ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಮಠಮಾನ್ಯಗಳಿಗೆ 25 ಕೋಟಿ ಕೊಡುಗೆ
ಬೆಂಗಳೂರು, ಜುಲೈ 5: ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿರುವ ಮಠಮಾನ್ಯಗಳಿಗೆ ಕುಮಾರಸ್ವಾಮಿ ಕೊಡುಗೆ ನೀಡಿದ್ದಾರೆ.
ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ವಿವಿಧ ಧಾರ್ಮಿಕ ಕೇಂದ್ರಗಳಿಗೆ 25 ಕೋಟಿ ಮೀಸಲಿರಿಸಲಾಗಿದೆ.
ಸಿದ್ಧರಾಮೇಶ್ವರ ಭೋವಿ ಗುರುಪೀಠ, ಕಾಗಿಲೆನೆಲೆ ಮಹಾಸಂಸ್ಥಾನ, ಯಾದವ ಮಹಾಸಂಸ್ಥಾನ, ಕಂಬಾರ ಗುರುಪೀಠ, ಹಡಪದ ಅಪ್ಪಣ್ಣ ಗುರುಪೀಠ, ಕಂಬಾಳ ಗುರುಪೀಠ, ದೇವಾಂಗ ಗುರುಪೀಠ, ಮಡಿವಾಳ ಗುರುಪೀಠ, ಭಗೀರಥ ಗುರುಪೀಠ, ವಾಲ್ಮೀಕಿ ಗುರುಪೀಠ, ಯಾದವ ಮಹಾಸಂಸ್ಥಾನ, ಛಲವಾದಿ ಗುರುಪೀಠ ಸೇರಿದಂತೆ ವಿವಿಧ ಸಮುದಾಯಗಳ ಧಾರ್ಮಿಕ ಪೀಠಗಳಿಗೆ ಅನುದಾನ ನೀಡಲು ನಿರ್ಧರಿಸಲಾಗಿದೆ.

ಬ್ರಾಹ್ಮಣ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿರುವ ಕುಮಾರಸ್ವಾಮಿ, ಅದಕ್ಕಾಗಿ 25 ಕೋಟಿ ಮೀಸಲಿರಿಸಿದ್ದಾರೆ.
ಅಲ್ಲದೆ, ಪ್ರಸಕ್ತ ಸಾಲಿನಿಂದ ಆದಿ ಶಂಕರಾಚಾರ್ಯರ ಜಯಂತಿ ಆಚರಣೆಗೆ ನಿರ್ಧರಿಸಲಾಗಿದೆ.
2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರ ತಮ್ಮ ಬಜೆಟ್ ಅವಧಿಗಳಲ್ಲಿ ಮಠಗಳಿಗೆ ಭಾರಿ ಅನುದಾನ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.












Click it and Unblock the Notifications