ರೈತರಿಗೆ ಮತ್ತೊಂದು ಶಾಕ್; ವಾರದಲ್ಲಿ ಒಂದು ದಿನ ಸಂಪೂರ್ಣ ವಿದ್ಯುತ್ ಕಡಿತ: ಲಕ್ಷ್ಮಣ್ ಸವದಿ ಹೇಳಿದಿಷ್ಟು!
ಬೆಳಗಾವಿ, ಅಕ್ಟೋಬರ್ 16: ರಾಜ್ಯದಲ್ಲಿ ಮಳೆಯ ಅಭಾವ ಹಾಗೂ ತೀವ್ರ ಬರಗಾಲದಿಂದ ರೈತ ಕಂಗಾಲಾಗಿದ್ದು, ಇತ್ತ ಸರ್ಕಾರವೂ ರೈತರಿಗೆ ಯಾವುದೇ ಪರಿಹಾರ ಧನ ನೀಡುತ್ತಿಲ್ಲ. ಅಲ್ಲದೇ ಲೋಡ್‌ಶೆಡ್ಡಿಂಗ್ ನಿಂದಾಗಿ ರೈತರ ಪಂಪ್‌ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ದೊರೆಯದೇ ಬೆಳೆ ಒಣಗುತ್ತಿದ್ದು, ರೈತರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ.
ಹೌದು, ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ನಿಂದಾಗಿ ರೈತ ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದು, ಇದೀಗ ವಾರದಲ್ಲಿ ಒಂದು ದಿನ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲು ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ ಎಂದು ಚರ್ಚೆಯಾಗುತ್ತಿದೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ, ವಾರದಲ್ಲಿ ಒಂದು ದಿನ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲು ಚಿಂತನೆ ನಡೆದಿದೆ. ರೈತರು ಸಹಕರಿಸಬೇಕು ಎಂದು ಹೇಳುವ ಮೂಲಕ ನದಿ ದಂಡೆಯ ರೈತರಿಗೆ ಶಾಕ್ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಮಳೆ ಅಭಾವ ಹಾಗೂ ಲೋಡ್ ಶೆಡ್ಡಿಂಗ್ ನಿಂದಾಗಿ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಚಿಂತನೆಯೂ ಚಿಂತೆಗೀಡಿ ಮಾಡಿದೆ. ಕೃಷ್ಣಾ ನದಿ ದಂಡೆಯ ವಿದ್ಯುತ್ ಕಡಿತಕ್ಕೆ ಚಿಂತನೆ ನಡೆಸಿರುವ ಶಾಸಕ ಲಕ್ಷ್ಮಣ್ ಸವದಿ. ಬೇಸಿಗೆ ಸಂದರ್ಭದಲ್ಲಿ ನೀರು ಉಳಿವಿಗಾಗಿ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಿದೆ. ಈ ನಿರ್ಧಾರಕ್ಕೆ ರೈತರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಮಳೆ ಅಭಾವ ಹಾಗೂ ಬೆಳೆನಷ್ಟವಾಗಿ ರೈತರು ಬದುಕುವುದು ದುಸ್ತರವಾಗಿದೆ. ಇತ್ತ ಸೂಕ್ತ ರೀತಿಯಲ್ಲಿ ಸರ್ಕಾರ ರೈತರಿಗೆ ಪರಿಹಾರ ಧನವೂ ನೀಡುತ್ತಿಲ್ಲ. ಹೀಗಿರುವಾಗ ಮತ್ತೆ ವಿದ್ಯುತ್ ಕಡಿತ ಮಾಡುವ ಚಿಂತನೆ ನಡೆಸಿರುವುದಕ್ಕೆ ರೈತರ ಆಕ್ರೋಶಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications