Karnataka Rains: ತಾಪಮಾನಕ್ಕೆ ಸೆಡ್ಡು ಹೊಡೆದ ಪೂರ್ವ ಮುಂಗಾರು: ಮೇ ತಿಂಗಳ ಫುಲ್ ರಿಪೋರ್ಟ್ ಇಲ್ಲಿದೆ
ಬೆಂಗಳೂರು, ಮೇ 29: ಕರ್ನಾಟಕ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಆರ್ಭಟ ಜೋರಾಗಿತ್ತು. ಕಳೆದ ಒಂದು ದಿನದಿಂದ ಅಷ್ಟಾಗಿ ಮಳೆ ಆಗಿಲ್ಲ. ಇನ್ನೇನು ಅಂತ್ಯಗೊಳ್ಳಲಿರುವ ಈ ಮಳೆ ಮೇ ತಿಂಗಳಲ್ಲಿ ವಾಡಿಕೆಗಿಂತ ಬರೋಬ್ಬರಿ 150 ಮಿ.ಮೀ. ಮಳೆ ದಾಖಲಾಗಿದೆ.
ರಾಜ್ಯದಲ್ಲಿ ಕಳೆದ ತಿಂಗಳ ತೀವ್ರ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಆದರೆ ಮೇ ತಿಂಗಳಲ್ಲಿ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ. ರೈತರು ಮುಂಗಾರು ಹಂಗಾಮು ವ್ಯವಸಾಯ ಚಟುವಟಿಕೆಗಳಿಗೆ ಸಿದ್ಧವಾಗಿದ್ದಾರೆ. ಮುಂಗಾರು ಹೇಗಿರಲಿದೆ ಎಂಬ ಮುನ್ಸೂಚನೆ ಆಧಾರದಲ್ಲಿ ಮುಂದಿನ ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ.

ರೈತರ ಖುಷಿ ನೀಡಿದ ಮೇ ತಿಂಗಳ ಮಳೆ
ರಾಜ್ಯದಲ್ಲಿ ಮೇ 1ರಿಂದ 29ರವರೆಗೆ ವಾಡಿಕೆ 62ಮಿ.ಮೀ. ನಷ್ಟು ಮಳೆ ಆಗಬೇಕಿದ್ದು, ಸದ್ಯ 128 ಮಿ.ಮೀ. ಮಳೆ ದಾಖಲಾಗಿದೆ. ಇದು ವಾಡಿಕೆಗಿಂತ ಶೇಕಡಾ 92 ಅಧಿಕ ಮಳೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಈ ತಿಂಗಳ ಕಳೆದ 29 ದಿನಗಳಲ್ಲಿ ಕರಾವಳಿ ಭಾಗಕ್ಕೆ ಒಟ್ಟು 101 ಮಿಮೀ. ಮಳೆ ಆಗಬೇಕಿದ್ದು, ಇಲ್ಲಿ ಅಧಿಕ 165 ಮಿಮೀ. (ಶೇ.63ರಷ್ಟು ಅಧಿಕ) ಮಳೆ ಬಿದ್ದಿದೆ.
ಇದೇ 29 ದಿನ ಅವಧಿಯಲ್ಲಿ ಮಲೆನಾಡು ಭಾಗದಲ್ಲಿ 88 ಮಿಮೀ. ಮಳೆ ಆಗಬೇಕಿದ್ದು, ಬರೋಬ್ಬರಿ 204 ಮಿಮೀ. ಮಳೆ (ಶೇ.131ರಷ್ಟು ಅಧಿಕ) ದಾಖಲಾಗಿದೆ. ಒಣಹವೆ ಕಾಣುತ್ತಿದ್ದ ಉತ್ತರ ಒಳನಾಡಿನ ಭಾಗದಲ್ಲಿ ವಾಡಿಕೆ ಮಳೆ 44 ಮಿಮೀ.ಗಿಂತಲೂ ಅಧಿಕ 76 ಮಿಮೀ. (ಶೇ.72ರಷ್ಟು ಅಧಿಕ) ಮಳೆ ದಾಖಲಾಗಿದೆ.
ದಕ್ಷಿಣ ಒಳನಾಡಿಗೂ ಉತ್ತಮ ಮಳೆ
ಬೆಂಗಳೂರು, ಕೋಲಾರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳನ್ನು ಒಳಗೊಂಡ ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ವಾಡಿಕೆ 80 ಮಿಮೀ. ಮಳೆ ಆಗಬೇಕಿದ್ದು, ವಾಸ್ತವದಲ್ಲಿ 162 ಮಿಮೀ. ಮಳೆ (ಶೇ.162ರಷ್ಟು ಅಧಿಕ) ಹೆಚ್ಚು ಮಳೆ ಬಿದ್ದಿದೆ ಎಂದು ರಾಜ್ಯ ಹವಾಮಾನ ಕ್ಷೇಂದ್ರ ವರದಿಯಲ್ಲಿ ತಿಳಿಸಿದೆ.
ಕರ್ನಾಟಕದ ಮಟ್ಟಿಗೆ ಮೇ ತಿಂಗಳಲ್ಲಿ ಆದ ಮಳೆ ತಾಪಮಾನಕ್ಕೆ ಮುಕ್ತಿ ಕೊಟ್ಟು, ಜನರಿಗೆ, ರೈತರಲ್ಲಿ ಬುದಕಿನ ವಿಶ್ವಾಸ ಮೂಡಿಸಿದೆ. ಮಾರ್ಚ್‌ನಲ್ಲಿ ರಾಜಧಾನಿ ಬೆಂಗಳೂರು ಶೂನ್ಯ ಮಳೆ ಕಂಡಿದ್ದು, ವಿಪರೀತ ಶಾಖದ ಅಲೆ ಎದುರಿಸುತ್ತು. ಕಳೆದ 29 ದಿನ ರಾಜ್ಯದಲ್ಲಿ ಭರ್ಜರಿ ಮಳೆ ಆಗಿದೆ. ಇದರಿಂದ ಕೆರೆ ಕಟ್ಟೆಗಳು ತುಂಬಿವೆ. ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಬೇಸಾಯಕ್ಕೆ ಭೂಮಿ ಹದಕ್ಕೆ ಬಂದಿದೆ.

ರಾಜ್ಯದ ಮಳೆ ಮುನ್ಸೂಚನೆ
ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಚಂಡಮಾರುತ ತೀವ್ರತೆ ಅಂತ್ಯವಾದ ಪರಿಣಾಮ ರಾಜ್ಯದ ಯಾವ ಭಾಗದಲ್ಲಿಯೂ ಭಾರೀ ಮಳೆ ಮುನ್ಸೂಚನೆ ಇದೇ ಸಾಧಾರಣ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬರುವ ಲಕ್ಷಣಗಳಿವೆ. ಉಳಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ತಂಪು ವಾತಾವರಣ ಬಿಟ್ಟರೆ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಗಳು ತೀರಾ ಕಡಿಮೆ. ಅಲ್ಲಲ್ಲಿ ಸಾಮಾನ್ಯ ಮಳೆ ಕಂಡು ಬರಬಹುದು. ವಾತಾವರಣದಲ್ಲಿ ಆಗಾಗ ಬಿಸಿಲಿನ ಏರಿಳಿತ, ತಂಪು ವಾತಾವರಣ ಕಂಡು ಬರಲಿದೆ. ಉಳಿದಂತೆ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎನ್ನಲಾಗಿದೆ.
ಮಂಗಳೂರಿಗೆ ಹೆಚ್ಚು ಮಳೆ, ರಾಯಚೂರಿಗೆ ಬಿಸಿಲು
ಬುಧವಾರ ಬೆಳಗ್ಗೆ 8.30 ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಮಂಗಳೂರು ನಗರ, ಪೆಣಂಬೂರು, ವಿಮಾನ ನಿಲ್ದಾಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವಡೆ ವ್ಯಾಪಕ ಮಳೆ ಆಗಿದೆ. ಉಳಿದೆಡೆ ತುಂತುರು ಮಳೆ ಆಗಿದೆ.
ಕರ್ನಾಟಕದ ಗರಿಷ್ಠ ತಾಪಮಾನ ರಾಯಚೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದೆಡೆ ಅದಕ್ಕಿಂತಲೂ ಕಡಿಮೆ ಬಿಸಿಲು ಕಂಡು ಬಂದಿದೆ. ಚಿಕ್ಕಮಗಳೂರಿನಲ್ಲಿ ಅತೀ ಕನಿಷ್ಠ ತಾಪಮಾನ 17 ಡಿಸೆ. ಕಂಡು ಬಂದಿದೆ. ಇನ್ನೂ ಕೆಲವು ದಿನಗಳ ಇದೇ ವಾತಾವರಣ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನಾ ವರದಿ ತಿಳಿಸಿದೆ.
ಸದ್ಯ ಕರ್ನಾಟಕ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಮರೆಯಾಗಿದೆ. ಮತ್ತೆ ತಾಪಮಾನದ, ಶಾಖದ ಅಲೆಯ ವಾತಾವರಣ ಕಂಡು ಬರುತ್ತಿದೆ. ಇದು ಮತ್ತೆ ಜನರಲ್ಲಿನ ಆತಂಕ ಹೆಚ್ಚಾಗಲು ಕಾರಣವಾಗಿದೆ.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications