟೆ: ದರ್ಶನ್ ಪುಟ್ಟಣ್ಣಯ್ಯ
29. ಮಂಡ್ಯ: ಪಿ.ರವಿಕುಮಾರ್
30.ಕೃಷ್ಣರಾಜಪೇಟೆ :ಬಿ.ಎಲ್.ದೇವರಾಜ್
31.ಬೇಲೂರು: ಬಿ.ಶಿವರಾಮ್
32. ಮಡಿಕೇರಿ :ಡಾ.ಮಂತರ್ ಗೌಡ
33.ಕೊಳ್ಳೇಗಾಲ ಎಸ್ಸಿ ಮೀಸಲು: ಎ.ಆರ್.ಕೃಷ್ಣಮೂರ್ತಿ
34.ಚಾಮುಡೇಶ್ವರಿ: ಸಿದ್ದೇಗೌಡ
35.ವಿಜಯಪುರ : ಅಬ್ದುಲ್ ಹಮೀದ್ ಖಾಜಾಸಾಹೇಬ್
36.ನಾಗಠಾಣ: ವಿಠ್ಠಲ್ ಕಟಕದೊಂಡ
37.ಅಫಜಲಪುರ: ಎಂ.ವೈ ಪಾಟೀಲ್
38. ಯಾದಗಿರಿ: ಚನ್ನಾರೆಡ್ಡಿ ಪಾಟೀಲ್
39.ಕಲಬುರಗಿ: ಅಲ್ಲಮ್ಮ ಪ್ರಭು ಪಾಟೀಲ್
40. ಗಂಗಾವತಿ: ಇಕ್ಬಾಲ್ ಅನ್ಸಾರಿ
41.ನರಗುಂದ : ಬಿ.ಆರ್.ಯಾವಗಲ್
42. ಬಸವಕಲ್ಯಾಣ: ವಿಜಯ ಧರ್ಮಸಿಂಗ್












Click it and Unblock the Notifications