Dasara 2025: ಮೈಸೂರು ಅರಮನೆಗೆ ಬಂದ ಗಜಪಡೆ: ತೂಕದಲ್ಲಿ ಅಭಿಮನ್ಯು ಆನೆ ಹಿಂದಿಕ್ಕಿದ ಭೀಮ..
ಬೆಂಗಳೂರು, ಆಗಸ್ಟ್ 11: ವಿಶ್ವ ವಿಖ್ಯಾತ ನಾಡಹಬ್ಬ ದಸರಾ 2025 ಹಬ್ಬದ ಆಚರಣೆಗೆ ಎಲ್ಲ ಸಿದ್ಧತೆಗಳು ಆರಂಭಗೊಂಡಿವೆ. ದಸರಾ ಕಾರ್ಯಾಕಾರಿಣಿ ಸಭೆ ಈಗಾಗಲೇ ಆಗಿದೆ. ಅರಮನೆ ತುಂಬೆಲ್ಲ ಭರ್ಜರಿ ದೀಪಾಲಂಕಾರ ಮಾಡಲಾಗಿದೆ. ಇಂದು ಗಜಪಡೆ ಅರಮನೆ ಪ್ರವೇಶಿಸಿದ್ದು, ಕಾಡಿನಿಂದ ಬರುತ್ತಿದ್ದಂತೆ ಪ್ರತಿ ವರ್ಷದಂತೆ ಈ ವರ್ಷವು ಒಂದೊಂದೆ ಆನೆಯ ತೂಕ ಪರೀಕ್ಷೆ ನಡೆಯಿತು. ತೂಕದಲ್ಲಿ ಅಭಿಮನ್ಯು ಆನೆಯನ್ನು ಭೀಮ ಮೀರಿಸಿದ್ದಾನೆ.
ಹೌದು, ಮೈಸೂರು ದಸರಾ ಹಬ್ಬ ಹಿನ್ನಲೆ ಇಂದು ಗಜಪಡೆಗೆ ತೂಕ ಪರೀಕ್ಷೆ ಮೊದಲ ಹಂತದ ತೂಕ ಪರೀಕ್ಷೆ ನಡೆಯಿತು. ಕಾಡಿನಿಂದ ನಾಡಿಗೆ ಬಂದ ನಂತರ ನಡೆಯುವ ನಡೆಯುವ ಮೊಲದ ಪ್ರಕ್ರಿಯೆ ಇದಾಗಿದೆ. ಅಭಿಮನ್ಯುಗಿಂತ ಭೀಮ ಹೆಚ್ಚಿನ ತೂಕ (5465 ಕೆಜಿ) ಹೊಂದಿರುವುದು ಗೊತ್ತಾಗಿದೆ. ಈ ಮೂಲಕ ಕ್ಯಾಪ್ಟನ್ ಆನೆ ಅಭಿಮಾನ್ಯ 5360 ಕೆಜಿ ತೂಗುವ ಮೂಲಕ ದಸರಾ ಆನೆಗಳಲ್ಲಿ ಎರಡನೇ ಹೆಚ್ಚು ತೂಕದ ಆನೆಯಾಗಿ ಹೊರ ಹೊಮ್ಮಿತು.

2017ರಲ್ಲಿ ಪಾಲ್ಗೊಂಡಿದ್ದ ಭೀಮ ಮತ್ತದೇ ಕಳೆದ ನಾಲ್ಕು ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಭೀಮನ ತೂಕ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2022ರಲ್ಲಿ 4000 ಕೆಜಿ ತೂಕ ತೂಗಿದ್ದ ಭೀಮನ ತೂಕ ಹೆಚ್ಚಾಗಿದೆ. ಭೀಮನಿಗೆ ಸದ್ಯ 25 ವರ್ಷ ವಯಸ್ಸಾಗಿದೆ. ವಿವಿಧ ಆನೆಗಳು ವರ್ಷಗಳಿಂದಲೂ ಮೈಸೂರು ದಸರೆಗಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ.
ಒಂಬತ್ತು ವರ್ಷಗಳಿಂದ ಮೈಸೂರಿಗೆ ಬರುತ್ತಿರುವ ಆನೆ ಧನಂಜಯ್ 5310 ಕೆಜಿ ತೂಕ ಹೊಂದಿದರೆ, ಆನೆ ಪ್ರಶಾಂತ 5110 ಕೆಜಿ, ಮಹೇಂದ್ರ ಆನೆಯ ತೂಕ 5120 ಕೆಜಿ, ಏಕಲವ್ಯ 5305 ಕೆಜಿ, 26 ವರ್ಷದ ಕಂಜನ್ 4880 ಕೆಜಿ, ಲಕ್ಷ್ಮೀ ಆನೆ 3730 ಕೆಜಿ ಹಾಗೂ ಕಾವೇರಿ ಆನೆ 3010 ಕೆಜಿ ತೂಕ ಹೊಂದಿದೆ. ಈ ಮೂಲಕ ಕಾವೇರಿ ಆನೆ ಅತಿ ಕಡಿಮೆ ತೂಕ ಹೊಂದಿದ ದಸರೆ ಆನೆಯಾಗಿದೆ.
ದಸರಾ ಹಬ್ಬದ ಬಗ್ಗೆ ಸಚಿವರು ಹೇಳಿದ್ದೇನು?
ದಸರಾ ಕಾರ್ಯಾಕಾರಿಣಿ ಸಭೆಯಲ್ಲಿ ಶಾಸಕರು, ಸಚಿವರು ಕೆಲವು ಸಲಹೆ ನೀಡಿದ್ದಾರೆ. ಏನೆಲ್ಲ ಅದ್ಧೂರಿಯಾಗಿ, ಮತ್ತಷ್ಟು ಚನ್ನಾಗಿ ಹಬ್ಬ ಆಚರಿಸಲು ಸಲಹೆ ನೀಡಿದ್ದಾರೆ. ಮೂರು ಮತ್ತು ನಾಲ್ಕು ವಾರಗಳ ಮೊದಲೇ ಹಬ್ಬ ಆರಂಭ, ಮೂರು ಸಾವಿರ ಡ್ರೋನ್ ಶೋಗೆ ನಿರ್ಧಾರ, ಎಲ್ಲ ಸರ್ಕಾರಿ ನಿಗಮಗಳ ಪ್ರದರ್ಶನಗಳು ಸಮಯಕ್ಕೆ ಸರಿಯಾಗಿ ಮಾಡಬೇಕು. ಈ ವರ್ಷ ಲೈಟಿಂಗ್ಸ್ ಮತ್ತಷ್ಟು ಗ್ಯ್ರಾಂಡ್ ಆಗಿ ಕಾಣುವಂತೆ ಸೂಚನೆ ನೀಡಿದ್ದೇವೆ. ನಾಡಿನ ಜನರ ಪರವಾಗಿ ಜನರಿಗೆ ಒಳಿತಾಗುವ ದೃಷ್ಟಿಯಿಂದ ವಿಜೃಂಬಣೆಯಿಂದ ಆಚರಿಸಲು ತಿರ್ಮಾನಿಸಲಾಗಿದೆ. ಯುವ ದಸರಾ, ಸಂಗೀತ ಸಂಜೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಚಿವ ಎಚ್‌ಸಿ ಮಹಾದೇವಪ್ಪ ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೈಸೂರು ದಸರಾ ಉದ್ಘಾಟಿಸುತ್ತಾರೆ. ಮುಂದಿನ ಮೂರು ವರ್ಷವು ಅವರೇ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸ್ಥಾನ ಬದಲಾಗಲ್ಲ ಎಂದು ಅವರು ತಿಳಿಸಿದರು.












Click it and Unblock the Notifications