ಕೊಟ್ಟ ಮಾತಿನಂತೆ ಅರ್ಜುನನ ಸ್ಮಾರಕಕ್ಕೆ ನೆರವು ನೀಡಿದ ಡಿ ಬಾಸ್ ; ದರ್ಶನ್‌ ಗೆ ಅರ್ಜುನನ ಮೇಲೆ ವಿಶೇಷ ಪ್ರೀತಿಯೇಕೆ?

ಮೈಸೂರು, ಮೇ 23: ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ ಆದಷ್ಟು ಬೇಗನೇ ನಿರ್ಮಿಸಿ ಎಂದು ನಟ ದರ್ಶನ್‌ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.

ಈ ಕುರಿತು ಎಕ್ಸ್‌ ಖಾತೆಯಲ್ಲಿ ನಟ ದರ್ಶನ್‌ ಪೋಸ್ಟ್‌ ಮಾಡಿದ್ದು, ಮಳೆಗಾಲ ಶುರುವಾಗುವ ಮುನ್ನ ಸಮಾಧಿ ನಿರ್ಮಾಣ ಕೆಲಸ ಆರಂಭವಾಗಲಿ ಎನ್ನುವುದು ನನ್ನ ಕೋರಿಕೆ. ಸರ್ಕಾರ ಅರ್ಜುನನಿಗೆ ಸ್ಮಾರಕ ಕಟ್ಟಿಸಲಿ ಬಿಡಲಿ, ದರ್ಶನ್ ಮಾತ್ರ ಆ ವಿಚಾರವನ್ನು ಮರೆತಿಲ್ಲ. ಮಳೆಗಾಲ ಸಮೀಪಿಸಿದೆ ಎನ್ನುವ ಕಾರಣಕ್ಕೆ ಅವರು ಈ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ.

Kannada Actor Darshan Helped In The Burial Of Dead Elephant Arjuna

ವೀರ ಮರಣಹೊಂದಿದ ದಸರಾ ಆನೆ ಅರ್ಜುನನ ಸ್ಮಾರಕ‌ ನಿರ್ಮಾಣಕ್ಕೆ ದರ್ಶನ್ ನೆರವು ನೀಡಲು ಮುಂದಾಗಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಗ್ರಾನೈಟ್ ಕಲ್ಲುನ್ನ ನಟ ತೂಗುದೀಪ್ ದರ್ಶನ ಕಳುಹಿಸಿದ್ದಾರೆ. 2023 ರ ಡಿಸೆಂಬರ್ 4 ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣಹೊಂದಿದ್ದ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ನೆರವು ನೀಡುವುದಾಗಿ ಮಾತುಕೊಟ್ಟಿದ್ರು. ಅರ್ಜುನ ಮೃತಪಟ್ಟ ವೇಳೆ ಸ್ಮಾರಕ ನಿರ್ಮಾಣ ಕ್ಕೆ ನೆರವು ನೀಡಿದ್ರು. ಕೊಟ್ಟ‌ಮಾತಿನಂತೆ ನಟ ದರ್ಶನ ಕಲ್ಲುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಆನೆಯ ಅಂತಿಮ ಸಂಸ್ಕಾರ ನಡೆದ ಜಾಗ ಸಕಲೇಶಪುರದ ಯಸಳೂರು ಸಮೀಪದ ದಬ್ಬಳ್ಳಿ ಕಟ್ಟೆ ನೆಡುತೋಪಿಗೆ ಕಲ್ಲುಗಳು ತಲುಪಿವೆ.

ಮೇ. 2 ರಂದು ನಟ ದರ್ಶನ್‌ ತೂಗುದೀಪ ಅವರು, ʻದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದುʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡು ವಿನಂತಿ ಮಾಡಿದ್ದರು.

ಅದರಂತೆ ನಟ ದರ್ಶನ್‌ ಅವರೇ ಅರ್ಜುನ ಆನೆ ಸಮಾಧಿಗೆ ನೆರವು ನೀಡಿ ಕಲ್ಲುಗಳನ್ನು ಕಳುಹಿಸಿ ತಾತ್ಕಲಿಕ ಹೊದಿಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ದರ್ಶನ್‌ ಅಭಿಮಾನಿ ಬಳಗದ ಸಾಮಾಜಿಕ ಜಾಲತಾಣದಲ್ಲಿ ಸಮಾಧಿ ಹೊದಿಕೆ ಕಾರ್ಯಚರಣೆಗಳು ನಡೆಯುತ್ತಿರುವ ವಿಡಿಯೋಗಳು ಹೆಚ್ಚೆಚ್ಚು ಶೇರ್‌ ಆಗುತ್ತಿವೆ. ಕೊಟ್ಟ ಮಾತಿನಂತೆ ಅರ್ಜುನನ ಸ್ಮಾರಕಕ್ಕೆ ನೆರವು ನೀಡಿದ ನಮ್ಮ ಪ್ರೀತಿಯ ಡಿ ಬಾಸ್‌ ಎನ್ನುವ ಟ್ಯಾಗ್ ಲೈನ್‌ಗಳನ್ನು ಬರೆದು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ದರ್ಶನ್ ಅವರಿಗೆ ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ದರ್ಶನ ಅವರ ತಮ್ಮ ಫಾಮ್‌ ಹೌಸ್‌ ಗಳಲ್ಲಿ ದನಗಳನ್ನು ಸಾಕಿದ್ದರು. ಅವರು ಹೀರೋ ಆದ ಬಳಿಕವೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರಿತಿಯನ್ನು ಅವರು ಇಟ್ಟುಕೊಂಡಿದ್ದಾರೆ. ದರ್ಶನ್ ಪ್ರಾಣಿ ಪ್ರಿಯರು. ಈ ಕಾರಣಕ್ಕೆ ಅರ್ಜುನ ಆನೆ ಮೇಲೆ ಅವರಿಗೆ ವಿಶೇಷ ಪ್ರೀತಿ ಇದೆ. ಅರ್ಜುನ ಆನೆ ಜೊತೆ ಅವರು ಫೋಟೋ ಕೂಡ ತೆಗೆಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+