ಸಿದ್ದರಾಮಯ್ಯನವರಿಂದ ಇನ್ನು ಜಿಲ್ಲಾ ಜನತಾದರ್ಶನ

ಆದರೆ ಮೊದಲ ದಿನದಿಂದಲೂ ಜನಪರ ಕಾಳಜಿ ಹೊಂದಿರುವ ನಮ್ಮ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಮುಖ್ಯಮಂತ್ರಿಯ ಜನತಾದರ್ಶನ' ಜಿಲ್ಲಾ ಮಟ್ಟದಲ್ಲೂ ಮಾಡುವುದಾಗಿ ಘೋಷಿಸಿದ್ದಾರೆ.
ಈ ಹಿಂದೆ ಜನತಾದರ್ಶನ ಎಂಬುದು ರಾಜಧಾನಿಗೆ ಸೀಮಿತವಾಗಿತ್ತು. ಬಹುಶಃ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ರಾಜಧಾನಿಯನ್ನು ಬಿಟ್ಟು ಜಿಲ್ಲಾ ಮಟ್ಟದಲ್ಲಿ ಜನತಾದರ್ಶನಕ್ಕೆ ಮುಂದಾಗಿದ್ದಾರೆ ಎನ್ನಬಹುದು.
ಬೆಂಗಳೂರು ನಿಜಕ್ಕೂ ದೂರವಿತ್ತು! 'ನಾಡಿನ ದೊರೆಗಳೇ ನಿಮ್ಮನ್ನು ಕಾಣಲು, ನಮ್ಮ ಅಹವಾಲು ಸಲ್ಲಿಸಲು ಬೆಂಗಳೂರಿಗಂಟ ಬರುವುದು ನಮಗೆ ಆಗದು. ನಾವು ಯಾವುದೋ ಮೂಲೆಯಲ್ಲಿರುವ ಸಾಮಾನ್ಯ ಜನ. ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮ ಮುಂದೆ ಅರ್ಜಿಯನ್ನು ಇಡುವ ಬದಲು ನಮಗೆ ನಾವೇ ಸಮಾಧಾನ ಹೇಳಿಕೊಂಡು ಸಮಸ್ಯೆ ಪರಿಹಾರಿಸಿಕೊಳ್ಳುವುದು ಉತ್ತಮ' ಎಂದು ಅನೇಕಾನೇಕ ಮಂದಿ ಅಲವತ್ತುಕೊಂಡಿದ್ದರು.
ಅಷ್ಟು ದೂರ ಖರ್ಚು ಮಾಡಿಕೊಂಡು ಹೋಗುವುದು ದೂರದ ಮಾತಾಗಿತ್ತು. ತಮ್ಮನ್ನು ಕಾಡುವ ಒಂದಲ್ಲ ಒಂದು ಜ್ವಲಂತ ಸಮಸ್ಯೆಗೆ ಪರಿಹಾರ ಕೋರಿ ರಾಜಧಾನಿಯಲ್ಲಿನ ಜನತಾದರ್ಶನಕ್ಕೆ ಹೋಗುವುದನ್ನೇ ಬಿಟ್ಟುಬಟ್ಟಿದ್ದರು.
ಇನ್ನೂ ಸಮಯ, ರೂಪುರೇಷೆ ನಿಗದಿಯಾಗಿಲ್ಲ:
ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಮ್ಮ ಸಮಸ್ಯೆಗಳನ್ನು ಆಲಿಸಲು ತೀರಾ ನೀವಿರುವ ಕಡೆಗೇ ಬರಲು ಆಗದಿದ್ದರೂ ಕನಿಷ್ಠ ನಿಮ್ಮ ಜಿಲ್ಲಾ ಕೇಂದ್ರಕ್ಕೆ ಬರಲಿದ್ದಾರೆ. ಆಗ ನಿಮ್ಮ ದುಃಖ-ದುಮ್ಮಾನಗಳನ್ನು ಅವರಲ್ಲಿ ಹೇಳಿಕೊಂಡು ಒಂದಷ್ಟು ಪರಿಹಾರ ಕಾಣಬಹುದು, ಪ್ರಯತ್ನಿಸಿ. All the best!












Click it and Unblock the Notifications