ವಿಪಕ್ಷ ನಾಯಕನದ್ದು ಆ'ಶೋಕ' ಗೀತೆ! ಕರ್ನಾಟಕ ಬಿಜೆಪಿಯನ್ನು ಉಳಿಸುವುದಕ್ಕೆ ಯಾವ ದೇವರಿಂದಲೂ ಸಾಧ್ಯವಿಲ್ಲ
ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸದ್ಯ ಕಾಂಗ್ರೆಸ್‌ಗಿಂತ ಸ್ವಪಕ್ಷೀಯರಿಗೆ ಹೆಚ್ಚಿನ ತಲೆನೋವಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿರುವ ಯತ್ನಾಳ್ ಬಿಜೆಪಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ.
ಬಹಿರಂಗವಾಗಿಯೇ ಉತ್ತರ ಕರ್ನಾಟಕದ ನಾಯಕರಿಗೆ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದಿರುವ ಅವರು, ವಿಜಯೇಂದ್ರ ಬ್ಲಾಕ್ ಮೇಲ್ ಮಾಡುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಯತ್ನಾಳ್ Vs ಬಿಜೆಪಿ ಈಗ ಕಾಂಗ್ರೆಸ್‌ಗೆ ಹೊಸ ಅಸ್ತ್ರವಾಗಿದೆ. ಯತ್ನಾಳ್ ಅಸಮಾಧಾನವನ್ನೇ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕ ಕಾಲೆಳೆಯುತ್ತಿದೆ. ಈಗ ರಾಜ್ಯ ಬಿಜೆಪಿ ಮತ್ತು ವಿಪಕ್ಷ ನಾಯಕ ಯತ್ನಾಳ್ ಬಗ್ಗೆ ಟ್ವೀಟ್ ಮಾಡಿದ್ದು, ರಾಜ್ಯ ಬಿಜೆಪಿಯನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಯತ್ನಾಳ್ ವಿಜಯೇಂದ್ರ ಮೇಲೆ ಮಾಡಿರುವ ಆರೋಪಗಳ ಪಟ್ಟಿಯನ್ನು ಕಾಂಗ್ರೆಸ್ ಹಂಚಿಕೊಂಡಿದೆ. "ಬೊಮ್ಮಾಯಿಯವರನ್ನು ಸೋಲಿಸಲು ಬಿವೈ ವಿಜಯೇಂದ್ರ ಹಣ ಚೆಲ್ಲಿದ್ದಾರೆ. ವಿ. ಸೊಮ್ಮಣ್ಣನವರ ರಾಜಕೀಯ ಜೀವನ ಅಂತ್ಯಗೊಳಿಸಲು ಷಡ್ಯಂತ್ರ ರೂಪಿಸಿದ್ದು ವಿಜಯೇಂದ್ರ. ಪಂಚಮಸಾಲಿ ಹೋರಾಟ ಹತ್ತಿಕ್ಕಲು ವಿಜಯೇಂದ್ರ ಹಲವು ಷಡ್ಯಂತ್ರ ರೂಪಿಸಿದ್ದರು.
◆ಬೊಮ್ಮಾಯಿಯವರನ್ನು ಸೋಲಿಸಲು @BYVijayendra ಹಣ ಚೆಲ್ಲಿದ್ದಾರೆ.
— Karnataka Congress (@INCKarnataka) December 12, 2023
◆ವಿ. ಸೊಮ್ಮಣ್ಣನವರ ರಾಜಕೀಯ ಜೀವನ ಅಂತ್ಯಗೊಳಿಸಲು ಷಡ್ಯಂತ್ರ ರೂಪಿಸಿದ್ದು ವಿಜಯೇಂದ್ರ.
◆ಪಂಚಮಸಾಲಿ ಹೋರಾಟ ಹತ್ತಿಕ್ಕಲು ವಿಜಯೇಂದ್ರ ಹಲವು ಷಡ್ಯಂತ್ರ ರೂಪಿಸಿದ್ದರು.
◆ಹೈಕಮಾಂಡ್ ನಾಯಕರಿಗೆ ಬ್ಲಾಕ್ಮೇಲ್ ಮಾಡಿ ರಾಜ್ಯಾಧ್ಯಕ್ಷ ಹುದ್ದೆ ಪಡೆದಿದ್ದಾರೆ.
ಇದಿಷ್ಟೂ…
ಹೈಕಮಾಂಡ್ ನಾಯಕರಿಗೆ ಬ್ಲಾಕ್ಮೇಲ್ ಮಾಡಿ ರಾಜ್ಯಾಧ್ಯಕ್ಷ ಹುದ್ದೆ ಪಡೆದಿದ್ದಾರೆ. ಇದಿಷ್ಟೂ ಬಿಜೆಪಿ ಶಾಸಕ ಯತ್ನಾಳ್ ಬಹಿರಂಗಪಡಿಸಿದ ಸಂಗತಿಗಳು. ಬಿಜೆಪಿ ರಾಜ್ಯಾಧ್ಯಕ್ಷ ನಿಮ್ಮ ಪಕ್ಷಕ್ಕೆ ಹಾಗೂ ಲಿಂಗಾಯತ ಸಮುದಾಯಕ್ಕೆ ಮುಳುವಾಗಿರುವ ಮುಳ್ಳು! ಹೀಗಿರುವಾಗ ಕರ್ನಾಟಕ ಬಿಜೆಪಿಯನ್ನು ಉಳಿಸುವುದಕ್ಕೆ ಯಾವ ದೇವರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಹೇಳಿದೆ.
ಪಂಚಮಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಲು ಬಿಎಸ್ ಯಡಿಯೂರಪ್ಪನವರೇ ವಿರೋಧಿಸಿದ್ದರು ಎಂದು ಹೇಳಿರುವ ಯತ್ನಾಳ್, ವಿಜಯೇಂದ್ರ ಮತ್ತು ಬಿಎಸ್‌ವೈ ಇಬ್ಬರನ್ನೂ ನಮ್ಮ ಸಮುದಾಯ ಒಪ್ಪಿಕೊಳ್ಳುವುದಿಲ್ಲ ಎಂದಿದ್ದರು.
ಆ'ಶೋಕ' ಗೀತೆ!
— Karnataka Congress (@INCKarnataka) December 12, 2023
◆ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಶಾಸಕ ಅಭಿನಂದಿಸಲು ಒಪ್ಪಲಿಲ್ಲ.
◆ಸಭಾತ್ಯಾಗ ಮಾಡಿದರೆ ಬಿಜೆಪಿ ಶಾಸಕರೇ ಕುರ್ಚಿ ಬಿಟ್ಟು ಏಳಲಿಲ್ಲ.
◆ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಬಿಜೆಪಿ ಶಾಸಕರಿಂದಲೇ ಘೇರಾವ್.
◆ವಿರೋಧ ಪಕ್ಷದ ನಾಯಕನ ಕೊಠಡಿಗೆ ಬರಲು ಒಪ್ಪದ ಬಿಜೆಪಿ ಶಾಸಕ.
◆ಸಭಾತ್ಯಾಗ…
ವಿಪಕ್ಷ ನಾಯಕನದ್ದು ಆ'ಶೋಕ' ಗೀತೆ!
ಮತ್ತೊಂದು ಟ್ವೀಟ್‌ನಲ್ಲಿ ವಿಪಕ್ಷ ನಾಯಕ ಅಶೋಕ್ ಅವರನ್ನು ಕಾಲೆಳೆದಿರುವ ಕಾಂಗ್ರೆಸ್, ಅವರದ್ದು ಆ ಶೋಕ ಗೀತೆ ಎಂದು ಹೇಳಿದೆ. ಬಿಜೆಪಿ ಶಾಸಕರೇ ವಿಪಕ್ಷ ನಾಯಕನಿಗೆ ಮರ್ಯಾದೆ ಕೊಡುತ್ತಿಲ್ಲ ಎಂದು ಹೇಳಿದೆ.
ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಶಾಸಕ ಅಭಿನಂದಿಸಲು ಒಪ್ಪಲಿಲ್ಲ. ಸಭಾತ್ಯಾಗ ಮಾಡಿದರೆ ಬಿಜೆಪಿ ಶಾಸಕರೇ ಕುರ್ಚಿ ಬಿಟ್ಟು ಏಳಲಿಲ್ಲ. ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಬಿಜೆಪಿ ಶಾಸಕರಿಂದಲೇ ಘೇರಾವ್ ಹಾಕಿದ್ದಾರೆ.
ವಿರೋಧ ಪಕ್ಷದ ನಾಯಕನ ಕೊಠಡಿಗೆ ಬರಲು ಒಪ್ಪದ ಬಿಜೆಪಿ ಶಾಸಕ. ಸಭಾತ್ಯಾಗ ಮಾಡಿರುವುದಕ್ಕೆ ಸ್ವಪಕ್ಷದ ಶಾಸಕರಿಂದಲೇ ತರಾಟೆ. ಬಕೆಟ್ ರಾಜಕಾರಿಣಿ ಎಂದು ಬಿಜೆಪಿಗರಿಂದಲೇ ಬಿರುದು. ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ಸ್ವಪಕ್ಷದ ನಾಯಕರಿಂದಲೇ ಸದನದಲ್ಲಿ ಮಾತನಾಡಲು ಅಡ್ಡಿ. ಎಂದು ಹಲವು ಅಂಶಗಳ ಪಟ್ಟಿಯನ್ನು ಕೊಟ್ಟಿದ್ದು, ವಿರೋಧ ಪಕ್ಷದ ನಾಯಕನಿಗೆ ವಿರೋಧ ಪಕ್ಷ ಸೃಷ್ಟಿಯಾಗಿದೆ ಎಂದಿದೆ.
ವಿರೋಧ ಪಕ್ಷದ ನಾಯಕನಿಗೆ ಮತ್ತೊಂದು ವಿರೋಧ ಪಕ್ಷ ಸೃಷ್ಟಿಯಾಗಿರುವಾಗ ಅಶೋಕರ ಶೋಕ ರಾಗವನ್ನು ಕೇಳುವವರು ಯಾರು ಎಂದು ಕರ್ನಾಟಕ ಬಿಜೆಪಿಯನ್ನು ಪ್ರರ್ಶನೆ ಮಾಡಿದೆ.












Click it and Unblock the Notifications