ಸಚಿವ ಸ್ಥಾನಕ್ಕಾಗಿ ಪಟ್ಟು; ಹಿಂದೆ ಮಾಡಿದ ತಪ್ಪು ಮತ್ತೆ ಮಾಡಬೇಡಿ: ವಿನಯ್ ಕುಲಕರ್ಣಿ ಎಚ್ಚರಿಕೆ
ಬೆಳಗಾವಿ, ಜೂನ್ 05: ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಲವು ನಾಯಕರ ಅಸಮಾಧಾನ ಮತ್ತೆ ಮುಂದುವರೆದಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ಬಿ ಕೆ ಹರಿಪ್ರಸಾದ್ ಹಾಗೂ ಸಲೀಂ ಅಹಮದ್ ಸಚವ ಸ್ಥಾನ ಕೈ ತಪ್ಪಿದ ಹಿನ್ನಲೆ ಬಹಿರಂತವಾಗಿ ಅಸಮಾಧಾನ ಹೊರಹಾಕಿದ್ದು, ಇದೀಗ ವಿನಯ್ ಕುಲಕರ್ಣಿ ಪಕ್ಷದ ವಿರುದ್ದ ಎಚ್ಚರಿಕೆ ಕೊಟ್ಟಿದ್ದಾರೆ.
ಹೌದು, ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯದ 37 ಶಾಸಕರು ಆಯ್ಕೆಯಾಗಿದ್ದಾರೆ. ನಮ್ಮ ಸಮಾಜ ಮುಂದಿನ ದಿನಗಳಲ್ಲಿ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತೆ. ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆ ಇದು ಶೇ 100 ರಷ್ಟು ಪರಿಣಾಮ ಬೀರುತ್ತೆ.

ಮೊದಲು ಮಾಡಿದ ತಪ್ಪನ್ನೇ ಪಕ್ಷ ಮತ್ತೆ ಮಾಡಬಾರದು. ಕೊಟ್ಟವರಿಗೆ ಸಚಿವ ಸ್ಥಾನ ಕೊಡದೆ ಹೊಸಬರಿಗೆ ಅವಕಾಶ ಕೊಡಿ. ಹೊಸ ನಾಯಕರು ಸಿದ್ಧರಾಗಬೇಕಲ್ವಾ ಎಂದು ಶಾಸಕ ವಿನಯ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಲ ನಮ್ಮ ಸಮಾಜದ 37 ಜನ ಶಾಸಕರು ಆಯ್ಕೆಯಾಗಿದ್ದಾರೆ. ಲಿಂಗಾಯತ ಮತದಾರರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಹೊಸಬರಿಗೆ ಸಚಿವ ಸ್ಥಾನ ಕೊಡಿ ಅಂತ ಮನವಿ ಮಾಡುತ್ತಿದ್ದೇವೆ. ಹೆಚ್ಚಿನ ಸ್ಥಾನ ಪಡೆದು ಸರ್ಕಾರ ಬಂದಿದೆ.

ಸಮಾಧಾನ ಮಾಡಲು ಏನೇನೋ ಮಾಡಲು ಹೋಗಿ ಈ ತರಹ ಆಗಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕೆ ಸಿಗುತ್ತೆ. ಯಾರು ಸಮಾಜಕ್ಕಾಗಿ ಹೋರಾಟ ಮಾಡಿ ಕೆಲಸ ಮಾಡಿದ್ದಾರೆಂದು ಪಕ್ಷ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಪಕ್ಷ ಇದನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.
ಇನ್ನೂ 37 ಜನರಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಇನ್ನೂ ಇಬ್ಬರು, ಮೂರು ಜನರಿಗೆ ಸಚಿವ ಸ್ಥಾನ ಕೇಳುತ್ತಿದ್ವಿ. ಸಮಾಜ ಕಟ್ಟುವ ಕೆಲಸ ಮಾಡಿ ನಮ್ಮ ಸಮಾಜದ ಮತ ಕಾಂಗ್ರೆಸ್ಗೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಇದು ಗೊತ್ತಿದೆ. ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಲಾಗಿದೆ. ಇನ್ನೂ ಮಂತ್ರಿಗಿರಿ ವಿಚಾರದಲ್ಲಿ ಮಾತ್ರವಲ್ಲದೆ ಖಾತೆ ಹಂಚಿಕೆಯಲ್ಲಿಯೂ ಲಿಂಗಾಯತರಿಗೆ ಅನ್ಯಾಯ ಆಗಿದೆ ಎನ್ನುವುದು ಎದ್ದು ಕಾಣುತ್ತದೆ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಸಹಜವಾಗಿ ಮತ್ತೆ ಆಗಿಯೇ ಆಗುತ್ತದೆ. ನಮ್ಮ ಒಂದೇ ಸಮಾಜ ಅಲ್ಲ, ಬೇರೆ ಬೇರೆ ಸಮಾಜಗಳಿಗೂ ಅವಕಾಶ ಸಿಗಬೇಕಿದೆ. ಹೊಸ ಹೊಸ ಯುವಕರಿಗೆ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತೇವೆ ಎಂದು ಹೇಳಿದರು.
ಗೋಹತ್ಯೆ ಕಾಯ್ದೆ ಕಾನೂನು ಹಿಂಪಡೆಯುವ ವಿಚಾರವಾಗಿ ಮಾತನಾಡಿ, ಗೋಹತ್ಯೆ ಕಾಯ್ದೆ ಬಗ್ಗೆ ಮಾತನಾಡುವ ಬಿಜೆಪಿಯ ಯಾವ ಮುಖಂಡರ ಮನೆಯಲ್ಲೂಹಸು ಸಾಕಿಲ್ಲ. ಮನೆಯಲ್ಲಿಒಂದು ಆಕಳು ಕಟ್ಟಿ ಸಾಧಕ ಬಾಧಕ ನೋಡಿಕೊಂಡು ಮಾತನಾಡಲಿ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಆಕಳು ಸಾಕಿದವನು ನಾನು. ದೇಸಿ ತಳಿಯ ಹಸುಗಳ ಸಂರಕ್ಷಣೆ ಮಾಡುವುದು ಉತ್ತಮ ವಿಚಾರ. ಆದರೆ, ಎಚ್‌ಎಫ್ ಆಕಳು ಗಂಡು ಕರು ಹಾಕಿದರೆ ಪ್ರಯೋಜನಕ್ಕೆ ಬರುವುದಿಲ್ಲ. ಅಲ್ಲದೇ, ವಯಸ್ಸಾದ ಎತ್ತುಗಳನ್ನು ಹಾಗೂ ಬರಡು ಬಿದ್ದ ಆಕಳುಗಳನ್ನು ಏನು ಮಾಡಬೇಕು ಎಂದು ವಿನಯ ಕುಲಕರ್ಣಿ ಪ್ರಶ್ನಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು. ಇನ್ನು ಗೋಮಾತೆ ಹೆಸರಿನಲ್ಲಿರಾಜಕೀಯ ಮಾಡುವುದನ್ನು ಬಿಟ್ಟು ದನ, ಕರುಗಳನ್ನು ಸಾಕುವವರು, ಒಳ್ಳೆಯ ರೈತರನ್ನು ಕರೆಸಿ ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.












Click it and Unblock the Notifications