ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದ್ದು ಯಾಕೆ? ಕಾಂಗ್ರೆಸ್ ಹೇಳಿದೆ ನೋಡಿ ಕಾರಣ!
ಪ್ರತಾಪ್ ಸಿಂಹ ಲೋಕಸಭೆ ಚುನಾವಣೆ 2024ರಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಪರದಾಡಿದ್ದಾರೆ. ಮೈಸೂರು & ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸತತ 2 ಬಾರಿ ಸಂಸದ ಸ್ಥಾನಕ್ಕೆ ಆಯ್ಕೆಯಾಗಿದ್ದ ಸಿಂಹಗೆ ಹೀನಾಯ ಹಿನ್ನಡೆಯಾಗಿದೆ. ಹೀಗಿದ್ದಾಗ ಉರಿಯುತ್ತಿರುವ ಬೆಂಕಿಗೆ ಕಾಂಗ್ರೆಸ್ ನಾಯಕರು ತುಪ್ಪ ಸುರಿಯುತ್ತಿದ್ದು, ಸಿಂಹ ಟಿಕೆಟ್ ಕಳೆದುಕೊಂಡಿದ್ದು ಯಾಕೆ? ಅನ್ನೋದನ್ನ ಕರ್ನಾಟಕ ಕಾಂಗ್ರೆಸ್ ಈಗ ವಿವರಿಸಿದೆ.
ಪ್ರತಾಪ್ ಸಿಂಹ ಈ ಬಾರಿ ಗೆಲುವು ಸಾಧಿಸಿದ್ದರೆ ಹೊಸ ಇತಿಹಾಸ ನಿರ್ಮಿಸುತ್ತಿದ್ದರು. ಆದ್ರೆ ಆಗಿದ್ದೇ ಬೇರೆ, ಖಂಡಿತ ತಮಗೇ ಟಿಕೆಟ್ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಹಾಲಿ ಸಂಸದ ಪ್ರತಾಪ್ ಸಿಂಹಗೆ ದೊಡ್ಡ ಆಘಾತ ಎದುರಾಗಿದೆ. ಇದಕ್ಕೆ ಕಾರಣ ಹತ್ತಾರು ಎನ್ನುತ್ತಿದ್ದಾರೆ, ಮೈಸೂರು & ಕೊಡಗು ಜಿಲ್ಲೆಯ ಬಿಜೆಪಿ ಪಕ್ಷದ ಸ್ಥಳೀಯ ನಾಯಕರು. ಹೀಗಿದ್ದಾಗ ಕಾಂಗ್ರೆಸ್ ಪಡೆ ಸಿಂಹ ವಿರುದ್ಧ ಸಾಲು ಸಾಲು ಮಾತಿನ ದಾಳಿ ನಡೆಸುತ್ತಿದೆ. ಅದ್ರಲ್ಲೂ ಈಗ ಇನ್ನೊಂದು ಹೆಜ್ಜೆ ಮುಂದಿಟ್ಟು, ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಿದ್ದು ಏಕೆ? ಅನ್ನೋದನ್ನ ಪೂರ್ತಿ ವಿವರಿಸಿದೆ. ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.

ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದ್ದು...
ಕಾಂಗ್ರೆಸ್ ಇದೀಗ ಒಂದು ಟ್ವೀಟ್ ಮಾಡಿ ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಂಡಿದ್ದು ಏಕೆ? ಎಂಬುದನ್ನ ವಿವರಿಸಿದೆ, 'ಸಂಸತ್ ದಾಳಿಕೋರರೊಂದಿಗೆ ಕೈಜೋಡಿಸಿ ಪಾಸ್ ನೀಡಿದ್ದಕಾಗಿಯೇ ಪ್ರತಾಪ್ ಸಿಂಹರಿಗೆ ಟಿಕೆಟ್ ನಿರಾಕರಿಸಲಾಗಿದೆಯೇ? ಸಂಸತ್ ದಾಳಿಯಲ್ಲಿ ಪ್ರತಾಪ್ ಸಿಂಹರ "ಸ್ಪೋಟಕ ಸತ್ಯ"ಗಳಿದೆಯೇ? ಸಂಸತ್ ದಾಳಿಯ ಬಗೆಗಿನ ತನಿಖೆ ಎಲ್ಲಿಯವರೆಗೆ ಬಂದಿದೆ? ದಾಳಿ ಹಿಂದಿನ ಕೈವಾಡ ಯಾರದ್ದಿದೆ? ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಈ ವಿಷಯವನ್ನು ಬಹಿರಂಗಪಡಿಸಬೇಕು. @mepratap ಬಗ್ಗೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ @BJP4Karnataka ಗೆ ಈ ಪ್ರಶ್ನೆಗಳಿಗೆ ಉತ್ತರಿಸುವ ದಮ್ಮು ತಾಕತ್ತಿದೆಯೇ?' ಎಂದು ಇದೀಗ ಪ್ರಶ್ನೆ ಮಾಡಿದೆ.
ಸಂಸತ್ ದಾಳಿಕೋರರೊಂದಿಗೆ ಕೈಜೋಡಿಸಿ ಪಾಸ್ ನೀಡಿದ್ದಕಾಗಿಯೇ ಪ್ರತಾಪ್ ಸಿಂಹರಿಗೆ ಟಿಕೆಟ್ ನಿರಾಕರಿಸಲಾಗಿದೆಯೇ? ಸಂಸತ್ ದಾಳಿಯಲ್ಲಿ ಪ್ರತಾಪ್ ಸಿಂಹರ “ಸ್ಪೋಟಕ ಸತ್ಯ”ಗಳಿದೆಯೇ?
— Karnataka Congress (@INCKarnataka) March 14, 2024
ಸಂಸತ್ ದಾಳಿಯ ಬಗೆಗಿನ ತನಿಖೆ ಎಲ್ಲಿಯವರೆಗೆ ಬಂದಿದೆ?
ದಾಳಿ ಹಿಂದಿನ ಕೈವಾಡ ಯಾರದ್ದಿದೆ? ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಈ ವಿಷಯವನ್ನು ಬಹಿರಂಗಪಡಿಸಬೇಕು.…
ಪ್ರತಾಪ್ ಸಿಂಹ ಗೆಲುವಿನ ಇತಿಹಾಸ
2014ರಲ್ಲಿ ಬರೋಬ್ಬರಿ 5,03,908 ಮತ ಪಡೆದಿದ್ದ ಪ್ರತಾಪ್ ಸಿಂಹ ಅವರು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಆಗ ಇವರ ಎದುರು ನಿಂತಿದ್ದ ಎಚ್. ವಿಶ್ವನಾಥ್, 4,72,300 ಮತ ಪಡೆದಿದ್ದರು. 2019ರಲ್ಲಿ 6,88,974 ಮತ ಪಡೆದಿದ್ದರು ಪ್ರತಾಪ್ ಸಿಂಹ ಆಗ ಎದುರಾಳಿ ಆಗಿದ್ದ ಸಿ.ಎಚ್. ವಿಜಯಶಂಕರ್ 5,50,327 ಮತಗಳ ಪಡೆದಿದ್ದರು. ಈಗ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದೆ.

ಈ ಬಾರಿ ಕೂಡ ನಾನು ಗೆಲ್ತಿದ್ದೆ ಎಂಬ ಹುಮ್ಮಸ್ಸಿನಲ್ಲಿ ಇದ್ದ, ಮಾಜಿ ಪತ್ರಕರ್ತ ಪ್ರತಾಪ್ ಸಿಂಹ ಅವರಿಗೆ ಹೈಕಮಾಂಡ್ ಕೈಕೊಟ್ಟು. ಈ ಮೂಲಕವಾಗಿ ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ಕೊಟ್ಟಿದೆ ಬಿಜೆಪಿ. ಸುಲಭವಾಗಿ ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರ ಗೆಲ್ಲುವ ತಂತ್ರವೂ ಇಲ್ಲಿ ಇದೆ, ಹಾಗೇ ಇದರ ಜೊತೆಗೆ ಕಾಂಗ್ರೆಸ್‌ಗೆ ಶಾಕ್ ಕೊಡುವ ರಣತಂತ್ರವು ಬಿಜೆಪಿ ನಾಯಕರದ್ದಾಗಿದೆ. ಇದಕ್ಕೆಲ್ಲಾ ಉತ್ತರವನ್ನು ಪಡೆಯಲು ಎಲೆಕ್ಷನ್ ರಿಸಲ್ಟ್ ತನಕ ಕಾದು ನೋಡಬೇಕಿದೆ.












Click it and Unblock the Notifications