Karnataka Rains: ಚಂಡಮಾರುತದ ಪ್ರಭಾವದಿಂದ ರಾಜ್ಯದಲ್ಲಿ ಸೆ. 7ರ ತನಕ ಭಾರೀ ಮಳೆ ಎಚ್ಚರಿಕೆ

ಬೆಂಗಳೂರು, ಸೆಪ್ಟಂಬರ್ 02: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಹವಾಮಾನ ವೈಪರಿತ್ಯವು ತೀವ್ರಗೊಂಡು ವಾಯುಭಾರ ಕುಸಿತವಾಗಿದೆ. ಸಮುದ್ರಮಟ್ಟದಿಂದ ಪೂರ್ವ ವಿದರ್ಭ ಮತ್ತು ಪಕ್ಕದ ತೆಲಂಗಾಣದ ಮೇಲೆ ಪ್ರಭಾವ ಬೀರಿದೆ. ಇಂದು ಇಲ್ಲಿನ ಕರಾವಳಿಯ ವಾಯುವ್ಯ ಪ್ರದೇಶದಲ್ಲಿ ಕೇಂದ್ರೀಕರಿಸಿದೆ. ಇದರ ಅಬ್ಬರದಿಂದಾಗಿ ಕರ್ನಾಟಕದ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಸಹ ಮಹಾರಾಷ್ಟ್ರ ದಕ್ಷಿಣಕ್ಕೆ 90 ಕಿಮೀ, ರಾಮಗುಂಡಂನಿಂದ 130 ಕಿಮೀ ಉತ್ತರ-ಈಶಾನ್ಯಕ್ಕೆ ತೆಲಂಗಾಣ ಮತ್ತು ವಾರ್ಧಾದಿಂದ 170 ಕಿಮೀ ಆಗ್ನೇಯಕ್ಕೆ (ಮಹಾರಾಷ್ಟ್ರ) ಭಾಗದಲ್ಲಿ ವಾಯುಭಾರ ಕುಸಿತದ ಪ್ರಭಾವ ಇದೆ. ಗಾಳಿಯು ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿಮೀ ಎತ್ತರದಲ್ಲಿದೆ. ಇದರ ಸುಳಿಗಾಳಿಯು ಸುತ್ತಲಿನ ಪ್ರದೇಶಗಳ ಮೇಲೆ ಬೀಸುತ್ತಿದೆ. ಒಟ್ಟಾರೆ ಈ ವೈಪರಿತ್ಯ ಪ್ರಭಾದಿಂದಾಗಿ ಆಂಧ್ರ ಪ್ರದೇಶ, ಓಡಿಶಾ, ತೆಲಂಗಾಣದಲ್ಲಿ ಅತ್ಯಧಿಕ ಮಳೆ, ಪ್ರವಾಹ ಸ್ಥಿತಿ ಉಂಟಾಗಿದೆ.

Karnataka Rain State Weather Forecast For Next 5 Days

ಸದ್ಯ ಕರ್ನಾಟಕದ ಕರಾವಳಿಗೆ ಮುಂದಿನ ಐದು ದಿನಗಳು ಭಾರೀ ಮಳೆ ಆಗುವ ಸಾಧ್ಯತೆ ಇದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಕೋಡಲಾಗಿದೆ.

ಉತ್ತರ ಒಳನಾಡಿನ 5ಜಿಲ್ಲೆಗೆ ಯೆಲ್ಲೋ ಅಲರ್ಟ್

ಉಳಿದಂತೆ ರಾಜ್ಯ ಉತ್ತರ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ನಾಳೆ ಮಂಗಳವಾರ ಸೆಪ್ಟಂಬರ್ 03ರಂದು ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಹ ಧಾರಾಕಾರ ಮಳೆಯಾಗಲಿದೆ. ಹೀಗಾಗಿ ಒಂದು ದಿನ ಮಾತ್ರ ಈ ಐದು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತವು ಚೆನ್ನೈನತ್ತ ಸಾಗಿಬಂದರೆ ದಕ್ಷಿಣ ಒಳನಾಡು ಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ತುಮಕೂರು ಭಾಗದಲ್ಲಿ ಮಳೆ ಹೆಚ್ಚಾಗಲಿದೆ. ಸದ್ಯ ಅದರ ಪ್ರಭಾವ ಈ ಭಾಗದಲ್ಲಿ ಅಷ್ಟಾಗಿ ಇಲ್ಲದ ಕಾರಣ, ಬೆಂಗಳೂರು ನಗರದಲ್ಲಿ ತಕ್ಕ ಮಟ್ಟಿಗೆ ತುಂತುರು ಮಳೆ, ಚಳಿ ಗಾಳಿಯ ವಾತಾವರಣ ಕಂಡು ಬರುತ್ತಿದೆ.

Karnataka Rain State Weather Forecast For Next 5 Days

ಸದ್ಯ ಈ ಮೇಲೆ ತಿಳಿಸಿರುವ ಜಿಲ್ಲೆಗಳಲ್ಲಿ ಮುಂದಿನ ಐದು ಹಗುರದಿಂದ ಸಾಧಾರಣ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾನುವಾರ ಎಲ್ಲೆಲ್ಲಿ ಮಳೆ ಆಗಿದೆ?

ಇನ್ನೂ ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ನಲ್ಲಿ ಅಧಿಕ 5 ಸೆಂಮೀ ಮಳೆ ಆಗಿದೆ. ಉಡುಪಿಯ ಕಾರ್ಕಳದಲ್ಲಿ 4, ಉತ್ತರ ಕನ್ನಡದ ಗೇರ್ಸೊಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ತಲಾ 3 ಸೆಂ.ಮೀ, ಉತ್ತರ ಕನ್ನಡದ ಅಂಕೋಲಾದಲ್ಲಿ 2, ದಕ್ಷಿಣ ಕನ್ನಡದ ಬೆಳ್ತಂಗಡಿ, ಪುತ್ತೂರು 2, ಉಡುಪಿ ಕೊಲ್ಲೂರು ಮತ್ತು ಸಿದ್ದಾಪುರದಲ್ಲಿ ತಲಾ 2 ಸೆಂ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+