ಇರಾನ್ ಅಧ್ಯಕ್ಷ ಸಾವು : ನಿಜವಾಯ್ತು ಕೋಡಿಮಠದ ಸ್ವಾಮೀಜಿಯ ಭಯಾನಕ ಭವಿಷ್ಯ
ಬೆಂಗಳೂರು, ಮೇ 20: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದು, ಇದೀಗ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯ ನಿಜವಾಯಿತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಜೊತೆ ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಕೂಡ ಕೊನೆಯುಸಿರೆಳೆದಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ಕೋಡಿಮಠ ಸ್ವಾಮೀಜಿಯ ಭಯಾನಕ ಭವಿಷ್ಯ ನಿಜವಾಗಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ.

ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಈ ವರ್ಷದ ಆರಂಭದಲ್ಲಿ ಭವಿಷ್ಯವನ್ನು ನುಡಿದಿದ್ದರು. ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣ ಕಾಣುತ್ತಿದೆ. ಜೊತೆಗೆ ಜಗತ್ತಿನ ದೊಡ್ಡ ಸಂತರ ಕೊಲೆಯಾಗುತ್ತದೆ ಎಂದು ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದರು. ಅದಲ್ಲದೇ ಕಳೆದ ವರ್ಷಕ್ಕಿಂತ ಹೆಚ್ಚು ಸಂಕಷ್ಟ ಈ ವರ್ಷ ಜಗತ್ತಿಗೆ ಎದುರಾಗಲಿದೆ ಎಂದು ಕೋಡಿಮಠ ಶ್ರೀ ಭವಿಷ್ಯ ನುಡಿದಿದ್ದು, ಆತಂಕ ಹುಟ್ಟಿಸಿದೆ.
2024 ಅತ್ಯಂತ ಅಪಾಯಕಾರಿ ವರ್ಷ, ಈ ಕಾಲದಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತದೆ ಎಂದು ಈ ಹಿಂದೆ ಹೇಳಿದ್ರು. ಶ್ರೀಗಳು ಈ ಭವಿಷ್ಯ ನುಡಿದ ತಿಂಗಳೊಳಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿ ಹತ್ತಾರು ಮಂದಿ ಗಂಭೀರ ಗಾಯಗೊಂಡಿದ್ದರು. ಇದೀಗ ಗದಗದಲ್ಲಿ ಜನವರಿ 26ರಂದು ನುಡಿದ ಭವಿಷ್ಯ ಆರು ತಿಂಗಳೊಳಗೆ ನಿಜವಾಗಿದೆ. ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲಿ ಪ್ರಧಾನಿ ಹುದ್ದೆ ಇಲ್ಲದ ಕಾರಣ ಅಧ್ಯಕ್ಷರೇ ರಾಷ್ಟ್ರ ಆಡಳಿತದ ಮುಖ್ಯಸ್ಥರಾಗಿದ್ದು, ಅವರ ಸಾವಾಗಿದೆ. ಶ್ರೀಗಳ ಭವಿಷ್ಯ ನಿಜವಾಗಿದೆ ಎಂದು ಹೇಳಲಾಗಿದೆ.
ಇನ್ನು ಕೆಲ ದಿನಗಳ ಹಿಂದೆಯಷ್ಟೇ ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದ, ಈ ವೇಳೆ ತೀವ್ರ ಗಾಯಗೊಂಡಿದ್ದ ರಾಬರ್ಟ್ ಫಿಕೋ ಪವಾಡಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಅಲ್ಲದೇ ದೊಡ್ಡ ಅವಘಡಗಳು ಸಂಭವಿಸಲಿವೆ ಎಂದು ಕೂಡ ಕೋಡಿಮಠದ ಸ್ವಾಮೀಜಿ ಹೇಳಿದ್ದರು.
ಕೋಡಿಮಠ ಶ್ರೀ ಭವಿಷ್ಯ ಏನಾಗಿತ್ತು?
ವರ್ಷದ ಆರಂಭದಲ್ಲಿ ಗದಗದಲ್ಲಿ ಜನವರಿ 26ರಂದು ಭವಿಷ್ಯ ನುಡಿದಿದ್ದ ಕೋಡಿಮಠದ ಸ್ವಾಮೀಜಿ, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಕಷ್ಟ ಉಂಟಾಗಲಿದೆ. 2024 ಜಗತ್ತಿಗೆ ಕಂಟಕವಾಗಲಿದೆ, ಜಗತ್ತಲ್ಲಿ ದೊಡ್ಡ ಅವಘಡಗಳು ಸಂಭವಿಸುತ್ತವೆ. ಅಕಾಲಿಕ ಮಳೆಯಾಗಿ ಲಕ್ಷಾಂತರು ಜನರಿಗೆ ಸಮಸ್ಯೆಯಾಗಲಿದೆ. ಪ್ರಕೃತಿ ಮುನಿದು ಭೂಕಂಪ, ಜಲಕಂಟಕ ಎದುರಾಗುತ್ತದೆ ಎಂದಿದ್ದರು. ಅದರ ಜೊತೆ ಈ ವರ್ಷ ಜಗತ್ತಿನ ದೊಡ್ಡ ಸಂತರೊಬ್ಬರ ಕೊಲೆ ಆಗುತ್ತೆ, ಜತೆಗೆ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ. ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದ್ದರು.












Click it and Unblock the Notifications