ಮುಂಗಾರು ಮಳೆಗೆ ಸೌಂದರ್ಯ ತುಂಬಿ ಅಪ್ಸರೆಯಂತೆ ಕಂಗೊಳಿಸಿದ ಮಲೆನಾಡು!
ಮಲೆನಾಡು ಮಳೆ ಚಂದ.. ಕರಾವಳಿಗೆ ಸಮುದ್ರವೇ ಅಂದ.. ಹೀಗೆ ಕನ್ನಡ ನಾಡು ಎಲ್ಲಾ ರೀತಿಯ ವಿಧವಿಧದ ವಾತಾವರಣ ಹೊಂದಿರುವ ರಾಜ್ಯ. ನಮ್ಮ ಕನ್ನಡ ನಾಡನ್ನು ಇಡೀ ಜಗತ್ತಿನಲ್ಲಿ ಇದೇ ಕಾರಣಕ್ಕೆ ಹೊಗಳುವುದು ಉಂಟು. ಅದರಲ್ಲೂ ಮಳೆ ಬಂದಾಗ ಕನ್ನಡ ನಾಡಿನ ಮಲೆನಾಡು ಭಾಗವನ್ನು ಯಾರಾದರೂ ಮರೆಯುವುದು ಉಂಟೇ? ಈ ಬಗ್ಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗುತ್ತಿದ್ದು, ವಿಡಿಯೋ ನೋಡಲು ಮುಂದೆ ಓದಿ.
ಮುಂಗಾರು ಮಳೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿದ್ದು, ಕನ್ನಡ ನಾಡು ಈಗ ಸಂಪೂರ್ಣ ಹಸಿರು ಹಸಿರಾಗಿ ಕಂಗೊಳಿಸುತ್ತಿದೆ. ಅದರಲ್ಲೂ ಬೆಟ್ಟ, ಪರ್ವತಗಳ ನಾಡು ಎಂದು ಗುರುತಿಸಿಕೊಂಡ ಕನ್ನಡ ನಾಡಿನ ಮಲೆನಾಡು ಭಾಗ ಪಶ್ಚಿಮ ಘಟ್ಟದಲ್ಲಿ ಸ್ವರ್ಗವೇ ಇದೀಗ ನಿರ್ಮಾಣ ಆಗಿದೆ. ಅದರಲ್ಲೂ ಈ ದೃಶ್ಯಗಳನ್ನ ಜನರು ತಮ್ಮ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಕನ್ನಡ ನಾಡಿನ ಮಳೆ & ಪ್ರಕೃತಿ ಸೌಂದರ್ಯ ಇಡೀ ಜಗತ್ತಿಗೆ ಪಸರಿಸುತ್ತಿದೆ. ಆ ವಿಡಿಯೋ ನೋಡಲು ಮುಂದೆ ಓದಿ.

ಮುಂಗಾರು ಮಳೆಯೇ.. ಏನು ನಿನ್ನ..
ಮಳೆ ಆರ್ಭಟ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿತ್ತು, ಆದರೆ ಇದೀಗ ಮತ್ತೆ ಮುಂಗಾರು ಮಳೆ ಮೋಡಗಳು ಅಲರ್ಟ್ ಆಗಿ ಅಬ್ಬರಿಸುತ್ತಿವೆ. ಹೀಗಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳುತ್ತಿದೆ. ಹೀಗಿದ್ದಾಗ ಕರ್ನಾಟಕದ ಮಲೆನಾಡು ಭಾಗ ಕೊಡಗು, ಚಿಕ್ಕಮಗಳೂರು & ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಾಗಗಳಲ್ಲಿ ಈಗ ಸ್ವರ್ಗವೇ ಧರೆಗೆ ಇಳಿದಂತೆ ಕಾಣುತ್ತಿದೆ.
It's just
— Asha Shastry (@ShastryAsha) July 1, 2024
ಮಳೆ.. ಮಳೆ...ಮಳೆ...!#ನಮ್ಮೂರು #ನಮ್ಮನೆ pic.twitter.com/cIa8Y8Kfu8
ಕನ್ನಡ ನಾಡಿನ ಜನರು ಕೂಡ ಪ್ರಕೃತಿಯ ಸೌಂದರ್ಯ ಸವಿಯಲು ಈಗ ಟೂರ್ & ಟ್ರಿಪ್ ಅಂತಾ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುತ್ತಿದ್ದಾರೆ. ಅದರಲ್ಲೂ ಮಲೆನಾಡು ಭಾಗ ಜನಗಳಿಗೆ ಅತ್ಯಂತ ಮೆಚ್ಚಿನ ಜಾಗಗಳಾಗಿ ಪರಿವರ್ತನೆ ಆಗಿವೆ. ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತಿನ ಮೂಲೆ ಮೂಲೆಯಿಂದ ಕೂಡ ಜನರು ಮಲೆನಾಡು ಜಿಲ್ಲೆಗಳಿಗೆ ಬಂದು ಪ್ರಕೃತಿಯ ಜೊತೆಗೆ ಬೆರೆತು ಹೋಗುತ್ತಿದ್ದಾರೆ.












Click it and Unblock the Notifications