ಭಾರತೀಯ ರೈಲ್ವೆ ಪ್ರಶಸ್ತಿಗೆ ನೈಋತ್ಯ ರೈಲ್ವೆಯ ಸಿಬ್ಬಂದಿ ಸೇರಿ ನಾಲ್ವರು ಆಯ್ಕೆ

ಹುಬ್ಬಳ್ಳಿ, ಡಿಸೆಂಬರ್ 17: ಭಾರತೀಯ ರೈಲ್ವೆ ಇಲಾಖೆ ವತಿಯಿಂದ ನೀಡಿ ಗೌರವಿಸುವ 'ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ'ಕ್ಕೆ ಕರ್ನಾಟಕವು ಒಳಗೊಂಡಂತೆ ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿ ಸೇವೆ ನೀಡುವ ನೈರುತ್ಯ ರೈಲ್ವೆ ವ್ಯಾಪ್ತಿಯ ನಾಲ್ವರು ಸಿಬ್ಬಂದಿ ಆಯ್ಕೆ ಆಗಿದ್ದಾರೆ. ಮುಂದಿನ ವಾರ ಪುರಸ್ಕೃತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಕುರಿತು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ನೈರುತ್ಯ ರೈಲ್ವೆ ಸಿಬ್ಬಂದಿ ಶಿವಾನಂದ ಟಿ, ದಿನೇಶ್ ಎನ್. ಗೋಲೆನವರ್, ರಾಜಾ ಮತ್ತು ಶ್ರೀಜಿತ್ ಜೆ.ಬಿ. ಅವರು ಭಾರತೀಯ ರೈಲ್ವೆ ಇಲಾಖೆ ನೀಡುವ 'ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ' ಆಯ್ಕೆ ಆಗಿದ್ದಾರೆ. ಇವರು ಡಿಸೆಂಬರ್ 21ರಂದು ನವದೆಹಲಿಯ ಭಾರತ್‌ ಮಂಟಪಂನಲ್ಲಿ ಅದ್ಧೂರಿ ಕಾರ್ಯಕ್ರಮದಲ್ಲಿ ಪುರಸ್ಕಾರ ಪಡೆಯಲಿದ್ದಾರೆ.

Most Distinguished Train Service Award for 4 Staff of South Western Railway

ಈ ಸಮಾರಂಭದಲ್ಲಿ 101 ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹೆಡ್‌ಕಾನ್‌ಸ್ಟೆಬಲ್‌ ಶಿವಾನಂದ ಟಿ. ಇವರು ಪುರಸ್ಕೃತರಲ್ಲಿ ಒಬ್ಬರಾಗಿದ್ದು, 2023ರಂದು ದಾವಣಗೆರೆ ನಿಲ್ದಾಣದಲ್ಲಿ ಹಳಿ ಮೇಲೆ ಸಿಲುಕಿದ್ದ ವೃದ್ಧರೊಬ್ಬರನ್ನು ಅವರು ರಕ್ಷಿಸಿದ್ದರು.

ಇನ್ನುಳಿದ ಮೂವರು ಪುರಸ್ಕೃತರಲ್ಲಿ, ತಾಂತ್ರಿಕ ವಿಭಾಗದಲ್ಲಿ ಆದಾಯ ಉಳಿತಾಯ, ಆಸನಗಳ ಮರುವಿನ್ಯಾಸ ಸೇರಿ ಬೇರೆ ಬೇರೆ ಸಂದರ್ಭದಲ್ಲಿ ಹುಬ್ಬಳ್ಳಿಯ ಡೀಸೆಲ್ ಲೋಕೋ ಶೆಡ್‌ನ ಗ್ರೇಡ್ 1 ಟೆಕ್ನಿಷಿಯನ್ ದಿನೇಶ್ ಎನ್‌. ಗೋಲೆನವ‌ರ್, ಬೆಂಗಳೂರು ವಿಭಾಗದ ಗ್ರೇಡ್ 3 ಟೆಕ್ನಿಷಿಯನ್ ರಾಜಾ ಮತ್ತು ಹುಬ್ಬಳ್ಳಿ ವಿಭಾಗದ ಟ್ರ್ಯಾಕ್ ನಿರ್ವಹಣೆ 4ರ ಸಿಬ್ಬಂದಿ ಶ್ರೀಜಿತ್ ಜೆ.ಬಿ. ಅವರು ಪ್ರಮುಖ ಪಾತ್ರವಹಿಸಿದ್ದರು. ಅವರೆಲ್ಲ ಇದೀಗ ಪುರಸ್ಕಾರಕ್ಕೆ ಪಾತ್ರರಾಗಲಿದ್ದಾರೆ ಎಂದು ಭಾರತೀಯ ರೈಲ್ವೆ ಇಲಾಖೆಗೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್ವೆ ಬೈಪಾಸ್ ಲೈನ್ ನಿರ್ಮಾಣಕ್ಕೆ ಅಸ್ತು

ಬೆಂಗಳೂರಿನಲ್ಲಿ ರೈಲುಗಳ ಸಂಚಾರ ದಟ್ಟಣೆ ನಿಭಾಯಿಸುವ ನಿಟ್ಟಿನಲ್ಲಿ ರೈಲ್ವೆ ಮಂಡಳಿಯು ಹೊಸ ಯೋಜನೆಗೆ ಕೈ ಹಾಕಿದೆ. ಒಟ್ಟು 240 ಕೋಟಿಗೂ ಅಧಿಕ ವೆಚ್ಚದಲ್ಲಿ ಬೆಟ್ಟ ಹಲಸೂರು ಮತ್ತು ರಾಜಾನುಕುಂಟೆ ಮಧ್ಯೆ ರೈಲ್ವೆ ಬೈಪಾಸ್ ನಿರ್ಮಿಸುವ ಯೋಜನೆಗೆ ಮಂಡಳಿಯು ಒಪ್ಪಿಗೆ ನೀಡಿದೆ.

ಈ ಹಿಂದೆಯೇ ರೈಲ್ವೆ ಮಂಡಳಿಗೆ ವಿವಿಧ ಯೋಜನೆಗಳಿಗಾಗಿ, ರೈಲ್ವೆ ವಲಯ ಅಭಿವೃದ್ಧಿಗಾಗಿ ಮನವಿ ಮಾಡಲಾಗಿತ್ತು. ಅದರಂತೆ ಡಬಲ್ ಲೈನ್ ಯೋಜನೆಗೆ ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿತ್ತು. ಆದರೆ ಸಿಂಗಲ್ ಲೈನ್ ಯೋಜನೆಗೆ ಒಪ್ಪಿಗೆ ದೊರೆಯಿತು. ಹಳಿ ನಿಲ್ದಾಣ ಸೇರಿ ಸಿವಿಲ್ ಕಾಮಗಾರಿಗೆ 200ಕ್ಕೂ ಕೋಟಿಗೂ ಅಧಿಕ ಹಣ, ಸಿಗ್ನಲ್ ಕೆಲಸಕ್ಕಾಗಿ 21 ಕೋಟಿ ರೂ, ಎಲೆಕ್ಟ್ರಿಕಲ್ ಕಾಮಗಾರಿಗೆ 13 ಕೋಟಿ ರೂ ಸೇರಿದಂತೆ ಒಟ್ಟು 240 ಕೋಟಿಗೂ ಅಧಿಕ ಹಣವನ್ನು ಮಂಜೂರು ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+