Get Updates
Get notified of breaking news, exclusive insights, and must-see stories!

27 ಸಾವಿರ ಪರಭಾಷಿಕರಿಗೆ ಕನ್ನಡ ಕಲಿಸಿದ ಕನ್ನಡ ಗೊತ್ತಿಲ್ಲ ಬಳಗ

2014ರಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಏಕೈಕ ಉದ್ದೇಶದಿಂದ ವಾಟ್ಸಾಪ್ ಮೂಲಕ ಪ್ರಯತ್ನಕ್ಕೆ ಕೈ ಹಾಕಿದ ಅನುಪ್ ಮಯ್ಯ ಇದೀಗಾ ತಮ್ಮ ಕನ್ನಡ ಗೊತ್ತಿಲ್ಲ ತಂಡದವರೊಂದಿಗೆ 27 ಸಾವಿರ ಅನ್ಯಭಾಷಿಗರಿಗೆ 11 ರಾಷ್ಟ್ರಗಳಲ್ಲಿ ಕನ್ನಡವನ್ನು ಕಲಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 24: ಕರ್ನಾಟಕದಲ್ಲಿ ಕನ್ನಡ ಗೊತ್ತಿದ್ದು ಮಾತನಾಡಲು ಹಿಂಜರಿಯುವವರ ಮಧ್ಯೆ ಕಳೆದ 9 ವರ್ಷಗಳಿಂದ ಕನ್ನಡ ಗೊತ್ತಿಲ್ಲದ ಬರೋಬ್ಬರಿ 27,000 ಅನ್ಯ ಭಾಷಿಕರಿಗೆ ಕನ್ನಡವನ್ನು ಕನ್ನಡ ಗೊತ್ತಿಲ್ಲ ತಂಡ ಕಲಿಸುತ್ತಾ ಬಂದಿದೆ.

ಇಂತಹ ಶ್ಲಾಘನೀಯ ಕೆಲಸವನ್ನು ಮಂಗಳೂರಿನ ಪುತ್ತೂರಿನ ಮೂಲದ ಅನುಪ್‌ ಮಯ್ಯ ತಮ್ಮ ಕನ್ನಡ ಗೊತ್ತಿಲ್ಲ ತಂಡದವರೊಂದಿಗೆ ಮಾಡುತ್ತಿದ್ದಾರೆ. 2014ರಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಏಕೈಕ ಉದ್ದೇಶದಿಂದ ವಾಟ್ಸಾಪ್ ಮೂಲಕ ಪ್ರಯತ್ನಕ್ಕೆ ಕೈ ಹಾಕಿದ ಅನುಪ್ ಮಯ್ಯ ಇದೀಗಾ ತಮ್ಮ ಕನ್ನಡ ಗೊತ್ತಿಲ್ಲ ತಂಡದವರೊಂದಿಗೆ 27 ಸಾವಿರ ಅನ್ಯಭಾಷಿಗರಿಗೆ 11 ರಾಷ್ಟ್ರಗಳಲ್ಲಿ ಕನ್ನಡವನ್ನು ಕಲಿಸಿದ್ದಾರೆ.

kannadagottilla team teach kannada for 27,000 non-native speakers

ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅನ್ಯಭಾಷಿಕರಿಗೆ ಹಂಚುವ ಮೂಲಕ ಕನ್ನಡವನ್ನು ಜಗತ್ತಿನಾದ್ಯಂತ ಪಸರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿಸಿದ್ದಾರೆ. ಇತ್ತೀಚೆಗೆ ಕನ್ನಡ ಗೊತ್ತಿಲ್ಲ ಟ್ವಿಟರ್​ ಖಾತೆಯ ಮೂಲಕ ತಮ್ಮ 9 ವರ್ಷದ ತಂಡದ ಕೆಲಸ ಹಾಗೂ 27 ಸಾವಿರ ಅನ್ಯಭಾಷಿಕರಿಗೆ ಕನ್ನಡ ಕಲಿಸಿರುವ ನೆಚ್ಚಿನ ಸಂಗತಿಗಳನ್ನು ಹಂಚಿಕೊಂಡು We are Back ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ಹಲವು ವರ್ಷಗಳ ಹಿಂದೆ ಐಟಿ ಉದ್ಯಮದಲ್ಲಿ ಪುಣೆಯಲ್ಲಿ ಅನುಪ್‌ ಮಯ್ಯ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅಲ್ಲಿನ ಮರಾಠಿ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಆಸೆ ಇರಿಸಿಕೊಂಡಿದ್ದರು. ಸಾಕಷ್ಟು ಹುಡುಕಾಟದ ಬಳಿಕವೂ ಅವರು ಅಲ್ಲಿನ ಭಾಷೆಯ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಲು ಸಹಾಯವಾಗುವ ಯಾವುದೇ ಕೋರ್ಸ್ ಅಥವಾ ಆನ್‌ಲೈನ್ ಕ್ರಮಗಳನ್ನು ಕಂಡುಕೊಳ್ಳಲಾಗಲಿಲ್ಲ. ಆದ್ದರಿಂದ ತಮ್ಮದೇ ಆದ ರೀತಿಯಲ್ಲಿಯೇ ಕನ್ನಡ ಗೊತ್ತಿಲ್ಲದ ಅನ್ಯಭಾಷಿಗರಿಗೆ ಕನ್ನಡ ಹಾಗೂ ಅಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಒಂದು ಒಳ್ಳೆಯ ಅವಕಾಶವನ್ನು ನೀಡುವ ವೇದಿಕೆಯನ್ನು ಕಲ್ಪಿಸಬೇಕು ಎಂದು ನಿರ್ಧರಿಸಿರುವುದಾಗಿ ಅನುಪ್ ಮಯ್ಯ ತಿಳಿಸಿದ್ದಾರೆ.

kannadagottilla team teach kannada for 27,000 non-native speakers

2014ರಲ್ಲಿ ಪೋನ್‌ ಮೂಲಕವೇ ಕನ್ನಡ ಮಾತನಾಡುತ್ತಾ ಭಾಷೆಯನ್ನು ಕಲಿಸಬೇಕು ಎಂಬ ಯೋಜನೆ ಹಾಕಲಾಗಿತ್ತು. ಆದರೆ ಇದು ಖರ್ಚು ಜಾಸ್ತಿ ಎನಿಸಿ ವಾಟ್ಸಾಪ್‌ ಮೂಲಕ ಇದರ ತರಗತಿಗಳನ್ನು ಪ್ರಾರಂಭಿಸಲಾಯಿತು. ಇದೀಗಾ ವಾಟ್ಸಾಪ್‌ ಮೂಲಕವೇ ಸಾವಿರಾರು ಜನರಿಗೆ ಕನ್ನಡವನ್ನು ಮಾತನಾಡುವ ಇನ್ನೂ ಹೆಚ್ಚಿನ ಆಸಕ್ತಿ ಇರುವವರಿಗೆ ಕನ್ನಡವನ್ನು ಬರೆಯಲು ಮತ್ತು ಓದಲು ಕೂಡ ಕಲಿಸಲಾಗುತ್ತಿದೆ. ಇದಲ್ಲದೇ #ABCT ಅಭಿಯಾನದ ಮೂಲಕ Anybody Can Teach ಎಂಬ ಕಿರು ಟ್ಯುಟೋರಿಯಲ್‌ಗಳ ಆನ್‌ಲೈನ್ ವೀಡಿಯೊಗಳನ್ನು ಕೂಡ ಇದರ ವೆಬ್‌ಸೈಟ್‌ ಆದ kannadagottilla.com ನಲ್ಲಿ ಎಲ್ಲರಿಗೂ ಲಭ್ಯವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+