Gold Smuggling: ಬಂಧಿತೆ ನಟಿ ರನ್ಯಾ ರಾವ್‌ಗೆ ರಾಜ್ಯ ಸರ್ಕಾರ ಶಾಕ್! ಕೇಸ್‌ಗೆ ಟ್ವಿಸ್ಟ್
ಬೆಂಗಳೂರು, ಮಾರ್ಚ್ 10: ಪ್ರಭಾವಿ ರಾಜಕಾರಣಿಗಳ ಜೊತೆಗೆ ನಂಟು ಹೊಂದಿದ್ದಾರೆ ಎನ್ನಲಾಗುತ್ತಿರುವ ಬಂಧಿತೆ ನಟಿ ರನ್ಯಾ ರಾವ್ ಅವರಿಗೆ ಸೇರಿದ ಕಂಪನಿಗೆ ಮಂಜೂರಾಗಿದ್ದ 12 ಎಕರೆ KIADB ಜಾಗ ಮರಳಿ ಪಡೆಯಲಿದೆ. ಬಿಜೆಪಿ ಅವಧಿಯಲ್ಲಿ 2023ರಲ್ಲಿ ಮುರುಗೇಶ್ ನಿರಾಣಿ ಅವರು ಕೈಗಾರಿಕಾ ಸಚಿವರಾಗಿದ್ದರು. ಆಗ ಜನವರಿ ತಿಂಗಳಲ್ಲಿ ರನ್ಯಾ ರಾವ್ ಅವರ ಕಂಪನಿಗೆ ಮಂಜೂರು ಆಗಿತ್ತು ಎಂದು ಹೇಳಲಾಗಿದೆ.
ತುಮಕೂರಿನ ಶಿರಾ ಬಳಿ ಕೈಗಾರಿಕೆ ಉದ್ದೇಶದಿಂದ ನಟಿ ರನ್ಯಾ ರಾವ್ ಅವರು ಒಟ್ಟು 12 ಎಕರೆ ಭೂಮಿಯನ್ನು ಅಂದಿನ ಸರ್ಕಾರ ಮಂಜೂರು ಮಾಡಿತ್ತು. ಇದಕ್ಕೆ ದಾಖಲೆಗಳು ಇವೆ ಎಂದು ಈಗಾಗಲೇ ಕಾಂಗ್ರೆಸ್ ತಿಳಿಸಿದೆ. ಜಾಗ ಪಡೆದ ನಟಿಯು 7.5 ಕೋಟಿ ರೂಪಾಯಿ ಹಣ ಕಟ್ಟಿಲ್ಲ. ಈ ಕಾರಣದಿಂದ ಜಾಗ ಇನ್ನೂ KIADB ವಶದಲ್ಲೇ ಇದೆ. ಕಂಪನಿಯವರು ಹಣ ಕಟ್ಟಿ ಜಾಗವನ್ನು ತಮ್ಮದಾಗಿಸಿಕೊಂಡಿಲ್ಲ. ಈ ಜಾಗವನ್ನು ಮಂಜೂರು ಮಾಡುವುದಿಲ್ಲ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಸಿಇಒ ಮಹೇಶ್ ಅವರು ಸ್ಪಷ್ಟಪಡಿಸಿದ್ದಾರೆ.

ನಟಿ ರನ್ಯಾ ರಾವ್ ಅವರ ಮೆಸರ್ಸ್ ಕ್ಸಿರೋದಾ ಇಂಡಿಯಾ ಕಂಪನಿಗೆ ಹಿಂದಿನ ಬಿಜೆಪಿ ಸರ್ಕಾರದಿಂದ 2 ಜನವರಿ 2023ರಂದು ಜಾಗ ಮಂಜೂರಾಗಿತ್ತು. ಅಂದಿನ ಕೈಗಾರಿಕಾ ಸಚಿವರಾದ ಮುರಗೇಶ್ ನಿರಾಣಿ ಅವರ ನೇತೃತ್ವದಲ್ಲಿ ನಡೆದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಜಾಗ ನೀಡಲು ಅನುಮತಿ ನೀಡಲಾಗಿತ್ತು.
ಸದ್ಯ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣೆಯಲ್ಲಿ ಬೆಂಗಳೂರು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆ. ಬಂಧಿತೆ ಜೊತೆಗೆ ಪ್ರಭಾವಿ ಸಚಿವರು ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೆ KIADB ಅಧಿಕಾರಿಗಳು ಮಂಜೂರಾದ 12ಎಕ್ರೆ ಜಾಗದ ಕುರಿತು ಪರಿಶೀಲಿಸಿದೆ. ಈ ವೇಳೆ ಹಣ ಪಾವತಿ ಬಾಕಿ ಇರುವ ಕಾರಣ ಜಾಗ ಮಂಜೂರು ಮಾಡಲು ಸಾಧ್ಯವಿಲ್ಲ. ಆ ಜಾಗ ರನ್ಯಾ ಅವರ ಕಂಪನಿ ತಮ್ಮದಾಗಿಸಿಕೊಂಡಿಲ್ಲ. ಅದನ್ನು ಸರ್ಕಾರದಲ್ಲಿಯೇ ಸರ್ಕಾರದ ವಶಕ್ಕೆ ಪಡೆಯಲು ನಿಮಯಗಳ ಪ್ರಕಾರ, ಎರಡು ವರ್ಷಗಳ ಸಮಯ ಇದೆ. ಹೀಗಾಗಿ ಸರ್ಕಾರ ಜಾಗ ನೀಡುವುದಿಲ್ಲ ಎಂದು KIADB ಸಿಇಓ ಮಹೇಶ್ ಮಾಹಿತಿ ನೀಡಿದ್ದಾರೆ.

ಕೋಟ್ಯಂತರ ರೂ.ಮೌಲ್ಯದ 39 ವಿದೇಶಿ ವಾಚ್ ಜಪ್ತಿ
14 ಕೆ.ಜಿ. ಚಿನ್ನ ಕಳ್ಳ ಸಾಗಾಣೆ ಆರೋಪದಡಿ ನಟಿ ರನ್ಯಾ ರಾವ್ ಬಂಧನವಾಗಿದೆ. ಸದ್ಯ ಪ್ರಕರಣ ಸಿಬಿಐ ತನಿಖೆ ಮಾಡುತ್ತಿದೆ, ಈ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ತನಿಖೆಗೂ ಮೊದಲೂ ಡಿಆರ್‌ಐ (ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್) ತಂಡದಿಂದ ಬಂಧಿತೆ ಮೇಲೆ ದಾಳಿ ನಡೆದಿದ್ದು, ಅನೇಕ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ..
ನಟಿಯ ಶೋಕಿಗಾಗಿ ಇಟ್ಟುಕೊಂಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 39 ವಿದೇಶಿ ವಾಚ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಡಿಆರ್‌ಐ ಅವರು ಮೂರು ದಿನಗಳ ಕಾಲ ಆರೋಪಿಯನ್ನು ಕಸ್ಟಿಗೆ ಪಡೆದಿತ್ತು. ಆ ಅವಧಿ ಅಂತ್ಯಗೊಳ್ಳಲಿದೆ. ಕೋಟಿ ಕೋಟಿ ಮೌಲ್ಯದ ಚಿನ್ನ ಸಾಗಾಣೆ ಜೊತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಾಚ್ ಗಳು ಪತ್ತೆ ಆಗಿರುವುದು ಕೇಸ್‌ಗೆ ಹೊಸ ದಿಕ್ಕು ತೋರಿಸುವ ನಿರೀಕ್ಷೆ ಇದೆ.












Click it and Unblock the Notifications