Breaking: ಕರ್ನಾಟಕ ಕರಾವಳಿ, ಉತ್ತರ ಒಳನಾಡಿನಲ್ಲಿ ತಗ್ಗಿದ ಮಳೆ: ದಕ್ಷಿಣ ಒಳನಾಡಿಗೆ 'ಯೆಲ್ಲೋ ಅಲರ್ಟ್'

ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಗ್ಗಿರುವ ಮಳೆಯು ದಕ್ಷಿಣ ಒಳನಾಡಿನಾಡಿನ ಜಿಲ್ಲೆಗಳಾದ್ಯಂತ ವಿಸ್ತರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಹವಾಮಾದಲ್ಲಿ ನಿರಂತರವಾಗಿ ಉಂಟಾಗುತ್ತಿರವ ವೈಪರಿತ್ಯಗಳ ಪರಿಣಾಮವಾಗಿ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಮಳೆ ವ್ಯಾಪಿಸುತ್ತಿದೆ. ದಿನ ಬಿಟ್ಟು ದಿನ ಮಳೆ ಅಬ್ಬರ ಕಂಡು ಬರುತ್ತಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ತುಂತುರು ಇಲ್ಲವೇ ಹಗುರ ಮಳೆ ಆಗಬಹುದು. ಈ ಭಾಗಕ್ಕೆ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಕೇಂದ್ರದ ತಜ್ಞರು ಹೇಳಿದ್ದಾರೆ.

IMD rain alerts Rain increase in South interior Karnataka

ಇನ್ನೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸೋಮವಾರ ಮಾತ್ರ ಒಂದು 06 ಜಿಲ್ಲೆಗಳಲ್ಲಿ ಮಳೆ ಧಾಕಾರಾರವಾಗಿ ಸುರಿಯಲಿದೆ. ಹೀಗಾಗಿ ಅಂದು ಮಾತ್ರ ಬಾಗಲಕೊಟೆ, ಕಲಬುರಗಿ,ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ದಕ್ಷಿಣ ಒಳನಾಡಿಗೆ ಭಾರಿ ಮಳೆ ಎಚ್ಚರಿಕೆ
ಮಲೆನಾಡಿನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡಿನ ಭಾಗದಲ್ಲಿ ಮುಂದಿನ ಐದು (ಅ.21ರವರೆಗೆ) ದಿನಗಳ ಪೈಕಿ ಮೊದಲ ಎರಡು ದಿನ ಹಾಗೂ ಕೊನೆಯ ದಿನ ಗುಡುಗು ಮಿಂಚು ಸಹಿತವಾಗಿ ಜೋರು ಮಳೆ ಸುರಿಯಲಿದೆ.

ಸೋಮವಾರ ಮತ್ತು ಮಂಗಳವಾರ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಆಗಾಗ ಭಾರಿ ಮಳೆಯ ದರ್ಶನವಾಗಲಿದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅನೇಕ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಬೀಳಲಿದೆ. ಈ ಕಾರಣಕ್ಕೆ ಈ ಎರಡು ದಿನ ಮತ್ತು ಕೊನೆಯ ದಿನ ಅ.21ರಂದು ಕೆಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇನ್ನೂ ಕಳೆದ 24ಗಂಟೆಗಳಲ್ಲಿ ಕರ್ನಾಟಕದ ಮೈಸೂರು, ಮಂಡ್ಯ, ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಸಾಲಿಗ್ರಾಮದಲ್ಲಿ ಅಧಿಕ 9ಸೆಂ.ಮೀ ಮಳೆ ದಾಖಲಾಗಿದ್ದು, ಭಾಗಮಂಡಲದಲ್ಲಿ 8ಸೆಂ.ಮೀ, ಹೆಗ್ಗಡದೇನಕೋಟೆ , ಹಾಸನ, ಮಂಡ್ಯ, ಕೆಆರ್ ಪೇಟೆಯಲ್ಲಿ ತಲಾ 7ಸೆಂ.ಮೀ. ಮಳೆ ಆಗಿದೆ. ಉಳಿದ ಜಿಲ್ಲೆಗಳ ಹಲವೆಡೆ ಸಾಧಾರಣದವಾಗಿ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+