MLA BY Vijayendra on Budget: ಸಿದ್ದರಾಮಯ್ಯ ಬಜೆಟ್ ಡಿ ಕೆ ಶಿವಕುಮಾರ್ ಗೂ ನಿರಾಶೆ ಆಗಿದೆ: ಬಿ. ವೈ. ವಿಜಯೇಂದ್ರ
ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ದರಾಮಯ್ಯ ನವರ 14 ನೇ ಬಜೆಟ್ ಅನ್ನೋದು ಬಿಟ್ಟರೆ ಬೇರೆ ವಿಶೇಷತೆ ಏನು ಈ ಬಜೆಟ್ ನಲ್ಲಿ ಕಾಣುತ್ತಿಲ್ಲ. ಕೇವಲ ಜನರಿಗೆ ಮಾತ್ರವಲ್ಲ ಅವರ ಪಕ್ಷದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೂ ನಿರಾಸೆ ತಂದ ಬಜೆಟ್ ಇದಾಗಿದೆ ಎಂದು ಬಿಜೆಪಿ ಶಾಸಕ ವಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನವರ ಬಜೆಟ್ ಮೇಲೆ ಬಹಳ ನಿರೀಕ್ಷೆ ಇತ್ತು. 5 ಗ್ಯಾರಂಟಿ ಗಳನ್ನು ಸಂಪೂರ್ಣ ವಾಗಿ ಜಾರಿ ಮಾಡುತ್ತಾರೆ . ಅವರ ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಎಲ್ಲವೂ ಜಾರಿ ಆಗುತ್ತೆ ಅಂತ. ಆದ್ರೇ ಈಗ ಜನರಿಗೆ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.

ನೀರಾವರಿ ಸಂಪನ್ಮೂಲವನ್ನೇ ಮೀಸಲಿರಿಸಿಲ್ಲ ಮೇಕೆದಾಟುಗೆ 9 ಸಾವಿರ ಕೋಟಿ ಮೀಸಲಿರುತ್ತೇವೆ ಅಂದ್ರು ಮಹದಾಯಿ ಯೋಜನೆಗೆ 3 ಸಾವಿರ ಕೋಟಿ ಇಡುತ್ತೇವೆ ಅಂತ ಹೇಳಿದ್ರು. ಆದರೆ ಈಗ ಅನುದಾನ ಮೀಸಲರಿಸಿಲ್ಲ. ನೀರಾವರಿಗೂ ದುಡ್ಡು ಮೀಸಲಿರಿಸದೇ ಡಿ ಕೆ ಶಿವಕುಮಾರ್ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಡಿ ಕೆ ಶಿವಕುಮಾರ್ ಮೇಲಿನ ಸೇಡಿನ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಆರ್ಥಿಕ ಶಿಸ್ತುನ್ನು ಕಾಪಾಡಾದೇ ಇದ್ದಿದ್ರೇ ಜಿಎಸ್ಟಿ ಕಲೆಕ್ಷನ್ ಇಷ್ಟೊಂದು ಆಗ್ತಿರಲಿಲ್ಲ. ಬಂಡವಾಳ ಹೂಡಿಕೆ ಆಗುತ್ತಿರಲಿಲ್ಲ.ಒಟ್ಟಿನಲ್ಲಿ ರಾಜ್ಯದ ಜನ ಏನು ನಿರೀಕ್ಷೆ ಮಾಡಿದ್ದಾರೋ ಅದನ್ನು ಪೂರೈಸದ ನಿರಾಸೆ ಉಂಟು ಮಾಡಿದ ಬಜೆಟ್ ಎಂದು ಹೇಳಿದರು .












Click it and Unblock the Notifications