‘ಕರ್ನಾಟಕದಲ್ಲಿ ಸಿಡಿ ಜನಕ ಬ್ರದರ್ ಸ್ವಾಮಿ!’: ಕರ್ನಾಟಕ ಕಾಂಗ್ರೆಸ್ ಸ್ಫೋಟಕ ಆರೋಪ!

ಪ್ರಜ್ವಲ್ ರೇವಣ್ಣ ಪ್ರಕರಣ ದೊಡ್ಡ ತಿರುವು ಪಡೆಯುತ್ತಿದ್ದು, ತಿಕ್ಕಾಟ ಬಲು ಜೋರಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ & ಜೆಡಿಎಸ್ ನಡುವೆ ಈ ವಿಚಾರದಲ್ಲಿ ನೇರ ಯುದ್ಧ ಆರಂಭವು ಆಗಿದೆ. ಹೀಗಿದ್ದಾಲೇ ಇಂದು ಕರ್ನಾಟಕ ಕಾಂಗ್ರೆಸ್ ಹೊಸ ಸವಾಲು ಎಸೆದಿದೆ. ಹಾಗಾದರೆ, ಇದೀಗ ಕರ್ನಾಟಕ ಕಾಂಗ್ರೆಸ್ ಎಸೆದಿರುವ ಆ ಹೊಸ ಸವಾಲು ಏನು? ಜೆಡಿಎಸ್ ವಿರುದ್ಧ, ಇದೀಗ ಕರ್ನಾಟಕ ಕಾಂಗ್ರೆಸ್ ಮಾಡಿರುವ ಗಂಭೀರ ಆರೋಪ ಏನು? ಬನ್ನಿ ತಿಳಿಯೋಣ.

ಅಂದಹಾಗೆ ಪ್ರಜ್ವಲ್ ರೇವಣ್ಣ ಪ್ರಕರಣ ಭಾರತದಲ್ಲಿ ಮಾತ್ರವಲ್ಲ ಸದ್ಯಕ್ಕೆ ಜಗತ್ತಿನಾದ್ಯಂತ ಪ್ರಜ್ವಲಿಸಿದೆ. ಒಂದು ಕಡೆ ಕಾಂಗ್ರೆಸ್ ಸೇರಿದಂತೆ ಕೇಂದ್ರದಲ್ಲಿ ವಿರೋಧ ಪಕ್ಷಗಳ ನಾಯಕರ ಪಡೆ ಇದೇ ವಿಚಾರ ಮುಂದೆ ಇಟ್ಟುಕೊಂಡು ಪ್ರಧಾನಿ ಮೋದಿ ಅವರ ಸರ್ಕಾರವನ್ನ ಪದೇ ಪದೇ ಕೆಣಕುತ್ತಿದೆ. ಹೀಗಿದ್ದಾಗಲೇ ಕರ್ನಾಟಕ ಕಾಂಗ್ರೆಸ್ ಕೂಡ ಗಂಭೀರ ಆರೋಪ ಒಂದನ್ನ ಈಗ ಮಾಡಿದೆ. ಈ ಮೂಲಕ ಮೈತ್ರಿ ಪಡೆಯ ನಾಯಕರಿಗೆ ಶಾಕ್ ನೀಡಿದೆ.

Karnataka Congress Alleged Like This About Prajwal Revanna Case

'ಕರ್ನಾಟಕದಲ್ಲಿ ಸಿಡಿ ಜನಕ ಬ್ರದರ್ ಸ್ವಾಮಿ!'

ಕರ್ನಾಟಕ ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಒಂದನ್ನ ಮಾಡಿದ್ದು, 'ಕರ್ನಾಟಕದಲ್ಲಿ ಸಿಡಿ ಜನಕ ಬ್ರದರ್ ಸ್ವಾಮಿ! ಮಗನ ಪಟ್ಟಾಭಿಷೇಕದ ಆಸೆಗಾಗಿ ಆರು ತಿಂಗಳು ಮುಂಚೆನೇ ಡೀಲ್ ವಕೀಲನ ಬಳಸಿಕೊಂಡು ಸಿಡಿ ಬ್ಲಾಕ್ಮೇಲ್ ಮಾಡಿದ ಕೀರ್ತಿ ಬ್ರದರ್ ಸ್ವಾಮಿಗೆ ಸೇರುತ್ತದೆ.' ಎಂದು ಆರೋಪಿಸಿದೆ.

'ಹಾಸನದ ಟಿಕೆಟ್ ಹಂಚಿಕೆ...'

ಹಾಗೇ ಕರ್ನಾಟಕ ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಆರೋಪ ಮುಂದುವರಿಸಿ, 'ತನ್ನ ಕುಟುಂಬದ ಅವಾಂತರ ತಡೆದು ಹೆಣ್ಣುಮಕ್ಕಳ ರಕ್ಷಣೆ ಮಾಡದ ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ ಆಡುತ್ತಿದ್ದಾರೆ? ಹಾಸನದ ಟಿಕೆಟ್ ಹಂಚಿಕೆ ಇಂದ ಚುನಾವಣೆವರೆಗೆ ಒಳ ಆಟ ಆಡಿ ಈಗ ಮಾನ ಹರಾಜು ಆದಮೇಲೆ ಸತ್ಯ ಹರೀಶ್ಚಂದ್ರ ಪಾತ್ರಕ್ಕೆ ಬಣ್ಣ ಬಳಿದುಕೊಳ್ಳುತ್ತಿದ್ದಾರೆ! ಅಸೆಂಬ್ಲಿಯ ಫಲಿತಾಂಶಕ್ಕೆ ಮೊದಲೇ ಸಿಂಗಾಪುರದಲ್ಲಿ ಕುಳಿತು ಮುಖ್ಯಮಂತ್ರಿ ಕನಸು ಕಂಡ ಬ್ರದರ್ ಸ್ವಾಮಿ ಸಿಗದ ಕುರ್ಚಿಗಾಗಿ ಹತಾಶೆಗೊಂಡು ಏನೆಲ್ಲಾ ಮಾಡಿ ತನ್ನ ಅಣ್ಣನ ಮಗನಂತೆ ಬಯಲಾಗುತ್ತಿದ್ದಾರೆ?' ಎಂದು ಕಾಂಗ್ರೆಸ್ ಆರೋಪ ಮಾಡಿದೆ.

'ಸಿಡಿ ಮಾಡಿದವರ SIT...'

ಇದರ ಜೊತೆಗೆ, 'ಸಿಡಿ ಮಾಡಿದವರ SIT ಮುಂದೆ ನಿಲ್ಲಿಸಲು ಆಗದ ಬ್ರದರ್ ಸ್ವಾಮಿ ತನಿಖೆ ದಾರಿ ತಪ್ಪಿಸಲು ಅಧಿಕಾರಿಗಳ ಜರಿಯುತ್ತಿದ್ದಾರೆ. ಬ್ರದರ್ ಸ್ವಾಮಿ ನಿಮ್ಮ ಬಳಿ ಅಷ್ಟೊಂದು ಧಾಖಲೆ ಇದ್ದರೆ ನೀವೇ SIT ಗೆ ಪ್ರಮಾಣ ಪತ್ರ ನೀಡಿ ಸಾಕ್ಷಿ ಹೇಳಿ? ನೊಂದವರಿಗೆ ಸಾಂತ್ವನ ಹೇಳಿ. ಮನಃಸಾಕ್ಷಿ ಇದ್ದರೆ ನೊಂದವರ ಕ್ಷಮೆ ಕೇಳಿ. ಪಲಾಯನ ಬಿಟ್ಟು ರಾಜ್ಯದ ಗೌರವ ಮಣ್ಣು ಪಾಲು ಮಾಡಿ ಹೆಣ್ಣುಮಕ್ಕಳ ಬಾಳಿಗೆ ಕಂಠಕವಾದ ನಿಮ್ಮ ಅಣ್ಣನ ಮಗನಿಗೆ ಬುದ್ದಿ ಕಲಿಸಿ ಮರ್ಯಾದೆ ಉಳಿಸಿಕೊಳ್ಳಿ. ನಿಮ್ಮ ಕುಟುಂಬದ ಒಳ ಜಗಳಕ್ಕೆ ರಾಜ್ಯದ ಹೆಣ್ಣುಮಕ್ಕಳ ಬದುಕಿನೊಂದಿಗೆ ಆಟವಾಡಿ ಈಗ ಪೆನ್ ಡ್ರೈವ್ ಹಂಚಿಕೆ ಹೆಸರಲ್ಲಿ ರಕ್ಷಣೆ ಪಡೆಯುವ ನಾಟಕ ಕೊನೆಗೊಳಿಸಿ ಮಹಾನ್ ಚಿತ್ರ ನಿರ್ಮಾಪಕ ಬ್ರದರ್ ಸ್ವಾಮಿ ಅವರೇ?' ಎಂದಿದೆ ಕರ್ನಾಟಕ ಕಾಂಗ್ರೆಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+