ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 18ರ ಗುರುವಾರ 'ಮಾಸ್ಕ್ ದಿನ' ಆಚರಣೆ; ಮಾರ್ಗಸೂಚಿಗಳು

|
Google Oneindia Kannada News

ಬೆಂಗಳೂರು, ಜೂನ್ 17 : ಕೊರೊನಾ ವೈರಸ್ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರ ಜೂನ್ 18ರಂದು 'ಮಾಸ್ಕ್ ದಿನ' ಆಚರಣೆ ಮಾಡಲಿದೆ. ಮಾಸ್ಕ ದಿನ ಆಚರಣೆ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

Recommended Video

BSY today green signal to Caravan tourism in Bengaluru | Tourism | Oneindia Kannada

ಕೋವಿಡ್ - 19 ಸೋಂಕು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಸೋಂಕು ಹರಡದಂತೆ ತಡೆಯಲು ಮಾಸ್ಕ್ ಧರಿಸುವುದು, ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಪ್ರಮುಖವಾದ ಅಂಶ.

ಮೆಟ್ರೋ ಪ್ರಯಾಣಕ್ಕೆ ಆರೋಗ್ಯ ಸೇತು, ಮಾಸ್ಕ್ ಕಡ್ಡಾಯ ಮೆಟ್ರೋ ಪ್ರಯಾಣಕ್ಕೆ ಆರೋಗ್ಯ ಸೇತು, ಮಾಸ್ಕ್ ಕಡ್ಡಾಯ

ಈ ಕುರಿತು ಜನ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ 18 ಜೂನ್ 2020ರ ಗುರುವಾರದಂದು 'ಮಾಸ್ಕ್ ದಿನ'ವನ್ನು ಆಚರಣೆ ಮಾಡಲಿದೆ. ಜಿಲ್ಲೆ, ತಾಲೂಕು, ಕಾರ್ಪೊರೇಷನ್/ಪಂಚಾಯತ್/ಕಂದಾಯ ವ್ಯಾಪ್ತಿಯಲ್ಲಿ 'ಮಾಸ್ಕ್ ದಿನ' ಆಚರಣೆ ನಡೆಯಲಿದೆ.

ಜನರನ್ನು ಆಕರ್ಷಿಸುತ್ತಿದೆ ಮೋದಿ ಮಾಸ್ಕ್, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಜನರನ್ನು ಆಕರ್ಷಿಸುತ್ತಿದೆ ಮೋದಿ ಮಾಸ್ಕ್, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ

ಬೆಂಗಳೂರು ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಮಾಸ್ಕ್ ಧರಿಸಿ ಜನಜಾಗೃತಿ ಮೂಡಿಸಲು 1 ಕಿ. ಮೀ. ಪಾದಯಾತ್ರೆ ನಡೆಸಲಿದ್ದಾರೆ. ಮಾಸ್ಕ್ ದಿನ ಆಚರಣೆಗೂ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಕೊರೊನಾ ಆತಂಕ: ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸಿದ್ರು ಮಾಸ್ಕ್‌ಕೊರೊನಾ ಆತಂಕ: ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸಿದ್ರು ಮಾಸ್ಕ್‌

ಮಾರ್ಗಸೂಚಿಗಳು

ಮಾರ್ಗಸೂಚಿಗಳು

ಜಿಲ್ಲಾ ಮತ್ತು ತಾಲೂಕು ಆಡಳಿತವು ಚುನಾಯಿತ ಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ವೈದ್ಯಕೀಯ ಸಿಬ್ಬಂದಿಗಳು ಸೇರಿಕೊಂಡು 'ಮಾಸ್ಕ್ ದಿನ' ಆಚರಣೆ ಮಾಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್ ಆದೇಶದಲ್ಲಿ ಹೇಳಿದ್ದಾರೆ. ಮಾಸ್ಕ್‌ ದಿನ ಆಚರಣೆ ನೆಪದಲ್ಲಿ ಜನಸಂದಣಿ ಸೇರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

ಪಾದಯಾತ್ರೆ ಕೈಗೊಳ್ಳಬೇಕು

ಪಾದಯಾತ್ರೆ ಕೈಗೊಳ್ಳಬೇಕು

* ಜಿಲ್ಲಾ/ ತಾಲೂಕು/ ಕಾರ್ಪೊರೇಷನ್/ ಪಂಚಾಯತ್/ ಕಂದಾಯ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಜಿಲ್ಲಾಡಳಿತವು ಕೋವಿಡ್ - 19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆಯನ್ನು ಕೈಗೊಳ್ಳತಕ್ಕದ್ದು.

50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ

50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ

ಜನ ಜಾಗೃತಿ ಮೂಡಿಸುವ ಈ ಪಾದಯಾತ್ರೆಯಲ್ಲಿ 50 ಜನರಿಗೆ ಮೀರಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಭಾಗವಹಿಸಬಾರದು. ಪಾದಯಾತ್ರೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಮಾಜಕ್ಕೆ ಮಾದರಿ ಆಗಬೇಕು.

ಸ್ಯಾನಿಟೈಸರ್ ಬಳಕೆ

ಸ್ಯಾನಿಟೈಸರ್ ಬಳಕೆ

ಜನ ಜಾಗೃತಿ ಪಾದಯಾತ್ರೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಲಕೆ, ಮಾಸ್ಕ್ ಧರಿಸುವಿಕೆ, ಆಗಾಗ ಸೋಪಿನಿಂದ ಕೈ ತೊಳೆಯುವುದು ಹಾಗೂ ಸ್ಯಾನಿಟೈಸರ್ ಬಳಸುವಿಕೆ ಕುರಿತು ಅರಿವನ್ನು ಮೂಡಿಸಬೇಕು. ಪರಿಣಾಮಕಾರಿ ಸಂವಹನ ಫಲಕಗಳನ್ನು ಬಳಸಬೇಕು.

English summary
Karnataka government will observe Mask Day on June 18, 2020 to create awareness on wearing mask in a view of COVID - 19. Here are the guidelines to conduct event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X