Get Updates
Get notified of breaking news, exclusive insights, and must-see stories!

Krishna Byre Gowda Profile: ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಕೃಷ್ಣಬೈರೇಗೌಡ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಸ್ಥಾನ ಪಡೆದಿದರು. ಇಂದು(ಮೇ.27) ರಾಜಭವನದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ ಕಾಂಗ್ರೆಸ್ ಯುವ ನಾಯಕ ಕೃಷ್ಣಬೈರೇಗೌಡ 2023ರ ವಿಧಾನಸಭಾ ಚುನಾವಣೆಯಲ್ಲೂ ಬ್ಯಾಟರಾಯನಪುರದಲ್ಲಿ 38,204 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ ಅವರನ್ನು ಸೋಲಿಸಿದರು. ಆರನೇ ಬಾರಿಗೆ ಶಾಸಕರಾದ ಕೃಷ್ಣಬೈರೇಗೌಡ ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತರಲ್ಲಿ ಒಬ್ಬರು. ಕರ್ನಾಟಕದಲ್ಲಿ ಸಚಿವ ಸ್ಥಾನ ಪಡೆದ ಕೃಷ್ಣಬೈರೇಗೌಡ ಅವರ ರಾಜಕೀಯ ಜೀವನ ಹೇಗಿದೆ ನೋಡೋಣ.

1973 ರಂದು ಎಪ್ರಿಲ್ 4 ರಂದು ಬೆಂಗಳೂರಲ್ಲಿ ಕೃಷ್ಣಬೈರೇಗೌಡ ಅವರು ಹುಟ್ಟಿದರು. ಇವರ ತಂದೆ ಸಿ.ಬೈರೇಗೌಡ, ತಾಯಿ ಸಾವಿತ್ರಮ್ಮ. ಪತ್ನಿಯ ಹೆಸರು ಮೀನಾಕ್ಷಿ ಬೈರೇಗೌಡ. ಕೃಷ್ಣಬೈರೇಗೌಡ ಅವರು ಅಮೇರಿಕಾದಲ್ಲಿರುವ ಇಥಿಯೋಪಿಯಾ ರಾಜತಾಂತ್ರಿಕ ಕಚೇರಿಯಲ್ಲಿ ಒಂದಿಷ್ಟು ಕಾಲ ಕೆಲಸ ಮಾಡಿದ್ದರು. ಕೃಷ್ಣಬೈರೇಗೌಡ ಅವರು ಸರ್ಕಾರಿ ಶಾಲೆಯಲ್ಲಿ ತಮ್ಮ ವ್ಯಾಸಾಂಗವನ್ನು ಮುಗಿಸಿದರು. ಅಮೆರಿಕಾದಲ್ಲಿ ಇಂಟರ್‌ನ್ಯಾಷನಲ್‌ ಅಫೇರ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

 Krishna Byre Gowda Profile: Biography of Krishna Byre Gowda, Minister In Siddaramaiahs Cabinet in Karnataka

ಬಳಿಕ ಅಮೆರಿಕಾ ವಾಷಿಂಗ್ಟನ್‌ನಲ್ಲಿರುವ ಇಥಿಯೋಪಿಯಾ ರಾಜತಾಂತ್ರಿಕ ಕಚೇರಿಯಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಒಂದು ವರ್ಷ ಕೆಲಸ ಮಾಡಿದರು. ಇದಾದ ನಂತರ 2000 ದಿಂದ 2002ರ ಮಧ್ಯೆ ಕೋಲಾರದ ತಮ್ಮ ಜಮೀನಿನಲ್ಲಿ ಕೃಷಿಕರಾಗಿಯೂ ದುಡಿದಿದ್ದರು. ಕೃಷ್ಣ ಬೈರೇಗೌಡರು ಕೃಷಿ ಭಾಗ್ಯ, ಜಲಾಮೃತ, ಸ್ವಚ್ಛ ಮೇವ ಜಯತೆ ಕೃತಿಗಳನ್ನೂ ಬರೆದಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕ ತಂದೆ ನಿಧನದ ಬಳಿಕ 2003ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೋಲಾರದ ವೇಮಗಲ್ ಕ್ಷೇತ್ರದಿಂದ ಕಣಕ್ಕಿಳಿದರು, ಜಯಗಳಿಸಿ ವಿಧಾನಸಭೆ ಪ್ರವೇಶ ಮಾಡಿದರು.

ರಾಜಕೀಯ ಜೀವನ

2003ರಲ್ಲಿ ತಂದೆ ನಿಧನರಾದ ಬಳಿಕ ಅವರ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಥಮ ಬಾರಿಗೆ ಕೋಲಾರದ ವೇಮಗಲ್ ಕ್ಷೇತ್ರದಿಂದ ಗೆದ್ದು ಶಾಸಕರಾದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದಾಗ ವೇಮಗಲ್ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತು. ಕೃಷ್ಣ ಬೈರೇಗೌಡ ಬೆಂಗಳೂರು ನಗರ ವ್ಯಾಪ್ತಿಯ ಬ್ಯಾಟರಾಯನಪುರ ಕ್ಷೇತ್ರ ಆಯ್ಕೆ ಮಾಡಿಕೊಂಡರು. 2008ರಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು.

 Krishna Byre Gowda Profile: Biography of Krishna Byre Gowda, Minister In Siddaramaiahs Cabinet in Karnataka

2013 ರ ಚುನಾವಣೆಯಲ್ಲಿ ಮತ್ತೆ ಬ್ಯಾಟರಾಯನಪುರ ಕ್ಷೇತ್ರದಿಂದ ಗೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2018ರಲ್ಲಿ ಬ್ಯಾಟರಾಯನಪುರದಿಂದ ಗೆಲುವು ಸಾಧಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಸಚಿವ ಸ್ಥಾನವನ್ನು ಕಳೆದುಕೊಂಡರು. ಕೃಷಿ, ನೀರಾವರಿ, ರೈತರ ಸಮಸ್ಯೆ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಅಂಕಿ-ಅಂಶಗಳ ಸಮೇತ ವಿಷಯ ಮಂಡಿಸಿ ಆಡಳಿತ ಪಕ್ಷದ ನಾಯಕರ ಮೆಚ್ಚುಗೆ ಸಹಗಳಿಸುತ್ತಾರೆ.

2007ರಲ್ಲಿ ಕೃಷ್ಣ ಬೈರೇಗೌಡ ಯುವ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದರು. ಯುಎಸ್‌ಎ, ಯುರೋಪ್ ಮುಂತಾದ ದೇಶಗಳಿಗೆ ಭೇಟಿ ನೀಡಿದ್ದಾರೆ. ಕ್ರಿಕೆಟ್, ಟೇಬಲ್ ಟೆನಿಸ್ ಮುಂತಾದ ಕ್ರೀಡೆಗಳನ್ನು ಇಷ್ಟಪಡುತ್ತಾರೆ. 2020ರಲ್ಲಿ ಎಐಸಿಸಿ ಪುನಾರಚನೆ ವೇಳೆ ಕೇಂದ್ರ ಚುನಾವಣಾ ಮಂಡಳಿ ಸದಸ್ಯರಾಗಿ ಅವರನ್ನು ನೇಮಿಸಲಾಗಿತ್ತು.

ಕೃಷಿ ಸಚಿವರಾಗಿ ರಾಗಿ ಬೆಳೆಗೆ ವಿಶೇಷ ಪ್ರಾತಿನಿಧ್ಯ ಹಾಗೂ ಸಿರಿಧಾನ್ಯಗಳ ಅಂತಾರಾಷ್ಟ್ರೀಯ ಮೇಳ ನಡೆಸಿ, ಉತ್ತೇಜನ ನೀಡಿದ್ದರು. ಅಲ್ಲದೆ 157 ಕೃಷಿ ಮಾರುಕಟ್ಟೆಗಳನ್ನು "ಇ-ಮಂಡಿ" ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಅಡಿ ತಂದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ರೈತರ ಆದಾಯ ಹೆಚ್ಚಳಕ್ಕೂ ಕೃಷ್ಣಬೈರೇಗೌಡ ನೆರವಾಗಿದ್ದಾರೆ. ಬ್ಯಾಟರಾಯನಪುರದ ರಸ್ತೆ ಅಭಿವೃದ್ಧಿ, ಶಾಲೆ ನಿರ್ಮಾಣ ಹಾಗೂ ಬಡವರಿಗೆ ಮನೆನಿರ್ಮಾಣ ಮಾಡಿಕೊಟ್ಟು ಜನರ ನೆಚ್ಚಿನ ನಾಯಕರಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+