ಸಿದ್ದರಾಮಯ್ಯ ಅವರ ಕೊಲೆಗೆ ಕರೆ ನೀಡಿದ್ದು "ಪ್ರೇಮ ರಾಜಕಾರಣವೇ"?: ಕಾಂಗ್ರೆಸ್ ಪ್ರಶ್ನೆ
ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿದ್ದ ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಶ್ವಥ್ ನಾರಾಯಣ್, ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್ ಅಶ್ವಥ್ ನಾರಾಯಣ್ ಆರೋಪಕ್ಕೆ ಕರ್ನಾಟಕ ಕಾಂಗ್ರೆಸ್ ಈಗ ಉತ್ತರ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪ್ರಕರಣ ದಾಖಲಿಸಿದ್ದನ್ನೇ ದ್ವೇಷ ರಾಜಕಾರಣ ಎನ್ನುತ್ತಿರುವ ಅಶ್ವಥ್ ನಾರಾಯಣ್ ಅವರೇ, ತಾವು ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆಗೆ ಕರೆ ನೀಡಿದ್ದು "ಪ್ರೇಮ ರಾಜಕಾರಣ" ಎನಿಸಿಕೊಳ್ಳುತ್ತದೆಯೇ? ಎಂದು ಪ್ರಶ್ನೆ ಮಾಡಿದೆ.

ರಾಜ್ಯದ ಮುತ್ಸದ್ದಿ ನಾಯಕನನ್ನು ಕೊಲೆ ಮಾಡುವಂತೆ ಕರೆ ಕೊಟ್ಟರೂ ಸುಮ್ಮನಿದ್ದರೆ ಕಾನೂನು ಸಂವಿಧಾನಗಳಿಗೆ ಮಾಡುವ ಅಪಚಾರವಾಗಲಿದೆ ಎಂದು ಹೇಳಿರುವ ಕರ್ನಾಟಕ ಕಾಂಗ್ರೆಸ್ ಪ್ರಕರಣ ದಾಖಲಿಸಿದ್ದನ್ನು ಸಮರ್ಥಿಸಿಕೊಂಡಿದೆ.
ಪ್ರಕರಣ ದಾಖಲಿಸಿದ್ದು ದ್ವೇಷ ರಾಜಕಾರಣ ಎನ್ನುತ್ತಿರುವ @drashwathcn ಅವರೇ,
— Karnataka Congress (@INCKarnataka) May 26, 2023
ತಾವು @siddaramaiah ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆಗೆ ಕರೆ ನೀಡಿದ್ದು "ಪ್ರೇಮ ರಾಜಕಾರಣ" ಎನಿಸಿಕೊಳ್ಳುತ್ತದೆಯೇ?
ರಾಜ್ಯದ ಮುತ್ಸದ್ದಿ ನಾಯಕನನ್ನು ಕೊಲೆ ಮಾಡುವಂತೆ ಕರೆ ಕೊಟ್ಟರೂ ಸುಮ್ಮನಿದ್ದರೆ ಕಾನೂನು ಸಂವಿಧಾನಗಳಿಗೆ ಮಾಡುವ ಅಪಚಾರವಾಗಲಿದೆ.
ಅಶ್ವಥ್ ನಾರಾಯಣ್ ಮಾತ್ರವಲ್ಲದೆ, ಸಿದ್ದರಾಮಯ್ಯ ಅವರ 24 ಹಿಂದೂಗಳ ಕೊಲೆಗೆ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ ಹರೀಶ್ ಪೂಂಜ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಇವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಕ್ಕೆ ಬಿಜೆಪಿ ಕಿಡಿ ಕಾರಿದೆ. ಕಾಂಗ್ರೆಸ್ ಜನರಿಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸುವುದನ್ನು ಬಿಟ್ಟು ದ್ವೇಷ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ಬಿಜೆಪಿ ಭ್ರಷ್ಟಾಚಾರ ಈ ಪರಿಣಾಮ ಬೀರುತ್ತಿದೆ!
ಮಳೆ ಬಂದಾಗ ಬೆಂಗಳೂರಿನಲ್ಲಿ ಆಗುವ ಅನಾಹುತಗಳ ವರದಿಯ ಫೋಟೊ ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್, " ಹಿಂದಿನ ಬಿಜೆಪಿ ಸರ್ಕಾರ ಬೆಂಗಳೂರು ನಗರದ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯ ಹಾಗೂ ಮಾಡಿದ ಭ್ರಷ್ಟಾಚಾರಗಳು ಈಗ ಪರಿಣಾಮ ಬೀರುತ್ತಿದೆ." ಎಂದು ಆರೋಪಿಸಿದೆ.
"ನಮ್ಮ ಸರ್ಕಾರ ಅವ್ಯವಸ್ಥೆಯನ್ನು ಶೀಘ್ರದಲ್ಲೇ ಸರಿಪಡಿಸಿ ಮಳೆಯ ಅವಾಂತರವನ್ನು ಎದುರಿಸಲು ಸೂಕ್ತ ವೈಜ್ಞಾನಿಕ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲಿದೆ. ಬೆಂಗಳೂರಿನ ಘನತೆ ಉಳಿಸಲು ನಾವು ಬದ್ಧ." ಎಂದು ಟ್ವೀಟ್ ಮಾಡಿದೆ.
ಭಾರತದಲ್ಲಿ RSS ಎಂಬ ವಿಚ್ಛಿದ್ರಕಾರಿ ಸಂಘಟನೆ 3 ಬಾರಿ ನಿಷೇಧಕ್ಕೊಳಪಟ್ಟಿತ್ತು.
— Karnataka Congress (@INCKarnataka) May 26, 2023
ಸರ್ದಾರ್ ಪಟೇಲರೇ ಭಾರತ ವಿರೋಧಿ ಸಂಘಟನೆ ಎಂಬ ಸರ್ಟಿಫಿಕೇಟ್ ನೀಡಿದ್ದರು.
ಕಾಂಗ್ರೆಸ್ ಆಗಲೂ ಇತ್ತು ಈಗಲೂ ಇದೆ, ಮುಂದೆಯೂ ಇರಲಿದೆ.
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣದಲ್ಲಿ RSS ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು. pic.twitter.com/aVNnfCiStt
ನಳಿನ್ ಕುಮಾರ್ ಹೇಳಿಕೆಗೆ ತಿರುಗೇಟು
ಆರೆಸ್ಸೆಸ್ ನಿಷೇಧಕ್ಕೆ ಕೈಹಾಕಿದರೆ ಕಾಂಗ್ರೆಸ್ ಇರಲ್ಲ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಕೂಡ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, "ಭಾರತದಲ್ಲಿಆರೆಸ್ಸೆಸ್ ಎಂಬ ವಿಚ್ಛಿದ್ರಕಾರಿ ಸಂಘಟನೆ 3 ಬಾರಿ ನಿಷೇಧಕ್ಕೊಳಪಟ್ಟಿತ್ತು. ಸರ್ದಾರ್ ಪಟೇಲರೇ ಭಾರತ ವಿರೋಧಿ ಸಂಘಟನೆ ಎಂಬ ಸರ್ಟಿಫಿಕೇಟ್ ನೀಡಿದ್ದರು. ಕಾಂಗ್ರೆಸ್ ಆಗಲೂ ಇತ್ತು ಈಗಲೂ ಇದೆ, ಮುಂದೆಯೂ ಇರಲಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು." ಎಂದು ಹೇಳಿದೆ.












Click it and Unblock the Notifications