Strike: ಸಾರಿಗೆ ನೌಕರರ ಮುಷ್ಕರ ನಡೆಯುತ್ತೋ- ಇಲ್ಲವೋ? ಸರ್ಕಾರದಿಂದ ನೋ ವರ್ಕ್-ನೋ ಪೇ ಆದೇಶ, ಸಚಿವರು ಹೇಳಿದ್ದೇನು?
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 'ಬೆಂಗಳೂರು ಚಲೋ'ಗೆ ಕರೆ ನೀಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರಿಂದ ಗುರುವಾರ (ಫೆ.19) ಸಾರಿಗೆ ಮುಷ್ಕರ ನಡೆಯುತ್ತೋ-ಇಲ್ಲವೋ? ಅಥವಾ ಎಂದಿನಂತೆ ಸಾರಿಗೆ ಸೇವೆ ಸಿಗುತ್ತಾ ಎಂಬ ಗೊಂದಲ ಉಂಟಾಗಿದೆ. ಏಕೆಂದರೆ ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಸಂಸ್ಥೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದರೊಂದಿಗೆ ಮುಷ್ಕರ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದಾರೆ.
KSRTC ಸಾರಿಗೆ ನಿಗಮಗಳ ನೌಕರರ ಯೂನಿಯನ್ ಮತ್ತು ಇತರ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ವತಿಯಿಂದ ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ನಾಳೆ ಗುರುವಾರ 'ಬೆಂಗಳೂರು ಚಲೋ' ಪ್ರತಿಭಟನೆ ನಡೆಯಲಿದೆ. ಇದಕ್ಕೆ ನಾಲ್ಕು ನಿಗಮದ (ಕೆಕೆಆರ್‌ಟಿಸಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಎನ್‌ಡಬ್ಲುಕೆಆರ್‌ಟಿಸಿ) ನೌಕರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಸರ್ಕಾರ ಮುಷ್ಕರಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಈ ಹಿಂದೆ ಎರಡು ಬಾರಿ ಇದೇ ರೀತಿ ಮುಷ್ಕರ ಘೋಷಣೆ ಆದ ಬಳಿಕ ಸರ್ಕಾರ ತಡೆ ನೀಡುವಲ್ಲಿ ಯಶಸ್ವಿಯಾಗಿತ್ತು.

ಬುಧವಾರ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ನೋಟಿಸ್ ನೀಡಲಾಗಿದೆ. ಸಾರ್ವಜನಿಕರಿಗೆ ಬಸ್ ಸಂಚಾರದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ. ನೌಕರರು ಯಾರಾದರೂ ಕೆಲಸ ಮಾಡದೇ ಹೋದಲ್ಲಿ ಅವರಿಗೆ ವೇತನ ನೀಡಲ್ಲ ಎಂದು 'ನೋ ವರ್ಕ್-ನೋ ಪೇ' ಆದೇಶ ಹೊರಡಿಸಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ ಸಾರಿಗೆ ನೌಕರರಿಗೆ ಖಡಕ್ ಸಂದೇಶ ರವಾನಿಸಿದೆ.
ಮುಷ್ಕರದ ಒಂದು ದಿನಕ್ಕೂ ಮುನ್ನ ಕೊನೆ ಗಳಿಗೆಯಲ್ಲಿ ಸರ್ಕಾರವು ನೌಕರರ ಪ್ರತಿಭಟನೆ ತಡೆಗೆ ಮುಂದಾಗಿದೆ. ನೌಕರರು ಮತ್ತು ಒಕ್ಕೂಟಗಳು ಈ ಆದೇಶ, ಸೂಚನೆಗಳಿಗೆ ಮಣಿಯುತ್ತವಾ? ಅಥವಾ ಬೇಡಿಕೆ ಈಡೇರಿಕೆ ಕೇಳಿ ಕೇಳಿ ಸಾಕಾದ ಹಿನ್ನೆಲೆ ನೌಕರರು ಮುಷ್ಕರಕ್ಕೆ ಧುಮುಕಿಯೇ ತೀರುತ್ತಾರಾ ಎಂಬುದು ಸ್ಪಷ್ಟವಾಗಬೇಕಿದೆ.
ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಬಿಡದಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ವೇತನ ಪರಿಷ್ಕರಣೆ, ಹಿಂಬಾಕಿ ಸೇರಿ ಹಲವು ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿವೆ. ಯೂನಿಯನ್ ಮುಖಸ್ಥರೊಂದಿಗೆ ಮಾತನಾಡುವಂತೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಅವರಿಗೆ ಹೇಳಲಾಗಿದೆ. ಅವರ ಮಾತಿಗೆ ನೌಕರರು ಒಪ್ಪುವ ವಿಶ್ವಾಸವಿದ್ದು, ಮುಷ್ಕರ ಕೈ ಬಿಡಬಹುದೆಂದು ತಿಳಿಸಿದರು.
ಸಾರಿಗೆ ನೌಕರರ ವೇತನ ಹಾಗೂ ಇತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುವುದು. ಸರ್ಕಾರದ ಗಮನ ಸೆಳೆಯಲು ಅವರು ಬೆಂಗಳೂರು ಚಲೋಗೆ ಮುಂದಾಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಅವರು ಮುಷ್ಕರ ನಡೆಸುವುದಲ್ಲ ಎಂದು ನಂಬಿರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರೊಂದಿಗೆ ಲಗೇಜ್ ದರ ಹೆಚ್ಚಳ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಸರ್ಕಾರ ಹೆಚ್ಚಿಸಿರಲಿಲ್ಲವೇ. ಟಿಕೆಟ್ ದರ ಹೆಚ್ಚಾದಂತೆ ಲಗೇಜ್ ದರವು ಏರಿಕೆ ಆಗುತ್ತದೆ. ನಮ್ಮ ಸರ್ಕಾರ ಸ್ವಲ್ಪ ತಡವಾಗಿಯೇ ಹೆಚ್ಚಿಸಿದೆ ಎಂದು ಸಾರಿಗೆ ಇಲಾಖೆ ನಡೆ ಸಮರ್ಥಿಸಿಕೊಂಡರು.
ಮುಷ್ಕರ ನಡೆದರೆ ಏನೇನು ಸಮಸ್ಯೆ ಆಗುತ್ತೆ?
ಒಂದು ವೇಳೆ ಸರ್ಕಾರ ಮತ್ತು ಅಧಿಕಾರಿಗಳ ಮನವೊಲಿಕೆಗ ಬಗ್ಗದೇ ನೌಕರರು ಅಂದುಕೊಂಡಂತೆ ಮುಷ್ಕರ ನಡೆಸಿದರೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸಾರಿಗೆ ಸಂಚಾರ ಅಸ್ತವ್ಯಸ್ತವಾಗುತ್ತದೆ. ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು. ಉದ್ಯೋಗಿಗಳು, ಮಹಿಳೆಯರು, ಮಕ್ಕಳು, ಊರುಗಳಿಂದ ಆಗಮಿಸುವವರಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಸ್ವಂತ ವಾಹನಗಳಲ್ಲಿ ಓಡಾಡುವವರಿಗೂ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ದಟ್ಟಣೆಯ ಬಿಸಿ ತಟ್ಟಲಿದೆ.
ಬಸ್ ಸಂಚಾರ ಸ್ಟಾಪ್: ನಮ್ಮ ಮೆಟ್ರೋ ಮೇಲೆ ಒತ್ತಡ ನಿರೀಕ್ಷೆ
ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವ ಹಾಗೂ ಇಲ್ಲಿಂದ ಹೋಗುವ ಬಸ್ ಸಂಚಾರ ಸ್ಥಗಿತವಾಲಿವೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಲ್ಲಿ ನಿತ್ಯ ತೆರಳುವ ವಿದ್ಯಾರ್ಥಿಗಳಿಗೂ ಸಾರಿಗೆ ಸಮಸ್ಯೆ ಎದುರಿಸಬಹುದು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳ ವ್ಯತ್ಯಯ ಉಂಟಾಗಿ, ಸಂಚಾರ ಸ್ಥಗಿತವಾದಲ್ಲಿ ನಮ್ಮ ಮೆಟ್ರೋ ಮೇಲೆ ಒತ್ತಡ ಹೆಚ್ಚಾಗಲಿದೆ. ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಜನ ತುಂಬಿ ತುಳಕಲಿದ್ದಾರೆ. ಇದರಿಂದ ದಟ್ಟಣೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಸಾರಿಗೆ ನೌಕರರ ಬೇಡಿಕೆಗಳೇನು?
ಈ ಹಿಂದೆ ನಾಲ್ಕು ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆ ಹೆಚ್ಚಳದ 38 ತಿಂಗಳ ವೇತನ ನೌಕರರಿಗೆ ಪಾವತಿ ಆಗದೇ ಬಾಕಿ ಉಳಿದುಕೊಂಡಿದೆ. ಇನ್ನೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ನೌಕರರ ವೇತನ ಪರಿಷ್ಕರಿಸಲಾಗಿತ್ತು. ವೇತನ ತಾರತಮ್ಯ ನಿವಾರಣೆ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ, ನೌಕರರ ಆರ್ಥಿಕ ಸಮಸ್ಯೆ ಬಗೆಹರಿಸುವಂತೆ ವರ್ಷಗಳಿಂದ ಕೇಳುತ್ತಾ ಬರಲಾಗಿದೆ. ಈ ಸಂಬಂಧ ಭರವಸೆ ನೀಡುತ್ತಾ ಬಂದಿರುವ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ನೌಕರರು ಬೇಸತ್ತು ಮುಷ್ಕರದ ಹಾದಿ ಹಿಡಿದಿದ್ದಾರೆ.
-
ಸ್ವಾವಲಂಬಿ ಬದುಕಿಗೆ ರಾಮಲಿಂಗಾ ರೆಡ್ಡಿ ಸಾಥ್: ಮಂಗಳಮುಖಿಯರು ಮತ್ತು ಮಹಿಳೆಯರಿಗೆ 20 EV ಆಟೋ ಭಾಗ್ಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications