ಮುಂಗಾರು ಆರಂಭ: 10 ದಿನಗಳಲ್ಲಿ ರಾಜ್ಯದಲ್ಲಿ 80% ರಷ್ಟು ಅಧಿಕ ಮಳೆ
ಬೆಂಗಳೂರು, ಜೂನ್. 11: ಈ ಬಾರಿ ರಾಜ್ಯ ಎಂದು ಕಂಡರಿಯದ ಬೇಸಿಗೆಯನ್ನು ಅನುಭವಿಸಿದೆ. ಸದ್ಯ ರಾಜ್ಯದಲ್ಲಿ ಮುಂಗಾರು ಪ್ರಾರಂಭದ ನಂತರ ಎಲ್ಲೆಡೆ ಮಳೆ ಸುರಿಯುತ್ತಿದೆ . ರಾಜಧಾನಿಯಲ್ಲಿ ದಿನವೂ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಆರಂಭವಾಗಿ ವಾಡಿಕೆಗಿಂತ ಕೇವಲ 10 ದಿನಗಳಲ್ಲಿ 80% ಹೆಚ್ಚುವರಿ ಮಳೆಯನ್ನು ದಾಖಲಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂಗಾರಿನಲ್ಲಿ ಸಾಮಾನ್ಯ ಮಳೆ 47.6 ಮಿಲಿ ಮೀಟರ್. ಆದರೆ, ಜೂನ್ 1 ರಿಂದ ರಾಜ್ಯದಲ್ಲಿ 85.6 ಮಿಮೀ ಮಳೆಯಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ.

ದಕ್ಷಿಣ ಕನ್ನಡದಲ್ಲಿ 26%, 3% ಚಿಕ್ಕಮಗಳೂರಿನಲ್ಲಿ ಮತ್ತು ಕೊಡಗಿನಲ್ಲಿ 30% ನಷ್ಟು ಮಳೆ ಕೊರತೆ ದಾಖಲಿಸಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕರಾವಳಿ ಕರ್ನಾಟಕದಲ್ಲಿ ಶೇ.25ರಷ್ಟು ಅಧಿಕ ಮಳೆ ದಾಖಲಾಗಿದೆ. 155.6 ಮಿಮೀ ವಾಡಿಕೆ ಮಳೆಗೆ ವಿರುದ್ಧವಾಗಿ, ಈ ಪ್ರದೇಶದಲ್ಲಿ 192.4 ಮಿಮೀ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ 140% ಅಧಿಕ ಮಳೆ ದಾಖಲಾಗಿದೆ. ಸಾಮಾನ್ಯ 33 ಮಿಮೀ ದಾಖಲಾಗುತ್ತಿದ್ದ ಪ್ರದೇಶದಲ್ಲಿ 79.3 ಮಿಮೀ ಮಳೆಯಾಗಿದೆ.
ದಕ್ಷಿಣ ಒಳನಾಡಿನಲ್ಲಿ 82% ಅಧಿಕ ಮಳೆ ದಾಖಲಾಗಿದೆ. ಸಾಮಾನ್ಯ 38.5 ಮಿಮೀ ಮಳೆಯಾಗುತ್ತಿದ್ದ ಪ್ರದೇಶದಲ್ಲಿ 70.2 ಮಿಮೀ ಮಳೆಯಾಗಿದೆ. ವಿಜಯಪುರದಲ್ಲಿ ಗರಿಷ್ಠ 329%, ಬೆಂಗಳೂರು ಗ್ರಾಮಾಂತರದಲ್ಲಿ 272% ಅಧಿಕ ಮಳೆ ದಾಖಲಾಗಿದೆ. ರಾಮನಗರ ಮತ್ತು ವಿಜಯನಗರದಲ್ಲಿ ಶೇ.222ರಷ್ಟು ಅಧಿಕ ಮಳೆ ದಾಖಲಾಗಿದೆ.
ಉಡುಪಿಯಲ್ಲಿ ಕನಿಷ್ಠ ಶೇ.5ರಷ್ಟು ಅಧಿಕ ಮಳೆ ದಾಖಲಾಗಿದೆ. 209.5% ಸಾಮಾನ್ಯ ಮಳೆಗೆ ವಿರುದ್ಧವಾಗಿ, ಜಿಲ್ಲೆಯಲ್ಲಿ 220.1% ದಾಖಲಾಗಿದೆ. ಹಾವೇರಿ ಮತ್ತು ಹಾಸನದಲ್ಲಿ ಶೇ.14ರಷ್ಟು ನಂತರದ ಸ್ಥಾನದಲ್ಲಿದೆ. ಬೆಂಗಳೂರು ನಗರ ಪ್ರದೇಶದಲ್ಲಿ ಶೇ.145ರಷ್ಟು ಅಧಿಕ ಮಳೆ ದಾಖಲಾಗಿದೆ.

ಜೂನ್ 1 ರಿಂದ 10ರವರೆಗೆ ಸಾಮಾನ್ಯ 37 ಮಿ.ಮೀ.ಗೆ ವಿರುದ್ಧವಾಗಿ, ರಾಜಧಾನಿಯಲ್ಲಿ 90.6 ಮಿ.ಮೀ. ಮಳೆಯಾಗಿದೆ. 2023 ರಲ್ಲಿ, ರಾಜ್ಯವು ಜೂನ್ 1 ರಿಂದ 14 ರವರೆಗೆ 66% ನಷ್ಟು ಕೊರತೆಯನ್ನು ದಾಖಲಿಸಿದೆ. ವಾಡಿಕೆಯಂತೆ 2023 ರಲ್ಲಿ 81.2 ಮಿ.ಮೀ ಬದಲು ರಾಜ್ಯದಲ್ಲಿ 27.4 ಮಿ.ಮೀ. ಮಳೆಯಾಗಿತ್ತು.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್












Click it and Unblock the Notifications