Karnataka Rain: ಈ ದಿನದಿಂದ ರಾಜ್ಯದಲ್ಲಿ ಉತ್ತಮ ಮಳೆ: ಐಎಂಡಿ ಮುನ್ಸೂಚನೆ
ಮುಂಗಾರಿನಲ್ಲಿ ರಾಜ್ಯದಲ್ಲಿ ಇದುವರೆಗೆ ಶೇ.14 ರಷ್ಟು ಮಳೆ ಕೊರತೆಯಾಗಿದ್ದು, ಬರದ ಭೀತಿಯಲ್ಲಿದ್ದಾರೆ. ತಾಪಮಾನ ಕೂಡ ಹೆಚ್ಚಾಗಿದ್ದು, ಕುಡಿಯುವ ನೀರಿಗೂ ತತ್ವಾರ ಎದುರಾಗುವ ಭೀತಿ ಎದುರಾಗಿದೆ. ಆದರೆ ಭಾರತೀಯ ಹವಾಮಾನ ಇಲಾಖೆ ಸಮಾಧಾನಕಾರವಾಗುವ ಸುದ್ದಿ ನೀಡಿದೆ.
ಸೆಪ್ಟಂಬರ್ 1ರಿಂದ 7ರವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಮುನ್ಸೂಚನೆ ನೀಡಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಒಂದು ವಾರ ಸತತ ಮಳೆಯಾದರೆ ರಾಜ್ಯಕ್ಕೆ ಸ್ವಲ್ಪ ಮಳೆ ಕೊರತೆ ಕಡಿಮೆಯಾಗಲಿದೆ.

ಮಾನ್ಸೂನ್ ಮಾರುತಗಳು ಹಿಮಾಲಯದ ತಪ್ಪಲಿಗೆ ಸ್ಥಳಾಂತರಗೊಂಡಿದೆ. ಇದು ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಕಡಿಮೆಯಾಗಲು ಕಾರಣವಾಗಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಆಂತರಿಕ ಕರ್ನಾಟಕ (SIK) ಕ್ರಮವಾಗಿ 11% ಮತ್ತು 23% ನಷ್ಟು ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾಡಿಕೆಗಿಂತ ಕಡಿಮೆ ಮಳೆ
ಜೂನ್‌ನಿಂದ ಇಲ್ಲಿಯವರೆಗೆ 57.3 ಸೆಂ.ಮೀ ವಾಡಿಕೆ ಮಳೆಯಾಗಬೇಕಿತ್ತು ಆದರೆ ಕರ್ನಾಟಕದಲ್ಲಿ 49.6 ಸೆಂ.ಮೀ. ಮಳೆಯಾಗಿದ್ದು, 14% ನಷ್ಟು ಮಳೆ ಕೊರತೆಗೆ ಕಾರಣವಾಯಿತು ಎಂದು ಬೆಂಗಳೂರಿನ ಐಎಂಡಿ ಉಸ್ತುವಾರಿ ನಿರ್ದೇಶಕ ಎ ಪ್ರಸಾದ್ ಹೇಳಿದರು. ಸೆಪ್ಟೆಂಬರ್ 1 ರಿಂದ 7 ರವರೆಗೆ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿರುವುದರಿಂದ, ರಾಜ್ಯದಲ್ಲಿ 5 ಎಂಎಂ ನಿಂದ 10 ಮಿಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಐಎಂಡಿ ಪ್ರಕಾರ, ಉತ್ತರ ಒಳನಾಡಿನಲ್ಲಿ ಮಳೆ ಸಾಮಾನ್ಯವಾಗಿತ್ತು. ಈ ಪ್ರದೇಶದಲ್ಲಿ ಸಾಮಾನ್ಯವಾಗಿ 28.2 ಸೆಂ ಮೀ ಮಳೆಯಾಗಬೇಕಿದ್ದು, 28.2 ಸೆಂಮೀ ಮಳೆಯಾಗಿದೆ. ಕರಾವಳಿ ಕರ್ನಾಟಕದಲ್ಲಿ ವಾಡಿಕೆ ಮಳೆ 249ಸೆಂ.ಮೀ.ಗೆ ಹೋಲಿಸಿದರೆ 216.6ಸೆಂ.ಮೀ ಮಳೆಯಾಗಿದೆ. ಅದೇ ರೀತಿ, ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ವಾಡಿಕೆ ಮಳೆ 44.8ಸೆಂ.ಮೀ.ಗೆ ಹೋಲಿಸಿದರೆ 34.6ಸೆಂ.ಮೀ. ಮಳೆಯಾಗಿದ್ದು. ಹಲವು ಜಿಲ್ಲೆಗಳು 46% ನಷ್ಟು ಮಳೆಯ ಕೊರತೆಯನ್ನು ದಾಖಲಿಸಿವೆ.
ತಮಿಳುನಾಡು ರಾಜ್ಯದ ಪರಿಸ್ಥಿತಿಯನ್ನು ಅರಿಯಲಿ
ಕರ್ನಾಟಕದ ಬರ ಪರಿಸ್ಥಿತಿಯನ್ನು ನೆರೆ ರಾಜ್ಯ ಅರ್ಥ ಮಾಡಿಕೊಳ್ಳಬೇಕು. ನೀರಿನ ಲಭ್ಯತೆ ಮತ್ತು ರಾಜ್ಯದ ಪ್ರಸ್ತುತ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ವಿಷಯವಿದ್ದರೂ ತಮಿಳುನಾಡು ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ ಎಂದು ಅವರು ಹೇಳಿದರು.
ಕುರುವಾಯಿ ಭತ್ತದ ಬೆಳೆ ಪ್ರದೇಶ ಹೆಚ್ಚಿಸಿ, ಹೆಚ್ಚು ನೀರು ಬಳಸುತ್ತಿರುವ ತಮಿಳುನಾಡು ವಿರುದ್ಧ ಪ್ರಾಧಿಕಾರ ನಡೆಸಿದ ಸಭೆಯಲ್ಲಿ ವಿಷಯ ಪ್ರಸ್ತಾಪಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
''ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯ ಸರಕಾರ ಕ್ಷಮಿಸಲಾಗದ ತಪ್ಪನ್ನು ಮಾಡಿದೆ. ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಾಸ್ತವವನ್ನು ಮನವರಿಕೆ ಮಾಡಿಕೊಡಬೇಕು ಮತ್ತು ತಮಿಳುನಾಡಿಗೆ ನೀರು ಬಿಡುವುದನ್ನು ತಕ್ಷಣವೇ ನಿಲ್ಲಿಸಬೇಕು'' ಎಂದು ಬೊಮ್ಮಾಯಿ ಒತ್ತಾಯಿಸಿದ್ದಾರೆ.











Click it and Unblock the Notifications