KSET Updates: ಕೆಸೆಟ್ ಅರ್ಜಿ ತಿದ್ದುಪಡಿಗೆ ಅವಕಾಶ, ಅಭ್ಯರ್ಥಿಗಳು ಗಮನಿಸಿ...KEA
ಬೆಂಗಳೂರು, ಅಕ್ಟೋಬರ್ 04: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ -2025 (KSET-2025) ಅಭ್ಯರ್ಥಿಗಳಿಗೆ ಪ್ರಾಧಿಕಾರ ಗುಡ್ ನ್ಯೂಸ್ ನೀಡಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ವಿವರಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡಿದೆ. ಸೂಕ್ತ ದಿನಾಂಕದೊಳಗೆ ತಿದ್ದುಪಡಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 ಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ವಿವರಗಳನ್ನು ತಿದ್ದುಪಡಿ ಮಾಡಬಹುದು. ನಿಗದಿತ ಶುಲ್ಕ ಪಾವತಿ ಸಹಿತ ಅಕ್ಟೋಬರ್ 3ರಿಂದ ಇದೇ ಅಕ್ಟೋಬರ್ 6ರ ವರೆಗೆ ಸೋಮವಾರ ಸಂಜೆ 5.30 ಗಂಟೆಗೆ ವರೆಗೆ ಅವಕಾಶ ನೀಡಿರುವುದಾಗಿ ಪ್ರಕಟಣೆಯಲ್ಲಿ ಅಧಿಕೃತ ಮಾಹಿತಿ ನೀಡಿದೆ.

ಮೊಬೈಲ್ ದೂರವಾಣಿ ಸಂಖ್ಯೆ ಹೊರತುಪಡಿಸಿ, ಆನ್ ಲೈನ್ ಅರ್ಜಿಯಲ್ಲಿನ ಎಲ್ಲ ವಿವರಗಳ ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಒಂದು ವೇಳೆ ದೂರವಾಣಿ ಸಂಖ್ಯೆ ಬದಲಿಸಿಕೊಳ್ಳಬೇಕೆನ್ನುವವರು ಖುದ್ದು ಪ್ರಾಧಿಕಾರಕ್ಕೆ ಬಂದು ಅರ್ಜಿ ಕೊಡಬೇಕು. ಒಮ್ಮೆ ತಿದ್ದುಪಡಿ ಮಾಡಿದ ನಂತರ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಎಚ್ಚರ ವಹಿಸಿ ಮಾಡಿ. ಪುನಃ ತಿದ್ದುಪಡಿ ಸಂಬಂಧ ಯಾವುದೇ ಮನವಿಯನ್ನು ಪುರಸ್ಕರಿಸುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಹೇಳಿದ್ದಾರೆ.
ಕೆಸೆಟ್ ಪರೀಕ್ಷೆ ಪ್ರಕ್ರಿಯೆ ಹೇಗಿದೆ?
* ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಆಗಸ್ಟ್ 22ರಂದು KSET 2025 ಅಧಿಸೂಚನೆ ಹೊರಡಿಸಿತ್ತು.
* ಅರ್ಜಿ ಸಲ್ಲಿಕೆ ಆರಂಭ ದಿನಾಂಕ ಆಗಸ್ಟ್ 28.
* ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಸೆಪ್ಟಂಬರ್ 24, ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನಾಂಕ ಸೆಪ್ಟಂಬರ್ 25.
* ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳ ತಿದ್ದುಪಡಿಗೆ ಅವಕಾಶ ಅಕ್ಟೋಬರ್ 3 ರಿಂದ 6ರವರೆಗೆ.
* ಪ್ರವೇಶ ಪತ್ರ ಬಿಡುಗಡೆ ದಿನಾಂಕ ಅಕ್ಟೋಬರ್ 24.
* KSET 2025 ಪರೀಕ್ಷೆ ದಿನಾಂಕ ನವೆಂಬರ್ 02
* ಒಟ್ಟು 33 ವಿಷಯಗಳಲ್ಲಿ ಕೆಸೆಟ್ ಪರೀಕ್ಷೆ ನಡೆಯಲಿದೆ.
* ಸ್ನಾತಕೋತ್ತ ಪದವಿ ಪಡೆದವರು ಮಾತ್ರವೇ ಕೆಸೆಟ್ ಪರೀಕ್ಷೆಗೆ ಅರ್ಹರು
* ಸಂಪರ್ಕಿಸಬೇಕಾದ ವಿಳಾಸ ಅಧಿಕೃತ https://cetonline.karnataka.gov.in/kea/ugcet2025 ವೆಬ್‌ಸೈಟ್.












Click it and Unblock the Notifications