ತಾಯಿ ಚಾಮುಂಡೇಶ್ವರಿ & ಜನರ ಭಾವನೆ: ಬಾನು ಮುಷ್ತಾಕ್ ಫಸ್ಟ್ ರಿಯಾಕ್ಷನ್ ಇಲ್ಲಿದೆ!
ಈ ಬಾರಿಯ ದಸರಾ ಉದ್ಘಾಟನೆ ಕಾರ್ಯಕ್ರಮವು ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಬೂಕರ್ ಪ್ರಶಸ್ತಿ ವಿಜೇತೆರಾದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವ ಮುಂಚೆ ತಾಯಿ ಚಾಮುಂಡೇಶ್ವರಿ ಹಾಗೂ ಭುವನೇಶ್ವರಿಯ ಬಗ್ಗೆ ಅವರಿಗೆ ಇರುವ ನಿಲುವೇನು ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕರು ಆಗ್ರಹಿಸಿದ್ದಾರೆ.
ಈ ನಡುವೆ ಈ ವಿಚಾರಗಳಿಗೆ ಸಂಬಂಧಿಸಿದಂತೆ ಬಾನು ಮುಷ್ತಾಕ್ ಅವರು ರಿಯಾಕ್ಟ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದಲೂ ಈ ವಿಚಾರವಾಗಿ ಭಾರೀ ಚರ್ಚೆಗಳು ನಡೆದಿರುವಾಗಲೇ ಬಾನು ಅವರು ಈ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. "ನೀವು ತಾಯಿ ಚಾಮುಂಡೇಶ್ವರಿ ಎಂದು ಕರೆಯುತ್ತೀರಿ. ನಿಮ್ಮ ಭಾವನೆಗಳನ್ನೂ ನಾನು ಗೌರವಿಸುತ್ತೇನೆ" ಎಂದು ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತೆರಾದ ಬಾನು ಮುಷ್ತಾಕ್ ಅವರು ಹೇಳಿದ್ದಾರೆ. ಈ ಮೂಲಕ ಕಳೆದ ಎರಡು ದಿನಗಳಿಂದಲೂ ಭಾರೀ ವಿವಾದಕ್ಕೆ ಕಾರಣವಾಗಿರುವ ವಿಚಾರಕ್ಕೆ ತಾರ್ಕಿಕ ಅಂತ್ಯ ಹಾಡುವುದಕ್ಕೆ ಮುಂದಾಗಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಬಾನು ಅವರು ಬಾಗಿನವನ್ನೂ ಸ್ವೀಕರಿಸಿದ್ದಾರೆ. ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಬಾನು ಅವರಿಗೆ ಬೆಂಗಳೂರಿನ ಅಮ್ಮನ ಮಡಿಲು ಎನ್ನುವ ಸಂಸ್ಥೆಯಿಂದ ಸನ್ಮಾನ ಹಾಗೂ ಬಾಗಿನ ಕೊಡಲಾಗಿದೆ. ಸಂಸ್ಥೆಯ ಸಂಸ್ಥಾಪಕಿ ಹಾಗೂ ಕಲಾವಿದೆ ಶಶಿಕಲಾ ಅವರು ಬಾನು ಮುಷ್ತಾಕ್ ಅವರಿಗೆ ಬಾಗಿನ ಕೊಟ್ಟಿದ್ದಾರೆ.
ಬಾಗಿನ ಸ್ವೀಕರಿಸಿ ಮಾತನಾಡಿರುವ ಬಾನು ಅವರು, "ದಸರಾ ಹಬ್ಬ ನಾನು ಪ್ರೀತಿಯಿಂದ ಭಾಗಿಯಾಗಿರುವ ಹಬ್ಬಗಳಲ್ಲಿ ಒಂದು. ನನ್ನ ತಂದೆ ಮತ್ತು ತಾಯಿಯೊಂದಿಗೆ ಹಲವು ಬಾರಿ ಜಂಬೂಸವಾರಿ ನೋಡುವುದಕ್ಕೆ ಹೋಗಿದ್ದೆ. ಉದ್ಘಾಟನೆಗೆ ಆಹ್ವಾನ ಬಂದಿರುವುದು ಸಂತೋಷ ಮೂಡಿಸಿದೆ" ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications