Kpsc Grace Marks: ತಪ್ಪು ಕನ್ನಡ ಪ್ರಶ್ನೆ ಪತ್ರಿಕೆ: ಕೃಪಾಂಕ ಕೊಟ್ಟ ಕೆಪಿಎಸ್‌ಸಿ!
Kpsc: ತಪ್ಪು ಕನ್ನಡ ಪ್ರಶ್ನೆ ಪತ್ರಿಕೆಗಳ ಮೂಲಕವೇ ಎರಡು ಬಾರಿ ಚರ್ಚೆಗೆ ಗುರಿಯಾಗಿದ್ದ ಕರ್ನಾಟಕ ಲೋಕಸೇವಾ ಆಯೋಗವು ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಈ ಬಾರಿ ಕೆಪಿಎಸ್‌ಸಿಯ ಮತ್ತೊಂದು ನಡೆಯಿಂದ ಕನ್ನಡಿಗರು ಹಾಗೂ ಅಭ್ಯರ್ಥಿಗಳು ಆಕ್ರೋಶಿತರಾಗಿದ್ದಾರೆ. ಕೆಪಿಎಸ್‌ಸಿಯು 5 ಕೃಪಾಂಕಗಳನ್ನು ಪ್ರಕಟಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಪಿಎಸ್‌ಸಿ ಒಂದಿಲ್ಲೊಂದು ವಿಷಯದಿಂದ ಭಾರೀ ಚರ್ಚೆಯಲ್ಲಿದೆ. ಅಲ್ಲದೆ ಕೆಪಿಎಸ್‌ಸಿಯ ಕೆಲವು ನಿರ್ಧಾರಗಳಿಗೆ ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಲ್ಲೇ ಇದೆ. ಇದೀಗ ಕೃಪಾಂಕದ ವಿಷಯ ಸಹ ಭಾರೀ ಚರ್ಚೆಗೆ ಕಾರಣವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಕೆಪಿಎಸ್‌ಸಿ ನಿರ್ಲಕ್ಷ್ಯ ಧೋರಣೆಗೆ ಈಗಾಗಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಹೊಸ ನಿರ್ಧಾರ ಸಹ ಚರ್ಚೆಗೆ ಗುರಿಯಾಗಿದೆ. ರಾಜ್ಯದಲ್ಲಿ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನಾಮಕಾತಿ ವಿಚಾರವು ಕಳೆದ ಒಂದು ವರ್ಷದಿಂದ ಬೇರೆ ಬೇರೆ ಕಾರಣಕ್ಕೆ ಚರ್ಚೆಯಾಗುತ್ತಲ್ಲೇ ಇದೆ. ಅಲ್ಲದೆ ಕನ್ನಡದ ಪ್ರಶ್ನೆ ಪತ್ರಿಕೆಗಳನ್ನು ತಪ್ಪಾಗಿ ಪ್ರಕಟಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕೆಪಿಎಸ್‌ಸಿ ಎರಡನೇ ಬಾರಿಯೂ ಅದೇ ತಪ್ಪನ್ನು ಮಾಡುವ ಮೂಲಕ ಅಭ್ಯರ್ಥಿಗಳ ಹಾಗೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಆ ತಪ್ಪನ್ನು ತಿದ್ದಿಕೊಳ್ಳಲು ಹೋಗಿ ಮತ್ತೊಂದು ಎಡವಟ್ಟನ್ನು ಮಾಡಿಕೊಂಡಿದೆ. ಕೆಪಿಎಸ್‌ಸಿ ಹೊಸ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಇನ್ನು ಕೆಪಿಎಸ್‌ಸಿಯು ಈಚೆಗೆ ನಡೆಸಿದ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನಾಮಕಾತಿ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳು ಆಗಿರುವುದು ವರದಿಯಾಗಿತ್ತು. ಕರ್ನಾಟಕ ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಹಾಗೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಎರಡನೇ ಬಾರಿ ಪರೀಕ್ಷೆ ಮಾಡಿದಾಗಲೂ ಕೆಪಿಎಸ್‌ಸಿ ತನ್ನ ತಪ್ಪುಗಳನ್ನು ಪುನರಾವರ್ತನೆ ಮಾಡಿತ್ತು. ಆದರೆ, ಈಚೆಗೆ ನಡೆಸಿದ ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲೂ ಸಾಕಷ್ಟು ತಪ್ಪುಗಳು ಇದ್ದವು ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರತಿಭಟನೆ ಹಾಗೂ ಹೋರಾಟಗಳು ನಡೆದಿದ್ದವು. ಈ ವಿಚಾರದಲ್ಲಿ ಕೊನೆಗೂ ಎಚ್ಚೆತ್ತುಕೊಂಡಿರುವ ಕೆಪಿಎಸ್‌ಸಿಯು 5 ಕೃಪಾಂಕಗಳನ್ನು ನೀಡಿದೆ. ಆದರೆ ಇದಕ್ಕೂ ವಿರೋಧ ವ್ಯಕ್ತವಾಗಿದೆ.
ಕೃಪಾಂಕ ವಿರೋಧಕ್ಕೆ ಕಾರಣವೇನು
ಕೆಪಿಎಸ್‌ಸಿ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನಾಮಕಾತಿ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪಿಗಾಗಿ 5 ಕೃಪಾಂಕ ಕೊಡುವುದಾಗಿ ಹೇಳಿದೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ತಪ್ಪುಗಳು ಇದ್ದವು. ಇದರ ಹೊರತಾಗಿಯೂ ಕೇವಲ 5 ಕೃಪಾಂಕ ಕೊಟ್ಟಿರುವುದು ವಿರೋಧಕ್ಕೆ ಕಾರಣವಾಗಿದೆ. ಕರ್ನಾಟಕ ಸರ್ಕಾರವು 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನಾಮಕಾತಿಯ ಪೂರ್ವಭಾವಿ ಪರೀಕ್ಷೆ ನಡೆದಿತ್ತು. ಇದರ ಕೀ ಉತ್ತರಗಳನ್ನು ಸಹ ಇದೀಗ ಬಿಡುಗಡೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ 5 ಕೃಪಾಂಕ ಕೊಡಲಾಗಿದೆ. ಆದರೆ ತಪ್ಪುಗಳು ಹೆಚ್ಚು ಇದ್ದರೂ ಕೇವಲ 5ಕೃಪಾಂಕ ಕೊಟ್ಟಿರುವುದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ ಆನ್‌ಲೈನ್ ಅಭಿಯಾನವನ್ನು ಸಹ ಪ್ರಾರಂಭಿಸಿದ್ದಾರೆ.












Click it and Unblock the Notifications