ರಾಜೀನಾಮೆ ನೀಡಿದ 3 ಜೆಡಿಎಸ್ ಶಾಸಕರಿಗೂ ವಿಪ್ ಜಾರಿ

Recommended Video

      ಜೆಡಿಎಸ್ ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ ಎಚ್ ಡಿ ಕುಮಾರಸ್ವಾಮಿ | Oneindia Kannada

      ಬೆಂಗಳೂರು, ಜುಲೈ 12: ಶಾಸಕರ ಸರಣಿ ರಾಜೀನಾಮೆ, ಸಚಿವ ಸಂಪುಟದ ಸದಸ್ಯರ ರಾಜೀನಾಮೆ ಬಳಿಕ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಸರ್ಕಾರದ ಅಳಿವು, ಉಳಿವು ಜುಲೈ 12ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ನಿರ್ಧಾರವಾಗಲಿದೆ.

      ಈ ನಡುವೆ ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಎಲ್ಲಾ ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.

      ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್. ವಿಶ್ವನಾಥ್, ಕೆ. ಗೋಪಾಲಯ್ಯ, ನಾರಾಯಣಗೌಡ ಅವರು ಸೇರಿದ 37 ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ವಿಪ್ ಜಾರಿ ಮಾಡಿ, ಸದನಕ್ಕೆ ಗೈರು ಹಾಜರಾದರೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

      ಜೆಡಿಎಸ್ ನ ಮೂವರು ಶಾಸಕರು ಗುರುವಾರದಂದು ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ತೆರಳಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ಹಿಂತಿರುಗಿದ್ದಾರೆ.

      ವಿಶ್ವಾಸಮತ ಯಾಚನೆ ಮಾಡುವರೆ ಕುಮಾರಸ್ವಾಮಿ

      ವಿಶ್ವಾಸಮತ ಯಾಚನೆ ಮಾಡುವರೆ ಕುಮಾರಸ್ವಾಮಿ

      ರಾಜೀನಾಮೆ ನಾಟಕದ ನಡುವೆ ವಿಧಾನಸಭೆ ಅಧಿವೇಶನ ಜುಲೈ 12ರಂದು ಆರಂಭವಾಗಲಿದ್ದು, ಅತೃಪ್ತರ ಶಾಸಕರ ರಾಜೀನಾಮೆ ನಂತರ ಕೈ ತೆನೆ ಸರ್ಕಾರವು ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ, ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಬಹುದು. ಅಥವಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಅವರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ತನಕ ಕಾದು, ನಂತರ ಬಹುಮತ ಸಾಬೀತುಪಡಿಸಲು ಮುಂದಾಗಬಹುದು. ಇದರ ಜೊತೆಗೆ ಬಜೆಟ್ ನಂತರದ ಅಧಿವೇಶನವಾಗಿದ್ದು, ಹಣಕಾಸು ವಿಧೇಯಕಕ್ಕೆ ಸಮ್ಮತಿ ಪಡೆಯಬೇಕಿದೆ.

      ಎರಡು ಪಕ್ಷಗಳ ರೆಬೆಲ್ ಶಾಸಕರಿಗೆ ವಿಪ್ ಜಾರಿ

      ಎರಡು ಪಕ್ಷಗಳ ರೆಬೆಲ್ ಶಾಸಕರಿಗೆ ವಿಪ್ ಜಾರಿ

      ಸಲ್ಲಿಕೆಯಾದ ರಾಜೀನಾಮೆಗಳು ಕ್ರಮಬದ್ಧವಾಗಿವೆ, ಅದನ್ನು ಸ್ವೀಕರಿಸಿದ್ದೇನೆ. ಅಂಗೀಕರಿಸಿಲ್ಲ. ರಾಜೀನಾಮೆಗೆ ನೀಡಿದ ಕಾರಣ ಮನವರಿಕೆ ಆಗಬೇಕು. ಅದಕ್ಕೂ ಮುನ್ನ ವಿಚಾರಣೆ ನಡೆಸಬೇಕಾಗುತ್ತದೆ. ಇಷ್ಟೇ ದಿನದಲ್ಲಿ ಪ್ರಕ್ರಿಯೆ ಮುಗಿಯುತ್ತದೆ ಎಂದು ಹೇಳಲಾಗದು.

      ಸರ್ಕಾರಿ ಮುಖ್ಯ ಸಚೇತಕ, ಶಾಸಕ ಗಣೇಶ್ ಹುಕ್ಕೇರಿ ಅವರು ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 18 ಶಾಸಕರು ಸೇರಿದಂತೆ ಎಲ್ಲಾ ಶಾಸಕರಿಗೂ ವಿಪ್ ಅನ್ವಯವಾಗಲಿದೆ.
      ವಿಪ್ ನಲ್ಲಿ ಏನು ಹೇಳಲಾಗಿದೆ

      ವಿಪ್ ನಲ್ಲಿ ಏನು ಹೇಳಲಾಗಿದೆ

      15ನೇ ಕರ್ನಾಟಕ ವಿಧಾನಸಭೆಯ 4ನೇ ಅಧಿವೇಶನ ದಿನಾಂಕ 12/7/2019 ರಿಂದ 26/7/2019ರ ತನಕ ನಡೆಯಲಿದೆ. ವಿತ್ತೀಯ ವಿಧೇಯಕಗಳು, ವಿಧೇಯಕಗಳು, ಶಾಸನಗಳು ಹಾಗೂ ಇತರೆ ಕಾರ್ಯ ಕಲಾಪಗಳಲ್ಲಿ ಭಾಗವಹಿಸಿ ಸರ್ಕಾರದ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ಈ ಮೂಲಕ ವಿಪ್ ನೀಡಲಾಗಿದೆ.

      ಒಂದು ವೇಳೆ ಸದನಕ್ಕೆ ತಾವು ಹಾಜರಾಗದಿದ್ದಲ್ಲಿ ಅಥವ ಸರ್ಕಾರದ ಪರವಾಗಿ ಮತ ಚಲಾಯಿಸದೇ ಇದ್ದಲ್ಲಿ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ಸಂವಿಧಾನದ ಅನುಚ್ಛೇಧ -10 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ತಮಗೆ ತಿಳಿಸಲಾಗಿದೆ.

      ಅಧಿವೇಶನಕ್ಕೆ ರೆಬೆಲ್ ಶಾಸಕರು ಚಕ್ಕರ್

      ಅಧಿವೇಶನಕ್ಕೆ ರೆಬೆಲ್ ಶಾಸಕರು ಚಕ್ಕರ್

      ವಿಪ್ ಜಾರಿಗೊಳಿಸಿದ ವೇಳೆ ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಮತ ಹಾಕುವಂತಿಲ್ಲ. ಸದನಕ್ಕೆ ಗೈರು ಹಾಜರಾಗುವಂತಿಲ್ಲ. ಆದ್ದರಿಂದ, ರಾಜೀನಾಮೆ ನೀಡಿರುವ ಶಾಸಕರು ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಸರ್ಕಾರ ಉರುಳಿದರೂ ಶಾಸಕರಿಗೆ ತಕ್ಕ ಪಾಠ ಕಲಿಸಲು ಉಭಯ ಪಕ್ಷಗಳು ಮುಂದಾಗಿವೆ.
      ಜುಲೈ 11ರಂದು 16 ಮಂದಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ:
      ಒಟ್ಟು ಸದಸ್ಯ ಬಲ : 224 ಕಾಂಗ್ರೆಸ್ + ಜೆಡಿಎಸ್ : 118 ಮ್ಯಾಜಿಕ್ ನಂಬರ್ : 113 ಬಿಜೆಪಿ : 105 ಬಿಎಸ್ ಪಿ: 1 (ಎನ್ ಮಹೇಶ್) ಕಾಂಗ್ರೆಸ್ : 79 ಜೆಡಿಎಸ್ : 37 ಪಕ್ಷೇತರ : 2 (ಎಚ್ ನಾಗೇಶ್, ಶಂಕರ್)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+