ಉದ್ಯೋಗ ಕೇಳಿದಾಗ ಮೌನ, ಚುನಾವಣೆ ಬಂದಾಗ ಮಾತು; ಮೋದಿಯ ಮಾತು, ಮೌನದ ಬಗ್ಗೆ ದಿನೇಶ್‌ ಗುಂಡೂರಾವ್‌ ವಿಮರ್ಶೆ

ಬೆಂಗಳೂರು, ಆಗಸ್ಟ್‌ 02: ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ. ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ. ಆದರೆ ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಿ ಮೋದಿ ವಿರುದ್ದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಮಣಿಪುರ ಗಲಭೆಗೆ ಸಂಬಂಧಪಟ್ಟಂತೆ ಮೋದಿಯವರ ಮೌನವನ್ನು ಬುದ್ಧಿವಂತರ ಲಕ್ಷಣವೆನ್ನಬೇಕೋ ಅಥವಾ ಸಮರ್ಥಿಸಿಕೊಳ್ಳಲು ಆಗದ ಅಜ್ಞಾನವೆನ್ನಬೇಕೋ? ಎಂದು ಪ್ರಶ್ನಿಸಿದ್ದಾರೆ.

outrage-against-pm-narendra-modi

ಈ ವೇಳೆ ಪ್ರಧಾನಿ ಮೋದುಯವರಯ ಮೌನವಾಗುವ ಸಂದರ್ಭಗಳನ್ನ ಟ್ವೀಟ್‌ ಮೂಲಕ ದಿನೇಶ್‌ ಗುಂಡೂರಾವ್‌ ಹಂಚಿಕೊಂಡಿದ್ದಾರೆ. ಮೋದಿಯವರು, ಗಲಭೆಗಳಾದಾಗ, ಸಾಮೂಹಿಕ ನರಮೇಧಗಳಾಗುವಾಗ, ಮಹಿಳೆಯರ ನಗ್ನ ಮೆರೆವಣಿಗೆಯಾಗುವಾಗ, ಬೆಲೆಯೇರಿಕೆಯಾದಾ, PMCares ಫಂಡ್ ಬಗ್ಗೆ ಕೇಳಿದಾಗ ಹಾಗೂ 2 ಕೋಟಿ ಉದ್ಯೋಗದ ಬಗ್ಗೆ ಕೇಳಿದಾಗ, ಕಪ್ಪುಹಣದ ಬಗ್ಗೆ ಕೇಳಿದಾಗ, ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ ಮಾತ್ರ ಮೋದಿ ಮೌನವಹಿಸುತ್ತಾರೆ. ಈ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುವುದು ಚುನಾವಣೆ ಬಂದಾಗ, ಪ್ರಚಾರಕ್ಕೆ ಕರೆದಾಗ, ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ, ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ ಹಾಗೂ ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ‌ ಪಕ್ಷದ ನಾಯಕರು ಎದುರಿರುವಾಗ ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.

ಮಣಿಪುರ ಗಲಭೆ ಸಂಬಂಧ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪದೇ ಪದೇ ಚಾಟಿ ಬೀಸುತ್ತಲೇ ಇದೆ. ಇಷ್ಟಾದರೂ ಡಬಲ್ ಇಂಜೀನ್ ಸರ್ಕಾರದ ದಪ್ಪ ಚರ್ಮಕ್ಕೆ ಯಾವುದೇ ಚಾಟಿ ಏಟು ತಾಗುತ್ತಿಲ್ಲ. ಮಣಿಪುರ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿರುವ ಕೇಂದ್ರ ಭಾರತದ ನೆಲದಲ್ಲಿ ಸುದೀರ್ಘ ರಕ್ತಸಿಕ್ತ ಅಧ್ಯಾಯ ಬರೆಯಲು ಮುಂದಾಗಿದೆ.ಮಣಿಪುರ ವಿಚಾರದಲ್ಲಿ ಪ್ರಧಾನಿಯವರು ಯಾಕೆ ಮೌನ ಮುರಿಯುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ

ಅವರ ಮೌನದ ಹಿಂದಿರುವುದು ಅಸಹಾಯಕತೆಯೋ ಅಥವಾ ರಾಜಕೀಯ ಲಾಭ ಗಳಿಸುವ ಕುಯುಕ್ತಿಯೋ ತಿಳಿಯುತ್ತಿಲ್ಲ. ಗುಜರಾತ್ ಗಲಭೆ ಸಂದರ್ಭದಲ್ಲೂ ಮೋದಿ ಇದೇ ಮೌನ ವಹಿಸಿದ್ದರು.ಈಗ ಪ್ರಧಾನಿಯಾದಾಗಲೂ ಮಣಿಪುರ ವಿಚಾರದಲ್ಲಿ ಮೌನವಹಿಸಿದ್ದಾರೆ. ಮೋದಿಯವರ ಮೌನದ ಹಿಂದಿನ ಮರ್ಮವೇನು? ಎಂದು ಪ್ರಶ್ನಿಸಿದ ಅವರು, ಗುಜರಾತ್ ಗಲಭೆ ನಡೆಯುವಾಗ ಕೇಂದ್ರದಲ್ಲಿ BJP ಸರ್ಕಾರವಿತ್ತು.

ಈಗ ಮಣಿಪುರದಲ್ಲಿ ಗಲಭೆ ನಡೆಯುತ್ತಿರುವಾಗಲೂ ಕೇಂದ್ರದಲ್ಲಿ BJP ಸರ್ಕಾರವೇ ಇದೆ.ಕನಿಷ್ಠ ಪಕ್ಷ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಮೋದಿಯವರಿಗೆ 'ರಾಜಧರ್ಮ' ಪಾಲಿಸುವಂತೆ ಹೇಳಿದ್ದರು. ಈಗ ಮತ್ತೊಮ್ಮೆ ಮೋದಿಯವರಿಗೆ ರಾಜಧರ್ಮ ಪಾಲಿಸುವಂತೆ ಹೇಳಲು BJPಯಲ್ಲಿ ಯಾರಿಗೆ ತಾಕತ್ತಿದೆ? ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+