Karnataka elections 2023: ಕ್ಷೇತ್ರದ ಮತದಾರರಿಗೆ ಡಬಲ್ ಬೆಡ್‌ ರೂಂ ಮನೆ: ಜನಾರ್ದನ ರೆಡ್ಡಿಯಿಂದ ಭರ್ಜರಿ ಆಫರ್

2023 ವಿಧಾನಸಭಾ ಚುನಾವಣಗೆ ಹಂತ ಹಂತವಾಗಿ ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತಿರುವ ಜನಾರ್ದನ ರೆಡ್ಡಿ ಈ ತಿಂಗಳ ಕೊನೆಯಲ್ಲಿ 30 ಅಭ್ಯರ್ಥಿಗಳ ಘೋಷಣೆ ಮಾಡಲಿದ್ದಾರೆ.

ಕೊಪ್ಪಳ, ಮಾರ್ಚ್‌ 21: 2023 ರ ರಾಜ್ಯ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಚುನಾವಣೆ ಹೊತ್ತಲ್ಲಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಹಲವು ರೀತಿಯ ಆಮಿಷಗಳನ್ನು ಒಡ್ಡುತ್ತಿವೆ.

ಕಾಂಗ್ರೆಸ್‌ ಸಾಲು ಸಾಲು ಗ್ಯಾರಂಟಿ ಘೋಷಣೆಯನ್ನ ಮಾಡುತ್ತಿದ್ರೆ. ಇತ್ತ ಬಿಜೆಪಿ ಅಭಿವೃದ್ದಿ ಮಂತ್ರದ ಜಪ ಮಾಡುತ್ತಿದೆ. ಇನ್ನೂ ಪ್ರಾದೇಶಿಕ ಪಕ್ಷ ಜೆಡಿಎಸ್‌ ಕೂಡ ಅಧಿಕಾರಕ್ಕೆ ಬಂದ್ರೆ ಪಂಚರತ್ನ ಯೋಜನೆಯ ಜೊತೆಗೆ ಹಲವು ಕಾರ್ಯಕ್ರಮಗಳನ್ನ ನೀಡುವ ಭರವಸೆಯನ್ನ ನೀಡಿ ಮತದಾರರ ಮನ ಗೆಲ್ಲಲ್ಲು ಸರ್ಕಸ್‌ ನಡೆಸುತ್ತಿವೆ.

Janardhana Reddy Has Announced That He Will Give A Double Bedroom House To The Gangavathi Voters

ಇದೀಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರೂ ಕೂಡ ಕೊಪ್ಪಳ ಜಿಲ್ಲೆಯ ಗಂಗಾವತಿ ಮತದಾರರಿಗೆ ಭರ್ಜರಿ ಆಫರ್ ನೀಡಿದ್ದಾರೆ. ತಾವು ಗೆದ್ದು ಶಾಸಕರಾದರೆ ಕ್ಷೇತ್ರದ ಮತದಾರರಿಗೆ ಡಬಲ್ ಬೆಡ್‌ ರೂಂ ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಸ್ಲಂಗಳಲ್ಲಿರುವ ಜನರಿಗೆ ಪಟ್ಟಗಳನ್ನು ಕೊಡಿಸುತ್ತೇನೆ ಅಂತ ಭರವಸೆ ನೀಡಿದ್ದಾರೆ.

ಈಗಾಗಲೇ ಹೊಸ ಪಕ್ಷವನ್ನ ಸ್ಥಾಪಿಸಿ, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧೆಡೆ ಅಬ್ಬರದ ಪ್ರಚಾರವನ್ನ ನಡೆಸುತ್ತಿರುವ ಜನಾರ್ದನ ರೆಡ್ಡಿ ಹಲವಾರು ಭರವಸೆಗಳ ನೀಡಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಮನೆ ಇಲ್ಲದೆ ಇರುವವರ ಅಕ್ಕ ತಂಗಿಯರಿಗೆ ಮನೆ ನಿರ್ಮಿಸುವುದಾಗಿ ಭರವಸೆ ನೀಡಿದರು. ಗಂಗಾವತಿಯನ್ನು ಮಹಾನಗರ ಪಾಲಿಕೆ ಮಾದರಿಯಲ್ಲಿ ಅಭಿವೃದ್ದಿ ಪಡೆಸುವುದಾಗಿ. ಗಂಗಾವತಿಯಲ್ಲಿರುವ ಬೀದಿ ವ್ಯಾಪಾರಿಗಳಿಗೆ ಸುಸಜ್ಜಿತ ಸ್ಟಾಲ್ ಗಳ ನಿರ್ಮಾಣ ಮಾಡಲಾಗುವುದು.

Janardhana Reddy Has Announced That He Will Give A Double Bedroom House To The Gangavathi Voters

ವಿಶ್ವವಿಖ್ಯಾತ ಅಂಜನಾದ್ರಿಯಲ್ಲಿ ವಿಶ್ವದಲ್ಲಿಯೇ ಅತಿ ಎತ್ತರ, ವಿಶಿಷ್ಠ ಆಂಜನೇಯನ ಮೂರ್ತಿ ನಿರ್ಮಾಣ ಮಾಡಲಾಗುವುದು. ಸುಮಾರು 5000 ಕೋಟಿ ರೂಪಾಯಿಯಲ್ಲಿ ಅಂಜನಾದ್ರಿ ಅಭಿವೃದ್ದಿ ಪಡೆಸುವುದಾಗಿ ಹೇಳಿದ್ದಾರೆ,

ಇತ್ತೀಚಿಗೆ ಗಂಗಾವತಿಗೆ ಆಗಮಿಸಿದ್ದ ಆಸ್ಸಾಂ ಸಿಎಂ ಹೇಮಂತ ಬಿಸ್ವಾಸ ಶರ್ಮರು ಬಿಜೆಪಿ ಅಧಿಕಾರದಲ್ಲಿ ಮದರಸಾಗಳನ್ನು ಬಂದ್ ಮಾಡೋದು ಆಗಿ ಹೇಳಿದ್ದಾರೆ. ಇದು ನನ್ನ ಜೀವಮಾನ ಇರುವವರೆಗೂ ಅದು ಸಾಧ್ಯವಿಲ್ಲ.ಇಲ್ಲಿ ಹಿಂದು- ಮುಸ್ಲಿಂರ ಭಾಯಿ,ಭಾಯಿಯಾಗಿದ್ದಾರೆ. ಕರ್ನಾಟಕ ಸರ್ವಜನಾಂಗದ ಶಾಂತಿ ತೋಟವಿದು ಎಂದು ಹೇಳಿದರು.

ನಾನು ಹೆಲಿಕ್ಯಾಪ್ಟರ್ ತೆಗೆದುಕೊಂಡಿರುವುದು ಈಗ ಚರ್ಚೆಯಾಗುತ್ತದೆ. ಆದರೆ ನಾನು ಹೆಲಿಕ್ಯಾಪ್ಟರ್ ತೆಗೆದುಕೊಂಡಿದ್ದು ಸಮಯ ಉಳಿಕೆಗಾಗಿ. ನಾನು ಹೆಲಿಕ್ಯಾಪ್ಟರ್ ಖರೀದಿಸಿದಾಗ ಆಕಾಶದಲ್ಲಿ ತಿರುಗಾಡುತ್ತಾನೆ ಎಂಬ ಆರೋಪ. ನಾನು ಹೆಲಿಕ್ಯಾಪ್ಟರ್ ಖರೀದಿಸಿದ್ದ ಬಳ್ಳಾರಿಯಿಂದ ಬೆಂಗಳೂರು ಬೇಗ ಹೋಗಿ ಬರುವ ಉದ್ದೇಶ. ಮುಂದೆಯೂ ಗಂಗಾವತಿಯಿಂದ ಬೆಂಗಳೂರಿಗೆ ಹೋಗಲು ಹೆಲಿಕ್ಯಾಪ್ಟರ್ ಬಳಸುತ್ತೇನೆ ಎಂದರು.

ನಾನು ಗಂಗಾವತಿಯಿಂದಲೇ ಸ್ಪರ್ಧಿಸುತ್ತೇನೆ.‌ ನ್ಯಾಯಲಯದ ಪ್ರಕರಣ ಮುಗಿದ ನಂತರ ಬಳ್ಳಾರಿ ಹೋಗುತ್ತಾನೆ ಎಂಬ ಆರೋಪವಿದೆ.‌ ನಾನು ಗಂಗಾವತಿಯಿಂದಲೇ ಸ್ಪರ್ಧೆಸುತ್ತೇನೆ. ಅವಕಾಶ ನೀಡಿದರೆ ಬಳ್ಳಾರಿ ಗಂಗಾವತಿ ಮಧ್ಯೆ ಒಂದು ತಾಸು ಅವಧಿ ಪ್ರಯಾಣ. ನಾನು ಕೊಟ್ಟ ನಂತರ ಪ್ರಾಣ ಕೊಟ್ಟಾದರೂ ಈಡೇರಿಸುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಇಬ್ಬರು ಮಕ್ಕಳನ್ನ ದತ್ತು ಪಡೆದ ಜನಾರ್ದನ ರೆಡ್ಡಿ

ಇನ್ನೂ ಗಂಗಾವತಿಯಲ್ಲಿ ಭರ್ಜರಿ ಪ್ರಚಾರ ನಡುವೆ ಜನಾರ್ದನ ರೆಡ್ಡಿ ಅವರು ತಂದೆ-ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ಮಾನವೀಯತೆ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ವೀರುಪಾಪುರ ತಾಂಡದ ಮಕ್ಕಳಾದ ಜ್ಯೂತಿ ಸ್ವರೂಪ್, ವೇಣು ಎಂಬವರನ್ನು ಅಧಿಕೃತವಾಗಿ ದತ್ತು ಪಡೆದುಕೊಂಡಿದ್ದಾರೆ.

ಈ ದತ್ತು ಪಡೆದ ಇಬ್ಬರು ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿ ಅವರು ವಹಿಸಿಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿ ದತ್ತು ಸ್ವೀಕಾರ ಮಾಡಿದ್ದಾರೆ.

ಇನ್ನೂ ಚುನಾವಣೆ ಹತ್ತಿರವಾಗುತ್ತಿದ್ದಂರೆ ಹಂತ ಹಂತವಾಗಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಇದೇ ತಿಂಗಳ 30ರ ಒಳಗಾಗಿ 30ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+