KR Pura Assembly Constituencey: ಬಿಜೆಪಿ ನಾಯಕನಿಗೆ ಪಕ್ಷಾಂತರಿ ಹಣೆಪಟ್ಟಿ, ಕಾಂಗ್ರೆಸ್‌ ತಂತ್ರವೇನು, ವಿಶ್ಲೇಷಣೆ

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಕೆಆರ್ ಪುರ ಕ್ಷೇತ್ರದ ಹಾಲಿ ಶಾಸಕ ಬೈರತಿ ಬಸವರಾಜ 2018ರಲ್ಲಿ ವಿಜಯಸಾಧಿಸಿದರು. ಆದರೆ ಅವರಿಗೆ ಪಕ್ಷಾಂತರಿ ಎಂಬ ಹಣೆಪಟ್ಟಿ, ಪರ ವಿರೋಧ ಅಭಿಪ್ರಾಯವಿದೆ. ಇದು ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?

ಬೆಂಗಳೂರು, ಫೆಬ್ರವರಿ 21:ಬೆಂಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿರುವ ಕೃಷ್ಣ ರಾಜಪುರ ಅನ್ನು ಕೆಆರ್ ಪುರ (KR Puram) ಅಂತಳು ಕರೆಯುತ್ತಾರೆ. ಇದು ರಾಜ್ಯ ರಾಜಧಾನಿ ಉದ್ಯಾನ ನಗರಿಗೆ ಹೊಂದಿಕೊಂಡು ಇದೆ. ಕಸಾಬಾ ಹೂಬಳಿ ಪ್ರದೇಶವಾಗಿರುವ ಕೆ.ಆರ್‌ಪುರ ವನ್ನು ಆಡಳಿತ ಅವಶ್ಯಕತೆಗನುಗುಣವಾಗಿ ತಾಲೂಕವಾರು ರಚಿಸಲಾಗಿದೆ.

ಬೆಂಗಳೂರು ನಗರದಿಂದ ಹಳೇ ಮದ್ರಾಸ್ ರಸ್ತೆಗೆ ಹೋಗುವ 15 ಕಿಲೋ ಮೀಟರ್ ದೂರದಲ್ಲಿ ಈ ಕೆಆರ್ ಪುರ ಬರುತ್ತದೆ. ಬೆಂಗಳೂರಿನ ಬೃಹತ್ ಕೆರೆಗಳಲ್ಲಿ ಒಂದಾಗಿರುವ 'ವೆಂಗಯ್ಯನ ಕೆರೆ' ಈ ಕೃಷ್ಣ ರಾಜ ಪುರ ಪ್ರದೇಶದ ಹೃದಯ ಭಾಗದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ಕಚೇರಿಗಳು ಇದೇ ಭಾಗದಲ್ಲಿವೆ. ಇದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅವಿಭಾಜ್ಯ ಅಂಗವೇ ಆಗಿದೆ.

ಕೃಷ್ಣ ರಾಜ ಪುರದಲ್ಲಿ ರಿಂಗ್ ರಸ್ತೆಯ ಜಂಕ್ಷನ್, ಕೆಆರ್ ಪುರ ರೈಲು ನಿಲ್ದಾಣವು ಬೆಂಗಳೂರು - ಚೆನ್ನೈ ಬ್ರಾಡ್ ಗೇಜ್ ಮಾರ್ಗದಲ್ಲಿ ಬರುತ್ತದೆ, 2003ರಲ್ಲಿ ದೇಶದ ಪ್ರಧಾನಮಂತ್ರಿಗಳಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಇಲ್ಲಿನ ರಿಂಗ್ ರಸ್ತೆ (ಹೊರ ವರ್ತುಲ ರಸ್ತೆ) ಜಂಕ್ಷನ್‌ನಲ್ಲಿರುವ ಕೇಬಲ್ ಸೇತುವೆ ಉದ್ಘಾಟಿಸಿದ್ದರು. ನಂತರ ಅದು ಅತ್ಯುತ್ತಮ ರಾಷ್ಟ್ರೀಯ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಈ ಕ್ಷೇತ್ರದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆಯ ದೊಡ್ಡ ಕ್ಷೇತ್ರ ಇದಾಗಿದೆ. ಅಲ್ಲದೇ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ.

ಕೆಆರ್ ಪುರ ವಿಧಾನಸಭಾ ಕ್ಷೇತ್ರ ರಾಜಕೀಯ ಹಿನ್ನೆಲೆ

ಕೆಆರ್ ಪುರ ವಿಧಾನಸಭಾ ಕ್ಷೇತ್ರ ರಾಜಕೀಯ ಹಿನ್ನೆಲೆ

ಕೃಷ್ಣರಾಜಪುರ ಕ್ಷೇತ್ರದಲ್ಲಿ ವರ್ಷಗಳಿಂದಲೂ ಕಾಂಗ್ರೆಸ್‌ನ ಪ್ರಾಬಲ್ಯವಿತ್ತು. ಕಾಂಗ್ರೆಸ್ ನಾಯಕರ ಹಿಡಿತ ತಪ್ಪಿಸುವಲ್ಲಿ ಬಿಜೆಪಿ ಯಶಸ್ವಿ ಕಂಡರೂ ಅದು ಅದೃಷ್ಟವೆಂಬಂತೆ ಅನ್ನಿಸುತ್ತದೆ. ಕಾರಣ ಅನೇಕ ಬಾರಿ ಕಾಂಗ್ರೆಸ್‌ ವಿಜಯ ಪತಾಕೆ ಹಾರಿಸಿದೆ. ಕಮಲ ಮಾತ್ರ ಆಗೊಮ್ಮೆ ಈಗೊಮ್ಮೆ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಜೆಪಿಯ ನಾಯಕ ಬೈರತಿ ಬಸವರಾಜ ಚುನಾಯಿರಾಗಿದ್ದಾರೆ. ಸಾಕಷ್ಟು ಚುಣಾವಣೆಗಳಲ್ಲಿ ಕಾಂಗ್ರೆಸ್‌ಗೆ ಜನತಾ ಪಾರ್ಟಿ ಪ್ರಬಲ ಪ್ರತಿಸ್ಪರ್ಧೆ ಒಡುತ್ತಲೇ ಬಂದಿತ್ತು. ನಂತರ ಈ ಹಿಂದಿನ 2008ರ ವಿಧಾನಸಭಾ ಚುನಾವಣೆಯಿಂದ ಬಿಜೆಪಿ ಪಕ್ಷವು ಕಾಂಗ್ರೆಸ್‌ಗೆ ಇಲ್ಲಿ ನುಂಗಲಾರದ ಬಿಸಿ ತುಪ್ಪವಾಗಿದೆ.

ಪಕ್ಷಾಂತರಿ ಹಣೆಪಟ್ಟಿ: ಈ ಬಾರಿ ಗೆಲ್ತಾರಾ ಬೈರತಿ ಬಸವರಾಜ?

ಪಕ್ಷಾಂತರಿ ಹಣೆಪಟ್ಟಿ: ಈ ಬಾರಿ ಗೆಲ್ತಾರಾ ಬೈರತಿ ಬಸವರಾಜ?

ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಕೆಆರ್ ಪುರ ಹಾಲಿ ಶಾಸಕ ಬೈರತಿ ಬಸವರಾಜ ಅವರು ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಸಾಧಿಸಿದರು. ಸದ್ಯ ಅವರು ನಗರಾಭಿವೃದ್ಧಿ ಸಚಿವರು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಪಕ್ಷಾಂತರಿ ಎಂಬ ಹಣೆಪಟ್ಟಿ ಇದೆ. ಅವರ ಪರ ವಿರೋಧ ಎರಡು ಅಭಿಪ್ರಾಯಗಳು ಇವೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಟ್ರಾಫಿಕ್‌ ನಂತಹ ಸಮಸ್ಯೆಗಳು ಇದ್ದು, ಅವುಗಳತ್ತ ಸಚಿವರು ಗಮನಹರಿಸಿಲ್ಲ. ಸ್ವಂತ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂಬ ಆರೋಪಗಳು ಇವೆ. ಹೀಗಿದ್ದರು ಅವರು ಈ ಭಾರಿ ಚುನಾವಣೆಯಲ್ಲಿ ಗೆದ್ದು ಬೀಗುವ ನಿರಿಕ್ಷೆಯಲ್ಲಿದ್ದಾರೆ. ಆದರೆ ಕಮಲಕ್ಕೆ ಕಾಂಗ್ರೆಸ್ ನಾಯಕರು ಟಕ್ಕರ್ ನೀಡಲು ತಂತ್ರ ರೂಪಿಸುತ್ತಿದ್ದಾರೆ.

ಕೆಆರ್ ಪುರ: ಸ್ಪರ್ಧೆಗೆ ಇಳಿಯುವವರು ಯಾರು?

ಕೆಆರ್ ಪುರ: ಸ್ಪರ್ಧೆಗೆ ಇಳಿಯುವವರು ಯಾರು?

ಹಲವು ಆರೋಪ ಮತ್ತು ಒಮ್ಮತ ಅಭಿಪ್ರಾಯಗಳು ಕ್ಷೇತ್ರದ ಜನರಿಂದ ವ್ಯಕ್ತವಾಗದಿದ್ದರೂ ಸಹಿತ 2023ರ ಚುನಾವಣೆಯಿಂದ ಹಾಲಿ ಶಾಸಕ ಬಿಜೆಪಿಯಿಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಬಹಿರಂಗವಾಗಿಲ್ಲ. ಇತ್ತ ಕಾಂಗ್ರೆಸ್‌ನಿಂದ ವಿಧಾನಪರಿಷತ್ ಮಾಜಿ ಸದಸ್ಯ ಎಂ.ನಾರಾಯಣ ಸ್ವಾಮಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ ಮತ್ತೊಬ್ಬ ಕೈ ಮುಖಂಡ ಡಿಕೆ ಮೋಹನ್ ಬಾಬು ಅವರು ಟಿಕೆಟ್ ಬಯಸಿದ್ದಾರೆ. ಆದರೆ ಪಕ್ಷ ತೊರೆದು ಅಧಿಕಾರದಾಸೆಗೆ ಬಿಜೆಪಿ ಸೇರಿದ ಬೈರತಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣ್ಣಕಿಳಿಸಿ ಎದುರಾಳಿಗೆ ಸೋಲುಣಿಸಲು ಕಾಂಗ್ರೆಸ್ ಹಾತೊರೆಯುತ್ತಿದೆ.

ಚುನಾವಣೆ: ಯಾವ ಭಾಷಿಗರಿಗೆ ಯಾರ ಮೇಲೆ ಒಲವಿದೆ?

ಚುನಾವಣೆ: ಯಾವ ಭಾಷಿಗರಿಗೆ ಯಾರ ಮೇಲೆ ಒಲವಿದೆ?

ಬೆಂಗಳೂರಿನ ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಧಿಕ ಮತದಾರರನ್ನು ಹೊಂದಿರುವ ಏಕೈಕ ಕ್ಷೇತ್ರ ಅದು ಕೆಆರ್ ಪುರ. ಇಲ್ಲಿ ಒಟ್ಟು ಸುಮಾರು 4,78,000 ಮತದಾರರಿದ್ದಾರೆ. ಮುಖ್ಯ ವಿಷಯವೇನೆಂದರೆ ಇಲ್ಲಿ, ಕನ್ನಡಿಗರ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆ ಮಾತನಾಡುವವರು ಹೆಚ್ಚಿದ್ದಾರೆ. ಒಕ್ಕಲಿಗರು, ಲಿಂಗಾಯತರು, ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದ್ದಲ್ಲಿ ಆ ಕ್ಷೇತ್ರದಲ್ಲಿ ಯಾರ ಪರ ಒಲವಿದೆ ಎಂದು ಸುಲಭವಾಗಿ ಹೇಳಬಹುದು. ಆದರೆ ಕೆಆರ್ ಪುರದಲ್ಲಿ ಯಾವ ಭಾಷಿಗರಿಗೆ ಯಾರ ಮೇಲೆ ಒಲವಿದೆ, ಯಾರನ್ನು ಆರಿಸಿ ತರುತ್ತಾರೆ ಎಂದು ಹೇಳಲಾಗದು. ಇದಕ್ಕೆ ಸ್ಪಷ್ಟ ಉತ್ತರ 2023 ಚುನಾವಣೆ ನಂತರವೇ ಉತ್ತರ ಸಿಗಲಿದೆ.

ಮತದಾರರ ಸಂಖ್ಯೆ

ಒಟ್ಟು ಮತದಾರರು- 4,78,000

ಒಕ್ಕಲಿಗರು- 90,000

ಲಿಂಗಾಯತ - 65,000

ಎಸ್‌ಸಿ-ಎಸ್‌ಟಿ - 80,000

ಮುಸ್ಲಿಂ -38,000

ಇತರೇ ಭಾಷಿಗರು- 98,000

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+