‘ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಕೈ ಸೇರದ ಗೃಹಲಕ್ಷ್ಮಿ ತೆಲಂಗಾಣದಲ್ಲಿ ಮಹಾಲಕ್ಷ್ಮಿ’
ಕರ್ನಾಟಕ ಚುನಾವಣೆಯ ಕಾಂಗ್ರೆಸ್ ಪಕ್ಷ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಗ್ಯಾರಂಟಿ ಯೋಜನೆಗಳು. ಹೀಗೆ 5 ಗ್ಯಾರಂಟಿ ಯೋಜನೆಗಳ ಮೂಲಕ, ಕರ್ನಾಟಕ ಮತದಾರರ ಮನ ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಹೀಗಾಗಿಯೇ ಪಂಚರಾಜ್ಯ ಚುನಾವಣೆ, ಅಂದ್ರೆ 5 ರಾಜ್ಯದ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷ ಕರ್ನಾಟಕದ ಮಾದರಿ ತೋರಿಸಿತ್ತು. ಈ ಮೂಲಕ ಮತದಾರರ ಮನಸ್ಸು ಗೆಲ್ಲೋದಕ್ಕೆ ಮುಂದಾಗಿದೆ. ಹೀಗಿದ್ದಾಗಲೇ ಬಿಜೆಪಿ ಸ್ಫೋಟಕ ಆರೋಪ ಮಾಡಿದೆ.
ಹೌದು, ಇಂದು 5 ರಾಜ್ಯಗಳ ಚುನಾವಣೆಯ ಸಮೀಕ್ಷೆಗಳ ವರದಿ ರಿಲೀಸ್ ಆಗಿದೆ. ಹೀಗಾಗಿ ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಫೈಟ್ ಬಲು ಜೋರಾಗುತ್ತಿದೆ. ಅದ್ರಲ್ಲೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಬಿಜೆಪಿ ಮತ್ತೊಮ್ಮೆ ವಾಗ್ದಾಳಿ ಆರಂಭಿಸಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ದ ಹಲವು ಗಂಭೀರ ಆರೋಪ ಹೊರಿಸಿದೆ. ಅರೆ ಹಾಗಾದರೆ ಕರ್ನಾಟಕ ಬಿಜೆಪಿ ಈಗ ಕಾಂಗ್ರೆಸ್ ವಿರುದ್ಧ ಹೊರಿಸಿರುವ ಆರೋಪಗಳ ಪಟ್ಟಿ ಏನು?

'ತೆಲಂಗಾಣದಲ್ಲಿ ಜನರ ಕಿವಿ ಮೇಲೆ ಹೂವಿಡಲು..'
ಅಂದಹಾಗೆ ಬಿಜೆಪಿ ಈಗ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಆರೋಪ ಪಟ್ಟಿ ನೀಡಿದ್ದು 'ತೆಲಂಗಾಣದಲ್ಲಿ ಜನರ ಕಿವಿ ಮೇಲೆ ಹೂವಿಡಲು @INCKarnataka ಕಂಡುಕೊಂಡಿರುವ ಮಾರ್ಗಗಳು: ▪️ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಕೈ ಸೇರದ ಗೃಹಲಕ್ಷ್ಮಿ ತೆಲಂಗಾಣದಲ್ಲಿ ಮಹಾಲಕ್ಷ್ಮಿ. ▪️ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 15,000 ಎಂದು ವಂಚಿಸಿದಂತೆ ರೈತರಿಗೆ ವಂಚಿಸಲು ರೈತು ಭರೋಸಾ. ▪️ 200 ಯುನಿಟ್ ಎಂದು ಕರ್ನಾಟದಲ್ಲಿ ಸರಾಸರಿಯ ಟೋಪಿ ಹಾಕಲಾದ ಗೃಹಜ್ಯೋತಿ.' ಎಂದು ಆರೋಪಿಸಿದೆ ಬಿಜೆಪಿ.
ಹಾಗೇ ತನ್ನ ಆರೋಪ ಪಟ್ಟಿ ಮುಂದುವರಿಸಿದ ಬಿಜೆಪಿ, '▪️ ಇಂದಿರಾ ಕ್ಯಾಂಟೀನುಗಳನ್ನೇ ಸರಿಯಾಗಿ ನಡೆಸಲಾರದವರಿಂದ ಇಂದಿರಮ್ಮ ಇಂಡ್ಳು ಎಂದು ₹5 ಲಕ್ಷ ಮೌಲ್ಯದ ಮನೆಯ ಭರವಸೆ. ▪️ ಕರ್ನಾಟಕದಲ್ಲಿ ಇನ್ನೂ ಜಾರಿಯೇ ಆಗದ ಯುವನಿಧಿ ಅಲ್ಲಿ ಚೆಯುತ ಮತ್ತು ಯುವವಿಕಾಸಗಳಾಗಿ ವಂಚನೆಗೆ ಸಿದ್ಧವಾಗಿದೆ. ಅಧಿಕಾರಕ್ಕೆ ಬರಲು ಮೋಸದ ಮಾರ್ಗ ಹಿಡಿದು ಜಯಿಸಬಹುದು ಎಂಬುದನ್ನು ಕರ್ನಾಟಕದಿಂದ ಕಲಿತುಕೊಂಡಿರುವ ಕಾಂಗ್ರೆಸ್ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಈ ಮೋಸವನ್ನೇ ಮುಂದುವರಿಸುತ್ತಿದೆ.' ಎಂದು ಆರೋಪ ಮಾಡಿದೆ.
ತೆಲಂಗಾಣದಲ್ಲಿ ಜನರ ಕಿವಿ ಮೇಲೆ ಹೂವಿಡಲು @INCKarnataka ಕಂಡುಕೊಂಡಿರುವ ಮಾರ್ಗಗಳು:
— BJP Karnataka (@BJP4Karnataka) November 30, 2023
▪️ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಕೈ ಸೇರದ ಗೃಹಲಕ್ಷ್ಮಿ ತೆಲಂಗಾಣದಲ್ಲಿ ಮಹಾಲಕ್ಷ್ಮಿ.
▪️ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 15,000 ಎಂದು ವಂಚಿಸಿದಂತೆ ರೈತರಿಗೆ ವಂಚಿಸಲು ರೈತು ಭರೋಸಾ.
▪️ 200 ಯುನಿಟ್ ಎಂದು ಕರ್ನಾಟದಲ್ಲಿ ಸರಾಸರಿಯ… pic.twitter.com/tNcz2rIcwm
ಒಟ್ನಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಸಮಯದಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗ್ಯಾರಂಟಿ ವಾರ್ ಶುರುವಾಗಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಸಮೀಕ್ಷೆಗಳ ವರದಿ ಪ್ರಕಾರ, ಕಾಂಗ್ರೆಸ್ ತೆಲಂಗಾಣದಲ್ಲಿ ಮುಂದೆ ಇದೆ. ಇನ್ನೂ ಕೆಲ ಸಮೀಕ್ಷೆ ಪ್ರಕಾರ ತೆಲಂಗಾಣದ ವಿಧಾನಸಭೆಯಲ್ಲಿ 'ಚಿತ್ರಾನ್ನ' ಅಂದ್ರೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಹೀಗಾಗಿಯೇ, ಎಲ್ಲಾ ಪ್ರಶ್ನೆಗಳಿಗೆ ಡಿಸೆಂಬರ್ 3 ಕ್ಕೆ ಪಕ್ಕಾ ಉತ್ತರ ಸಿಗಲಿದೆ.












Click it and Unblock the Notifications