ಗ್ಯಾರಂಟಿ ಸರ್ಕಾರ ಉಳಿಯಲ್ಲ ಎಂದ ಬಿಎಸ್ವೈ; 65 ಇರೋದು 165 ಆಗುತ್ತಾ...? ಎಂದು ತಿರುಗೇಟು ಕೊಟ್ಟ ಮಧುಬಂಗಾರಪ್ಪ
ಶಿವಮೊಗ್ಗ, ಜೂನ್ 19: ಬಿಜೆಪಿ ಅಂದ್ರೇ ಬಿಜಿನೆಸ್ ಜನತಾ ಪಾರ್ಟಿ. ಬ್ರಿಟಿಷ್ ಜನತಾ ಪಾರ್ಟಿ, ಈಗಾಗಲೇ ರಾಜ್ಯದ ಜನತೆ ತೋರಿಸಿಕೊಟ್ಟಿದ್ದಾರೆ. ಅದನ್ನು ನೋಡಿ ಕಲಿರೀ, ಭಾಷಣ ಮಾಡುವುದನ್ನ ಬಿಡಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಪಕ್ಷದ ಪ್ರಾಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೆವೆ. ಯಾವುದೇ ಇಲಾಖೆಯಲ್ಲಿ ಹಗರಣ ಆಗಿದ್ರೂ ತನಿಖೆ ನಡೆಸುತ್ತೆವೆ, ಸರ್ಕಾರದ ಹಣ ಜನರಿಗೆ ಸೇರಬೇಕು. ಅಲ್ಲಿ ತಪ್ಪಾಗಿದ್ರೇ ಯಾರೇ ಅದ್ರೂ ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಕರ ನೇಮಕಾತಿ ಹಗರಣದ್ದು ತನಿಖೆ ನಡೆಯುತ್ತಿದೆ. ನಾನು ಮಾತನಾಡಲ್ಲ. ನನಗೆ ಮಾಡಲು ಬೇರೆಯದ್ದೇ ಕೆಲಸಗಳಿವೆ ಎಂದು ಹೇಳಿದರು.

ಗ್ಯಾರಂಟಿ ಸರ್ಕಾರ ಉಳಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, 65 ಇರೋದು 165 ಆಗುತ್ತಾ.?ಇನ್ನು ಅದೇ ಲೆಕ್ಕದಲ್ಲೇ ಬಿಜೆಪಿಯವರು ಇದ್ದಾರೆ. ಜೀವಮಾನದಲ್ಲಿ ಯಾವತಾದ್ರೂ ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಬಿಜೆಪಿ ಕೆಲಸ ಮಾಡಿದ್ದಾರಾ..? ಜನರೇ ನಿರ್ಧಾರ ಕೊಟ್ಟಿದ್ದಾರೆ. ಇಂತಹ ಬಿಜೆಪಿ ಸರ್ಕಾರ ಬೇಡ ಎಂದು. ಬಿಜೆಪಿ ಅಂದ್ರೇ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ ಇದನ್ನೇ ಜನ ತೋರಿಸಿಕೊಟ್ಟಿದ್ದಾರೆ. ಅದನ್ನು ನೋಡಿ ಕಲಿರೀ. ಭಾಷಣ ಮಾಡೋದು ಬಿಡಿ ಎಂದು ತಿರುಗೇಟು ನೀಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಪ್ರಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ. ಅದನ್ನು ಓದಲಿ, ಮತಾಂತರ ಮಾಡ್ತಾರೆ ಎಂದು ಇವರು ಭಾಷಣ ಹೊಡೆದಿದ್ರಲ್ಲ. ಅದೇ ಜನರೇ ನಮಗೆ ಓಟ್ ಹಾಕಿ ಗೆಲ್ಲಿಸಿದ್ದು, ಪ್ರಣಾಳಿಕೆ ಓದಲಿ.. ನಂತರ ನಾನು ಉತ್ತರ ಕೊಡ್ತೇನೆ ಎಂದು ಬಿಜೆಪಿ ನಾಯಕರ ವಿರುದ್ದ ಮಧು ಬಂಗಾರಪ್ಪ ಟಾಂಗ್ ನೀಡಿದರು.
ರಾಜ್ಯ ಹಾಗೂ ಕೇಂದ್ರದ ನಡುವೆ ಅಕ್ಕಿ ಸಂಘರ್ಷ ವಿಚಾರವಾಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ನಡುವೆ ಹೊಂದಾಣಿಕೆ ಇರಬೇಕು. ಆದರೆ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ. ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನು ಕೇಳುತ್ತಿಲ್ಲ. ನಾವು ಬೇರೆ ಏನು ಬುಸಿನೆಸ್ ಮಾಡುತ್ತಿಲ್ಲ. ಈಗ ನೋಡಿದ್ರೇ 15 ಕೊಡಿ ಅಂತಿದ್ದಾರೆ. ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಸೋತಾಗ ಸಹಜವಾಗಿ ಎಲ್ರೂ ಮಾಡ್ತೇರೆ. ಅದನ್ನೇ ಬಿಜೆಪಿ ಕೂಡ ಮಾಡುತ್ತಿದೆ. ಜನರು ಕೂಡ ಇದನ್ನು ಗಮನಿಸುತ್ತಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿರು.

ಗ್ಯಾರಂಟಿ ನೀಡುವುದರ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. 10 ಕೆ.ಜಿ ಕೊಟ್ಟೇ ಕೊಡುತ್ತೇವೆ. 12 ನೇ ತಾರೀಖು ಅಕ್ಕಿ ಕೊಡುತ್ತೇವೆ ಅನ್ನೋದು, ನಂತರ ಮೂರು ದಿನ ಬಿಟ್ಟು ಕೊಡಲ್ಲ ಅನ್ನೋದು.. ಇದನ್ನೆಲ್ಲಾ ಗಮನಿಸಿದ್ರೇ ಪ್ರತಿ ಯೋಜನೆಲೂ ದ್ವೇಷದ ರಾಜಕಾರಣ ಕಾಣಿಸುತ್ತೆ. ಕೇಂದ್ರಕ್ಕೆ ಅತಿ ಹೆಚ್ಚು 3 ಲಕ್ಷ ಕೋಟಿಯಷ್ಟು ಜಿಎಸ್ಟಿ ತೆರಿಗೆ ರಾಜ್ಯದಿಂದಲೇ ಹೋಗುತ್ತದೆ. ಆದರೆ, ಅವರು ನಮಗೆ 50-60 ಸಾವಿರ ಕೋಟಿ ಕೊಡ್ತಾರೆ ಅಷ್ಟೇ. ಇದನ್ನೆಲ್ಲಾ ನಾವು ಹೇಳ್ಬೇಕು ಅಲ್ವಾ. ಬಹುಪಾಲು ತೆರಿಗೆ ತಗೊಳ್ತಾರಲ್ವಾ. ನನ್ನ ಇಲಾಖೆಯದ್ದೆ ನಾನು ಹೇಳ್ಳುತ್ತೇನೆ.
ಶಿಕ್ಷಣಕ್ಕೆ ಪ್ರತಿ ವಿದ್ಯಾರ್ಥಿಗೆ ಕೇಂದ್ರದಿಂದ ಎರಡೂವರೆ ಸಾವಿರದಷ್ಟು ಕೊಡ್ತಾರೆ. ಅದೇ ಗುಜರಾತ್ ಸೇರಿದಂತೆ ಬೇರೆ ರಾಜ್ಯಕ್ಕೆ ಪ್ರತಿ ವಿದ್ಯಾರ್ಥಿಗೆ 6500 ರೂ. ವರೆಗೂ ಕೊಡ್ತಾರೆ. ನಾನು ಅಧಿಕಾರಿಗಳಿಗೆ ಈ ರೀತಿ ಭೇದಭಾವ ಗಮನಿಸೋಕೆ ಹೇಳಿದ್ದೇನೆ. ಕೇಂದ್ರಕ್ಕೆ ಇಷ್ಟು ಜಿಎಸ್ಟಿ ಕೊಡುವಾಗ ಅವರಿಗೂ ಮಾನವೀಯತೆ ಇರಬೇಕಲ್ವಾ..? ಗೆದ್ದಿರುವ 25 ಜನ ಸಂಸದರು ಏನು ಮಾಡುತ್ತಿದ್ದಾರೆ. ನಮ್ಮ ಪಾಲು ಹೋಗಿ ಯಾವಾಗಾದ್ರೂ ಕೇಳಿದ್ದಾರಾ.? ಎಂದು ಪ್ರಶ್ನಿಸಿದರು.
ಅಕ್ಕಿಗೂ ಮೋಸ ಮಾಡಿ, ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಇಷ್ಟು ಕೊಟ್ಟಿದ್ದೇವೆ ಎಂದು ಮೋದಿ ಕೇಳಲಿ. ಜನ ಗೌರವ ಕೊಡ್ತಾರೆ. ಇಲ್ಲಿ ಬಂದು ಪ್ರತಿಭಟನೆ ಮಾಡ್ತಾರೆ.. ಮೋದಿ ಮನೆ ಮುಂದೆ ಯಾವಾಗಾದ್ರೂ ಮಾಡಿದ್ದಾರಾ..? ಕೆಟ್ಟ ಬುದ್ದಿ ನಿಲ್ಲಿಸಿ, ಇನ್ನಾದರೂ ಬಿಜೆಪಿಯವರು ಅರ್ಥ ಮಾಡಿಕೊಳ್ಳಲಿ. ಜನ 66-67 ಕೊಟ್ಟಿದ್ದಾರೆ. ಅದನ್ನು ಅವರು ಲೆಕ್ಕ ಮಾಡಿಕೊಳ್ಳಲಿ ಎಂದು ಬಿಜೆಪಿ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications