Karnataka Bandh: SSLC ಪರೀಕ್ಷೆಗೆ 'ಕರ್ನಾಟಕ ಬಂದ್' ಬಿಸಿ ತಟ್ಟುತ್ತಾ?

ಬೆಂಗಳೂರು, ಮಾರ್ಚ್ 20: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ (ಕರ್ನಾಟಕ ಮಾಧ್ಯಮಿಕ ಶಾಲಾ ರಜೆ ಪ್ರಮಾಣಪತ್ರ - SSLC) ವಾರ್ಷಿಕ ಪರೀಕ್ಷೆಗಳು ಆರಂಭಕ್ಕೆ ಕ್ಷಣಗಣನೇ ಶುರುವಾಗಿದೆ. ಎರಡು ಕಾರಣಗಳಿಗೆ ಕನ್ನಡಪರ ಸಂಘಟನೆಗಳು ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಬಂದ್‌ ಬಿಸಿ ಪರೀಕ್ಷೆ ಮೇಲೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲೆ, ಅವರ ಸಾರಿಗೆ ಸಂಚಾರದ ಮೇಲೆ ಪರಿಣಾಮ ಬೀರುತ್ತಾ?

ಈ ಮೊದಲೇ ಘೋಷಿಸಿದಂತೆ ಮಾರ್ಚ್ 22 ರಂದು ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್ ಮಾಡಿಯೇ ತಿರುತ್ತೇವೆ ಎಂದಿವೆ. ಇದು ರಾಜ್ಯಾದ್ಯಂತ ಶಾಲೆಗಳ ಕಾರ್ಯಚಟುವಟಿಕೆ, ಮುಖ್ಯವಾಗಿ SSLC ಪರೀಕ್ಷೆ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಈ ಬಗ್ಗೆ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿದ್ದಾರೆ.

Karnataka Bandh on March 22 Will It Impact on SSLC Exams and School Operations

SSLC ಯ 2025ರ ವಾರ್ಷಿಕ ಪರೀಕ್ಷೆಯು ವರ್ಷದ ಮಾರ್ಚ್ ಏಪ್ರಿಲ್ ಹೊತ್ತಿಗೆ ಬರುತ್ತದೆ. ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ SSLC ಪರೀಕ್ಷೆಗಗಳು ಜರುಗಲಿವೆ. ಇತ್ತ ಬಂದ್ ಮಾರ್ಚ್ 22 ರಂದು ನಡೆಯಲಿದೆ. ಒಂದು ದಿನ ಮೊದಲೇ ಪರೀಕ್ಷೆ ನಡೆಯುತ್ತಾದರೂ ವಿದ್ಯಾರ್ಥಿಗಳ ಸಂಚಾರಕ್ಕೆ ಅಡಚಣೆ ಆಗುವ ನಿರೀಕ್ಷೆ ಇದೆ. ಜೊತೆಗೆ ಎಸ್‌ಎಸ್‌ಎಲ್‌ಸಿ ಪೂರ್ವದ 9,8,7ನೇ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಉಂಟಾಗುವ ಸಾಧ್ಯತೆ ಇದೆ..

Take a Poll

ಕರ್ನಾಟಕದ ಖಾಸಗಿ ಅನುದಾನ ರಹಿತ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳ ಪ್ರಕಾರ, ವಿದ್ಯಾರ್ಥಿಗಳ ವೇಳಾಪಟ್ಟಿ ಅಡ್ಡಿಪಡಿಸದಂತೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಇತ್ತ ರಾಜ್ಯ ಬಂದ್‌ ನಿರ್ಧಾರದಿಂದ ಹಿಂದೆ ಸರಿಯದಿರಲು ಹೋರಾಟಗಾರರು ನೀರ್ಣಯಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿಗೆಂದು ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಮಂಡಿಸಿದೆ. ಬೆಳಗಾವಿಯಲ್ಲಿ ಮರಾಠಿ ಪುಂಡರ ಹಾವಳಿ ಹೆಚ್ಚಾಗಿದ್ದು, ರಾಜ್ಯ ಸಾರ್ವಜನಿಕ ಸಾರಿಗೆ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ 'ಕನ್ನಡ ಒಕ್ಕೂಟ ಕರ್ನಾಟಕ ರಾಜ್ಯ' ಸಂಘಟನೆ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.

ಬಂದ್ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪ್ರಯಾಣ ಸಂಕಷ್ಟ?

ಬೆಂಗಳೂರಿನಂತಹ ಮಹಾನಗರದಲ್ಲಿ ವಿದ್ಯಾರ್ಥಿಗಳು ಸಾರಿಗೆ ಸಮಸ್ಯೆ ಎದುರಿಸುವ ಸಾಧ್ಯತೆಗಳು ಇವೆ. ಚಾಲಕ ಸಂಘಟನೆಗಳು ಬಂದ್‌ ಬೆಂಬಲಿಸಿವೆ. ನಿತ್ಯ ವಿದ್ಯಾರ್ಥಿಗಳು ಪ್ರಯಾಣಿಕರು ಆಟೋಗಳನ್ನು ಅವಲಂಭಿಸಿದ್ದಾರೆ. ಹೀಗಾಗಿ ಅಂದು ಸಾರಿಗೆ ಸಮಸ್ಯೆ ಎದುರಿಸುವ ನಿರೀಕ್ಷೆ ಇದೆ. ಇನ್ನೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸೇರಿ ಇತರ ಬಸ್‌ಗಳು ಬೆಂಬಲ ಬಗ್ಗೆ ಸ್ಪಷ್ಟಪಡಿಸಿಲ್ಲ. ಹೀಗಿದ್ದರು ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ತಲುಪವಲ್ಲಿ ವಿಳಂಬವಾಗಬಹುದು.

ಶೈಕ್ಷಣಿಕ ಸಂಸ್ಥೆಗಳಿಂದ ಅಗತ್ಯ ಎಚ್ಚರಿಕೆ

ಕರ್ನಾಟಕ ಬಂದ್‌ಗೆ ಕೇವಲ ಎರಡು ದಿನ ಬಾಕಿ ಇದೆ. ಪರೀಕ್ಷೆಗೆ ಒಂದು ದಿನ ಬಾಕಿ ಇದೆ. ಶಾಲಾ ಶೈಕ್ಷಣಿಕ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಿವೆ. ಕೆಲವು ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿವೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ನೀಡುತ್ತಿವೆ. ಮಾರ್ಚ್ 22 ಶನಿವಾರ ಬರುವ ಕಾರಣ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೇಲೆ ಪರಿಣಾಮ ಆಗದು, ಬೇರೆ ತರಗತಿಗಳ ಮೇಲೆ, ವಿದ್ಯಾರ್ಥಿಗಳ ಪ್ರಯಾಣದ ಮೇಲೆ ಹೊಡೆತ ಬೀಳಬಹುದೆಂಬ ಆತಂಕ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+