Karnataka Lok Sabha Election 2024 Prediction: ಎಲ್ಲಾ ಲೆಕ್ಕಾಚಾರ ಉಲ್ಟಾ: 'ಕೈ'ಗೆ ಜಯ: ಡಿಕೆ ಶಿವಕುಮಾರ್ ಮುಂದಿನ ಸಿಎಂ!
ಕರ್ನಾಟಕ ಲೋಕಸಭಾ ಚುನಾವಣೆಯ ಫಲಿತಾಂಶ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಆಡಳಿತ ಪಕ್ಷ ಕಾಂಗ್ರೆಸ್ ಈ ಬಾರಿ ಗೆಲುವು ನಮ್ಮದೇ ಅಂದರೆ, ವಿರೋಧ ಪಕ್ಷ ಬಿಜೆಪಿ ಈ ಬಾರಿ ಸರ್ಕಾರ ನಮ್ಮದೇ ಎಂದು ಬೀಗುತ್ತಿದೆ. ಗ್ಯಾರಂಟಿ ಅಭಿವೃದ್ಧಿ ಆಟದ ನಡುವೆ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಕುತೂಹಲಕ್ಕೆ ಜ್ಯೋತಿಷಿಗಳಾದ ಡಾ.ಕಮಲಾಕರ್ ಭಟ್ ಉತ್ತರ ನೀಡಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಪೂರ್ಣ ಹೊಣೆಯನ್ನು ಡಿಕೆ ಶಿವಕುಮಾರ್ ಅವರು ಹೊತ್ತಿದ್ದಾರೆ. ಈ ಜೋಡೆತ್ತುಗಳ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ. ಹಿಂದೆ ಒಂದು ಕಾಲ ಇತ್ತು. ಅಂದರೆ ಜೆಡಿಎಸ್ ಜೊತೆಗೂಡಿ ಕಾಂಗ್ರೆಸ್ ಸರ್ಕಾರವನ್ನು ಮಾಡಿದಾಗ, ಸರ್ಕಾರ ಉಳಿಸಲು ಡಿಕೆ ಶಿವಕುಮಾರ್ ಅವರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ.

ಆದರೆ ವರ್ತಮಾನದಲ್ಲಿ ಕೆಲವರಿಗೆ ಭ್ರಮೆ ಇದೆ. ಊಹಾಪೋಹಗಳನ್ನು ಹೇಳುತ್ತಾ ಬರುವುದೇ ಅವರ ಕೆಲಸ ಆಗಿದೆ. ಇದನ್ನು ಜನ ಸ್ವೀಕಾರ ಮಾಡುತ್ತಾರೋ? ಇಲ್ವೋ? ಇದು ಸಾಧ್ಯನಾ? ಇಲ್ವಾ? ಅನ್ನೋ ವಿಚಾರಗಳು ಅವರಿ ಗೊತ್ತೇ ಇರುವುದಿಲ್ಲ. ಅಂತವರು ಕಾಂಗ್ರೆಸ್‌ನಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಆಗದೇ ಇದ್ದದ್ದಕ್ಕಾಗಿ ಜನ ಬೇಸತ್ತಿದ್ದಾರೆ ಎನ್ನುತ್ತಾರೆ. ಆದರೆ ಬೇಸರ ಬೇರೆ.. ವರ್ತಮಾನದ ವ್ಯವಸ್ಥೆಗಳು ಬೇರೆ ಎನ್ನುತ್ತಾರೆ ಜ್ಯೋತಿಷಿಗಳು.
ಕಾಂಗ್ರೆಸ್‌ಗೆ ಜಯ
ಚಾಣಾಕ್ಷತನದಿಂದ ಆಡಳಿತವನ್ನು ನಡೆಸುವಂತಹ ಒಂದಿಷ್ಟು ಮಟ್ಟದ ಚಾಣಕ್ಯತನವನ್ನು ಕಲಿತುಕೊಂಡವರು ಡಿಕೆ ಶಿವಕುಮಾರ್ ಅವರು. 2024ರ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರೀತಿಯ ಗಂಡಾಂತರ ಇಲ್ಲ ಎನ್ನುವ ಮಾತನ್ನು ಡಾ.ಕಮಲಾಕರ್ ಭಟ್ ಗುರುಜಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಯಾಕೆಂದರೆ ಡಿಕೆ ಶಿವಕುಮಾರ್ ಅವರ ಜಾತಕ ತುಂಬಾ ಬಲವಾಗಿದೆ. ಪಕ್ಷ ಯಾವುದೇ ಆಗಿರಲಿ ವ್ಯಕ್ತಿ ಉತ್ತಮನಾಗಿದ್ದಾಗ ಆ ವ್ಯವಸ್ಥೆಗಳನ್ನು ಒಪ್ಪಿಕೊಳ್ಳಬೇಕಾಗಿದ್ದು ಅಪ್ಪಿಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯ ಎಂದು ಜ್ಯೋತಿಷಿ ಕಮಲಾಕರ್ ಭಟ್ ಹೇಳುತ್ತಾರೆ.
ಡಿಕೆ ಶಿವಕುಮಾರ್ ಮುಂದಿನ ಸಿಎಂ
ಅಲ್ಲದೆ ಡಿಕೆ ಶಿವಕುಮಾರ್ ಅವರನ್ನು ವಿರೋಧ ಮಾಡುವಂತಹವರು ಯಾವ ಪಕ್ಷದಲ್ಲೂ ಇಲ್ಲ. ಈಗಿನ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ಹೇಳುತ್ತದೆ. ಈ ಹಿಂದೆ ಯಾವುದೋ ಒಂದು ಕಾರಣದಿಂದ ಅವರನ್ನು ಆ ಸ್ಥಾನಕ್ಕೆ ಏರದಂತೆ ಮಾಡಲಾಯಿತು.

ಇದು ಕರ್ನಾಟಕದ ಜನತೆಗೆ ತಿಳಿಸಿರುವಂತಹ ವಿಚಾರವಾಗಿದೆ. ಇದರೊಂದಿಗೆ ನೂರಾರು ಜನರ ಪೈಪೋಟಿಗಳು ಇತ್ತು. ಎಂಎಲ್‌ಎ ಆದವರು ಮಂತ್ರಿಯಾಗಬೇಕು. ಮಂತ್ರಿಯಾದವರು ಇನ್ನೇನೋ ಸ್ಥಾನಗಳನ್ನು ಬಯಸುವುದು ಇತ್ಯಾದಿಗಳು ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೇರುವುದನ್ನು ಕಿತ್ತುಕೊಳ್ಳಲು ಕಾರಣವಾದವು.
ಅತಂತ್ರ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ
ರಾಜಕೀಯ ಭವಿಷ್ಯದ ಪ್ರಕಾರ ವರ್ತಮಾನದ ವ್ಯವಸ್ಥೆಗಳನ್ನು ಗಮನಿಸುವುದಾದರೆ, ಯಾವುದೇ ಕಾರಣಕ್ಕೂ ಅತಂತ್ರ ಸ್ಥಿತಿಗೆ ಮಾತ್ರ ಕಾಂಗ್ರೆಸ್ ಪಕ್ಷ ಬರುವುದಿಲ್ಲ. ಅಥವಾ ಈಗಿರುವ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎನ್ನುವುದು ಮಾತ್ರ ಭ್ರಮೆಯಾಗಿದೆ. ಇಂದಲ್ಲಾ ನಾಳೆ ಡಿಕೆ ಶಿವಕುಮಾರ್ ಅವರೇ ಸಿಎಂ ಆಗಿ ಅಧಿಕಾರ ನಡೆಸಲಿದ್ದಾರೆ ಎಂದು ಗುರುಜಿ ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ಈ ಭವಿಷ್ಯ ನಿಜವಾಗಲಿದಿಯೇ ಎಂದು ಸಂಜೆವರೆಗೂ ನಾವು ಕಾದು ನೋಡಲೇಬೇಕು.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ
ಲೋಕಸಭಾ ಚುನಾವಣೆ 2024 ಫಲಿತಾಂಶ ಜೂನ್ 4ರಂದು ಪ್ರಕಟವಾಗಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ, 9 ಕಾಂಗ್ರೆಸ್ ಹಾಗೂ 2 ಜೆಡಿಎಸ್ ಸ್ಥಾನ ಪಡೆದುಕೊಂಡಿದೆ. ಅಲ್ಲಿಗೆ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಆದರೆ ಕಾಂಗ್ರೆಸ್ ಮಾತ್ರ ಒಂಬತ್ತು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
28 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಗುರಿಯನ್ನು ಇಟ್ಟುಕೊಂಡಿದ್ದ ಬಿಜೆಪಿ ಜೆಡಿಎಸ್ ಪಕ್ಷದೊಂದಿಗೆ ಒಟ್ಟು 19 ಸ್ಥಾನಗಳನ್ನು ಪಡೆದು 9 ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿದೆ. ಇನ್ನೂ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಗುರಿಯನ್ನು ಇಟ್ಟುಕೊಂಡು 9 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದೆ.












Click it and Unblock the Notifications