Karnataka Dams Water Level News: ಜೂನ್ 9ರಂದು ಈ ಜಲಾಶಯಗಳ ಒಳ ಹರಿವು ಹೆಚ್ಚಳ, ಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು, ಜೂನ್ 09: ಒಂದೇ ವಾರದಲ್ಲಿ ಕರ್ನಾಟಕದಲ್ಲಿ ರಾಜ್ಯಾದ್ಯಂತ ಆವರಿಸಿರುವ ಮುಂಗಾರು ಮಳೆ ರಣಮಳೆಯಾಗಿ ಪರಿವರ್ತನೆಗೊಂಡಿದೆ. ಕೆಲವು ಜಿಲ್ಲೆಗಳಿಗೆ ಸೋಮವಾರ (ಜೂನ್ 10) ವರೆಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಅಂದರೆ ಈ ಜಿಲ್ಲೆಗಳಲ್ಲಿ ಗರಿಷ್ಠ 20 ಸೆಂಟಿ ಮೀಟರ್‌ಗೂ ಹೆಚ್ಚು ಮಳೆ ಬರುವ ಮುನ್ಸೂಚನೆ ಇದೆ. ಈಗಾಗಲೇ ವಾರದಿಂದ ಬಂದ ಮಳೆಗೆ ರಾಜ್ಯದ ಈ ಕೆಳಗಿನ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ನದಿಗಳು ಮೈದುಂಬಿಕೊಂಡಿವೆ.

ರಾಜ್ಯಕ್ಕೆ ಕಳೆದ ಶನಿವಾರ (ಜೂನ್ 01) ಆಸುಪಾಸಿಗೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಇಂದಿನವರೆಗೆ ಬಹುತೇಕ ಎಲ್ಲ ಕಡೆ ಅದರಲ್ಲೂ ಕಾವೇರಿ, ಕಬಿನಿ, ಹಾರಂಗಿ, ಆಲಮಟ್ಟಿ, ಕೆಆರ್‌ಎಸ್ ಹಾಗೂ ಇನ್ನಿತರ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕವಾಗಿ ಮುಂಗಾರು ಸುರಿದಿದೆ. ಭಾರೀ ಮಳೆಗೆ ಕಾವೇರಿ, ತುಂಗಾ, ಭದ್ರಾ, ಶರಾವತಿ ಸೇರಿದಂತೆ ಅನೇಕ ನದಿಗಳ ಒಳಹರಿವು ಹೆಚ್ಚಾಗಿದೆ. ಇದರಿಂದ ಆಯಾ ಆಣೆಕಟ್ಟುಗಳಲ್ಲಿ (ಡ್ಯಾಮ್) ಒಳ ಮತ್ತು ಹೊರ ಹರಿವು ಏರಿಕೆ ಆಗಿದೆ.

Karnataka Major Dams Water Level on June 9th Know Increased These Dams Inflow

ಕರ್ನಾಟಕ ರಾಜ್ಯದ ಪ್ರಮುಖ ಆಣೆಕಟ್ಟುಗಳ ಇಂದಿನ ಭಾನುವಾರದ (ಜೂನ್ 09) ಒಳಹರಿವು, ಸಂಗ್ರಹಣೆ, ಹೊರ ಹರಿವು ಮತ್ತು ಒಟ್ಟು ಸಂಗ್ರಹಣಾ ಸಾಮರ್ಥ್ಯದ ಮಾಹಿತಿಗೆ ಮುಂದೆ ಓದಿ.

ಕೃಷ್ಣರಾಜಸಾಗರ (KRS) ಆಣೆಕಟ್ಟು

ಒಟ್ಟು ಸಾಮರ್ಥ್ಯ -49.45 ಟಿಎಂಸಿ

ಇಂದಿನ ನೀರು ಸಂಗ್ರಹ - 13.14 ಟಿಎಂಸಿ

ಹೊರ ಹರಿವು - 444 ಕ್ಯೂಸೆಕ್ಸ್

ಒಳ ಹರಿವು- 1423 ಕ್ಯೂಸೆಕ್ಸ್

ಹಾರಂಗಿ ಜಲಾಶಯ

ಒಟ್ಟು ಸಾಮರ್ಥ್ಯ - 8.50 ಟಿಎಂಸಿ

ಇಂದಿನ ಸಂಗ್ರಹ- 3.6 ಟಿಎಂಸಿ

ಹೊರ ಹರಿವು - 200 ಕ್ಯೂಸೆಕ್ಸ್

ಒಳಹರಿವು - 289 ಕ್ಯೂಸೆಕ್ಸ್

Karnataka Major Dams Water Level on June 9th Know Increased These Dams Inflow

ಹೇಮಾವತಿ ಜಲಾಶಯ

ಒಟ್ಟು ಸಾಮರ್ಥ್ಯ - 37.10 ಟಿಎಂಸಿ

ಇಂದಿನ ಸಾಮರ್ಥ್ಯ- 10.07 ಟಿಎಂಸಿ

ಹೊರ ಹರಿವು - 250 ಕ್ಯೂಸೆಕ್ಸ್

ಒಳಹರಿವು - 388 ಕ್ಯೂಸೆಕ್ಸ್

ಭದ್ರಾ ಆಣೆಕಟ್ಟು

ಒಟ್ಟು ಸಾಮರ್ಥ್ಯ - 71.54 ಟಿಎಂಸಿ

ಇಂದಿನ ಸಾಮರ್ಥ್ಯ- 14.39 ಟಿಎಂಸಿ

ಒಳಹರಿವು - 445 ಕ್ಯೂಸೆಕ್ಸ್

ಹೊರ ಹರಿವು - 341 ಕ್ಯೂಸೆಕ್ಸ್

ಕಬಿನಿ ಜಲಾಶಯ

ಒಟ್ಟು ಸಾಮರ್ಥ್ಯ - 19.52 ಟಿಎಂಸಿ

ಇಂದಿನ ಸಾಮರ್ಥ್ಯ- 7.82 ಟಿಎಂಸಿ

ಒಳಹರಿವು - 1658 ಕ್ಯೂಸೆಕ್ಸ್

ಹೊರ ಹರಿವು -300 ಕ್ಯೂಸೆಕ್ಸ್

ಲಿಂಗನಮಕ್ಕಿ ಜಲಾಶಯ

ಒಟ್ಟು ಸಾಮರ್ಥ್ಯ- 151.75 ಟಿಎಂಸಿ

ಇಂದಿನ ಸಾಮರ್ಥ್ಯ- 14.70 ಟಿಎಂಸಿ

ಒಳಹರಿವು - 924 ಕ್ಯೂಸೆಕ್ಸ್

ಹೊರ ಹರಿವು - 2456 ಕ್ಯೂಸೆಕ್ಸ್

ತುಂಗಭದ್ರಾ ಜಲಾಶಯ

ಒಟ್ಟು ಸಾಮರ್ಥ್ಯ - 105.79 ಟಿಎಂಸಿ

ಇಂದಿನ ಸಾಮರ್ಥ್ಯ- 05.03 ಟಿಎಂಸಿ

ಒಳಹರಿವು - 1490 ಕ್ಯೂಸೆಕ್ಸ್

ಹೊರ ಹರಿವು - 43 ಕ್ಯೂಸೆಕ್ಸ್

ಕೆಲವು ಜಿಲ್ಲೆಗಳಿಗೆ 'ರೆಡ್ ಅಲರ್ಟ್'

ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ದಿನ ಆರು ಜಿಲ್ಲೆಗಳಿಗೆ ಅತ್ಯಧಿಕ ಭಾರಿ ಮಳೆ ಆಗಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಇಲ್ಲಿ ಗರಿಷ್ಠ 20 ಸೆಂಟಿ ಮೀಟರ್‌ಗೂ ಹೆಚ್ಚು ಮಳೆ ದಾಖಲಾಗಿದೆ. ಉಳಿದ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾನುವಾರ ಐಎಂಡಿ ತಜ್ಞರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+