ಎಲ್ಲ ಕನ್ನಡಿಗರು ಖುಷಿ ಪಡಬೇಕಾದ ಸುದ್ದಿ ಇದು: ಯುನಿಕೋಡ್, ಅಸ್ಕಿ ಅಕ್ಷರಗಳ ಪರಿವರ್ತನೆ ಮತ್ತಷ್ಟು ಸುಲಭ
ನೀವು ಓದುತ್ತಿರುವ ಕನ್ನಡದ ಈ ಅಕ್ಷರಗಳು ಯುನಿಕೋಡ್‌ನಲ್ಲಿವೆ (Unicode). ಇದೇ ರೀತಿ ಕನ್ನಡದ ಅಕ್ಷರಗಳು ಅಸ್ಕಿ (ASCII) ಶಿಷ್ಟತೆಯಲ್ಲಿಯೂ ಇರುತ್ತವೆ. ಹಿಂದೆ ಅಸ್ಕಿ ಅಕ್ಷರಗಳ ಬಳಕೆಯೇ ಹೆಚ್ಚಾಗಿತ್ತು. ನಮಗೆಲ್ಲರಿಗೂ ಗೊತ್ತಿರುವ 'ನುಡಿ' ತಂತ್ರಾಂಶದ ಅಕ್ಷರಗಳು ಇದೇ ಶಿಷ್ಟತೆಯಲ್ಲಿ ಇವೆ. ಈಗ ನುಡಿಯಲ್ಲಿಯೂ ಯುನಿಕೋಡ್ ವ್ಯವಸ್ಥೆ ಇದೆ ಎನ್ನುವುದು ಬೇರೆಯೇ ಮಾತು. ಈ ಎರಡು ಅಕ್ಷರ ವ್ಯವಸ್ಥೆಯು ಅವ್ಯವಸ್ಥೆಯಾಗಿ ಓದುಗರನ್ನು ಕಾಡುತ್ತಿತ್ತು. ಇದನ್ನು ಪರಿಹರಿಸಲೆಂದು ರೂಪುಗೊಂಡಿದ್ದ ಕನ್‌ವರ್ಟರ್‌ಗಳು (Font Conversion) ಒಂದು ಮಟ್ಟಕ್ಕೆ ಅಕ್ಷರಪ್ರಿಯರಿಗೆ ನೆರವಾಗಿದ್ದವು. 'ಸಂಕ' ಇಂಥ ಜನಪ್ರಿಯ ಕನ್‌ವರ್ಟರ್ ಆಗಿತ್ತು.
ಈಗ ಇಷ್ಟೆಲ್ಲಾ ವಿಚಾರ ಪ್ರಸ್ತಾಪಿಸಲು ಕಾರಣವಿದೆ. 'ಸಂಕ'ದಲ್ಲಿ ದೊರೆಯುತ್ತಿದ್ದ ಫಾಂಟ್ ಕನ್‌ವರ್ಷನ್ ಸೌಲಭ್ಯ ಈಗ ಮತ್ತೊಂದು ಹಂತಕ್ಕೆ ಏರಿದೆ. ನುಡಿ (ಅಸ್ಕಿ) ಶಿಷ್ಟತೆಯಲ್ಲಿರುವ ಫಾಂಟ್‌ಗಳಲ್ಲಿ ಸಿದ್ಧವಾದ ಫೈಲ್ ಅಪ್‌ಲೋಡ್ ಮಾಡಿ ಅಕ್ಷರ ಪರಿವರ್ತನೆ ಮಾಡುವುದು ಈವರೆಗೆ ಕಷ್ಟವಾಗಿತ್ತು. ಇದೀಗ ವೈ.ಎನ್.ಮಧು ಅವರು ಫೈಲ್ ಅನ್ನೇ ನೇರವಾಗಿ ಅಪ್‌ಲೋಡ್ ಮಾಡಿ ಫಾಂಟ್ ಪರಿವರ್ತಿಸಿಕೊಳ್ಳುವ ಸೌಲಭ್ಯ ರೂಪಿಸಿದ್ದಾರೆ. ಇದು ಕನ್ನಡ ಪುಸ್ತಕ ಮುದ್ರಣ, ಪ್ರಕಾಶಕರು, ಸಾಹಿತ್ಯ, ಪತ್ರಿಕೋದ್ಯಮ, ಮಾಧ್ಯಮ ರಂಗಕ್ಕೆ, ಸಾಫ್ಟವೇರ್ ವಿನ್ಯಾಸಕಾರರಿಗೆ ಅಷ್ಟೇ ಅಲ್ಲದೇ ಮೊಬೈಲ್‌ನಲ್ಲಿ ಕನ್ನಡ ಬಳಸುವವರಿಗೂ ಉಪಯುಕ್ತವಾಗಲಿದೆ.

ಅರವಿಂದ ವಿ.ಕೆ ಅವರ 'ಕನ್ನಡ ಸಂಕ' ಕನ್ವರ್ಟರ್ ನುಡಿ ತಂತ್ರಾಂಶದಲ್ಲಿ ಆಸ್ಕಿ ಮತ್ತು ಯೂನಿಕೋಡ್ ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊಬೈಲ್ ನಲ್ಲಿ ಬಳಸುವ ಕನ್ನಡ ಅಕ್ಷರಗಳು ಯೂನಿಕೋಡ್‌ನಲ್ಲಿರುತ್ತವೆ, ಸ್ಪಷ್ಟವಾಗಿರುತ್ತದೆ. ಆದರೆ ನುಡಿ ಅಕ್ಷರಗಳಲ್ಲಿ ಬರುವ ಕನ್ನಡ ಪದಗಳು ಮೊಬೈಲ್‌ನಲ್ಲಿ ಅಥವಾ ವಿವಿಧ ಕ್ಷೇತ್ರಗಳಲ್ಲಿ ನಾವು ಬಳಸುವಾಗ ತೊಂದರೆ ಆಗುತ್ತಿತ್ತು. ನುಡಿ ಎಲ್ಲ ಅಕ್ಷರ ಕಾಪಿ ಪೇಸ್ಟ್ ಮಾಡಿ ಕನ್ವರ್ಟ್ ಮಾಡಿಕೊಳ್ಳಬೇಕಿತ್ತು. ಆದರೆ ಇಡೀ ನುಡಿ ಫೈಲ್ ಆಪ್ಲೋಡ್ ಮಾಡಿ ಯುನಿಕೋಡ್ ಅಕ್ಷರ ಪಡೆಯಲು ಆಗುತ್ತಿರಲಿಲ್ಲ. ಇದೀಗ ಅದಕ್ಕು ಪರಿಹಾರವನ್ನು ಮಧು ವೈ.ಎನ್ ಅವರು ನೀಡಿದ್ದಾರೆ. ಅವರದ್ದೆ ಹೆಸರಿನಲ್ಲಿ ಹೊಸ ವಿನ್ಯಾಸದಲ್ಲಿ ನುಡಿ ತಂತ್ರಾಂಶ ತಂದಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಅವರು ಮಾಡಿರುವ ಪೋಸ್ಟ್ ಹೀಗಿದೆ...
'ತುಂಬ ವರುಷಗಳಿಂದ ಆಸ್ಕಿ ಟು ಯೂನಿಕೋಡ್ (ಅಥವಾ ಅದರ ಉಲ್ಟಾ) ಪರಿವರ್ತನೆಗೆಂದು ಅರವಿಂದರ ಸಂಕ ಬಳಸುತ್ತಿದ್ದೆ. ಒಂದು ಸಣ್ಣ ಸಮಸ್ಯೆ ಕಾಡ್ತಿತ್ತು. ಒಂದಿಡೀ ಫೈಲನ್ನು ಅಪ್ಲೋಡ್ ಮಾಡಿ ಪರಿವರ್ತನೆಯಾದ ಫೈಲನ್ನು ಡೌನ್ಲೋಡ್ ಮಾಡಿಕೊಳ್ಳುವಂತಿದ್ದರೆ ಹೆಂಗೆ ಅಂತ. ಯಾರೋ ಇದನ್ನು ಕೇಳಿದ್ದರೂ ಸಹ, ಇದು ಮಾಡಕ್ಕಾಗತ್ತ ನೋಡಿ ಎಂದು. ಅದೀಗ ಸಾಧ್ಯವಾಗಿದೆ. ಕೆಲವು ಹೊಸ ಫೀಚರು ಸಹ ಇದಾವೆ. ಇದು ಕೊಟ್ಟಿರುವ ಪಠ್ಯ ಆಸ್ಕಿಯೋ ಯುನಿಕೋಡೋ ಎಂದು ತಾನೇ ಗುರುತಿಸುತ್ತದೆ. ಎಷ್ಟು ಅಕ್ಷರಗಳಿವೆ ಎಂದೂ ಅದರಲ್ಲಿ ಎಷ್ಟು % ಆಸ್ಕಿ/ಯುನಿಕೋಡ್ ಇದೆಯೆಂದೂ ಗುರುತಿಸುತ್ತದೆ (ಇದು ಮಿಶ್ರ ಪಠ್ಯ ಇದ್ದಾಗ ಯಾವ ದಿಕ್ಕಿನಲ್ಲಿ ಪರಿವರ್ತಿಸುವುದು ಸೂಕ್ತ ಎಂದು ಸಹಾಯ ಮಾಡುತ್ತದೆ). ಆಸಕ್ತರು ಬಳಸಿಕೊಳ್ಳಿ.
'ಆಕ್ಚುವಲಿ ನಿಮ್ಮ ಪುಸ್ತಕಗಳು ಮುದ್ರಣಕ್ಕೆ ಅಥವಾ ಪ್ರೂಫ್ ರೀಡಿಂಗ್‌ಗೆ ಹೋಗುವ ಮುನ್ನ ಒಮ್ಮೆ ಅಪ್ಲೋಡ್ ಮಾಡಿ ಚೆಕ್ ಮಾಡಿಕೊಳ್ಳಬಹುದಾದಷ್ಟು ಕೆಲಸ ಈಗ ಸಲೀಸಾಗಿದೆ. ಎಲ್ಲಾದರೂ ಚೂರುಪಾರು ಆಸ್ಕಿ ಅಕ್ಷರಗಳು ಉಳಿದಿದ್ದರೆ ಈ ಉಪಕರಣ ಅದನ್ನು ತಿಳಿಸುತ್ತದೆ' ಎಂದು ಮಧು ಅವರು ಹೇಳಿದ್ದಾರೆ.
ಕನ್ನಡ ಅಕ್ಷರಕ್ಕೆ ಸಿಕ್ಕ ಐಡಿ ಕಾರ್ಡ್
'ತುಂಬಾ ಜನ 'ಏನಿದು ಆಸ್ಕಿ? ಯೂನಿಕೋಡ್?' ಎಂದು ತಲೆಕೆಡಿಸಿಕೊಳ್ಳುತ್ತಿರಬಹುದು. ಅಥವಾ ಬಲ್ಲವರು 'ಇದ್ಯಾಕೆ ಕನ್ನಡಕ್ಕೇ ಈ ಸಮಸ್ಯೆ ವಕ್ಕರಿಸಿದೆ?' ಎಂದು ಚಿಂತೆಗೀಡಾಗಿರಬಹುದು. ಅಸ್ಕಿ ಮತ್ತು ಯುನಿಕೋಡ್ ಶಿಷ್ಟತೆಯ ಇತಿಹಾಸವನ್ನೂ ಮಧು ಅವರು ಮತ್ತೊಂದು ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
'ಕಂಪ್ಯೂಟರ್‌ಗಳಿಗೆ ಮನುಷ್ಯರ ಅಕ್ಷರ-ಭಾಷೆ ಅರ್ಥವಾಗಲ್ಲ, ಅವುಗಳಿಗೆ ತಿಳಿಯುವುದು ಕೇವಲ ಸಂಖ್ಯೆಗಳು ಮಾತ್ರ. ಹಾಗಾಗಿ ಕಂಪ್ಯೂಟರ್‌ಗಳು ಬಂದ ಹೊಸತರಲ್ಲಿ ಅಕ್ಷರಗಳಿಗಾಗಿ ಕೆಲವೇ ಸಂಖ್ಯೆಗಳನ್ನು ಅಥವಾ ಒಂದು ರೀತಿಯ 'ಐಡಿ ಕಾರ್ಡ್' (ನಮ್ಮ ಆಧಾರ್ ಐಡಿ ಇದ್ದಂತೆ) ಮೀಸಲಿಟ್ಟರು. ಇದನ್ನು ಆಸ್ಕಿ (ASCII) ಎನ್ನಲಾಯಿತು. ಆದರೆ ಜಗತ್ತಿನಲ್ಲಿ ಸಾವಿರಾರು ಭಾಷೆಗಳು, ಲಕ್ಷಾಂತರ ಅಕ್ಷರಗಳಿವೆ. ಆರಂಭದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಗೆ ಜಾಗತಿಕ ಮಟ್ಟದ ಐಡಿಗಳಿರಲಿಲ್ಲ. ಹಾಗಾಗಿ ಆಯಾ ಭಾಷೆಯವರು ತಮಗೆ ಇಷ್ಟ ಬಂದ ಸಂಖ್ಯೆಗಳಿಗೆ ತಮ್ಮ ಅಕ್ಷರಗಳನ್ನು ಜೋಡಿಸಿಕೊಂಡರು. ಇದರಿಂದಾಗಿ ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯಲು 'ಬರಹ' ಅಥವಾ 'ನುಡಿ'ಯಂತಹ ಸಾಫ್ಟ್‌ವೇರ್‌ಗಳ ಮಧ್ಯಸ್ಥಿಕೆ ಅನಿವಾರ್ಯವಾಗಿತ್ತು.
ನಂತರ ಅಂತಾರಾಷ್ಟ್ರೀಯ ಸಂಸ್ಥೆಗಳು, "ಹೀಗಾದರೆ ಕಷ್ಟ, ಜಗತ್ತಿನ ಎಲ್ಲಾ ಭಾಷೆಗಳ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟವಾದ (Unique) ಐಡಿ ಕೊಡೋಣ" ಎಂದು ನಿರ್ಧರಿಸಿದವು. ಅದೇ ಯೂನಿಕೋಡ್ (Unicode). ಇದು ಜಗತ್ತಿನ ಎಲ್ಲಾ ಅಕ್ಷರಗಳಿಗೂ ನೀಡಿದ 'ಜಾಗತಿಕ ಆಧಾರ್ ಕಾರ್ಡ್'.
ಹಳೆಯ ಅಕ್ಷರಗಳಿಗೆ ಹೊಸ ಜಾಗತಿಕ ಐಡಿ
ನೀವು ಹಳೆಯ ಸಾಫ್ಟ್‌ವೇರ್‌ಗಳಲ್ಲಿ (ಆಸ್ಕಿ ಆಧಾರಿತ) ಬರೆದ ಕನ್ನಡವನ್ನು ಇಂದಿನ ಆಧುನಿಕ ಮೊಬೈಲ್ ಅಥವಾ ಕಂಪ್ಯೂಟರ್‌ಗಳಲ್ಲಿ ತೆರೆದರೆ 'ಗಜಿಬಿಜಿ' ಅಕ್ಷರಗಳು ಕಾಣಿಸುತ್ತವೆ. ಯಾಕೆಂದರೆ, ಹಳೆಯ ಕಾಲದಲ್ಲಿ ಕನ್ನಡದ ಅಕ್ಷರಕ್ಕೆ ನೀಡಿದ್ದ ಅದೇ ಸಂಖ್ಯೆಯ ಐಡಿಯನ್ನು ಈಗ ಬೇರೆ ಯಾವುದೋ ಇಂಗ್ಲಿಷ್ ಸಂಕೇತಕ್ಕೆ ನೀಡಲಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಲು ನಾವು 'ಯೂನಿಕೋಡ್ ಕನ್ವರ್ಟರ್' ಬಳಸುತ್ತೇವೆ. ಈ ಸಾಫ್ಟ್‌ವೇರ್ ನಿಮ್ಮ ಹಳೆಯ ಅಕ್ಷರಗಳಿಗೆ ಹೊಸ 'ಜಾಗತಿಕ ಐಡಿ'ಯನ್ನು ನೀಡುತ್ತದೆ.
ಇದೇ ಲಾಜಿಕ್ ಉಲ್ಟಾ ಕೂಡ ಕೆಲಸ ಮಾಡುತ್ತದೆ. ಇಂದಿಗೂ ಅನೇಕ ಕನ್ನಡ ದಿನಪತ್ರಿಕೆಗಳು ಹಳೆಯ ವಿನ್ಯಾಸದ ಸಾಫ್ಟ್‌ವೇರ್ ಬಳಸುತ್ತಿರುವುದರಿಂದ, ನಾವು ಯೂನಿಕೋಡ್‌ನಲ್ಲಿ ಬರೆದ ಲೇಖನಗಳನ್ನು ಅವರಿಗೆ ಕಳುಹಿಸುವಾಗ ಅದನ್ನು ಮತ್ತೆ 'ಆಸ್ಕಿ'ಗೆ ಬದಲಾಯಿಸಿಕೊಡುವುದು ಅನಿವಾರ್ಯವಾಗಿದೆ' ಎಂದು ಮಧು ಅವರು ವಿವರಿಸಿದ್ದಾರೆ.
ಕನ್‌ವರ್ಟರ್‌ಗಳನ್ನು ಬಳಸಲು ಲಿಂಕ್: https://madhuyn.com/converter/
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications