ಅಡ್ಜೆಸ್‌ಮೆಂಟ್‌ ಪಾಲಿಟಿಕ್ಸ್‌ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತನಾಗುತ್ತೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜುಲೈ 13: ತಮ್ಮ ರಾಜಕೀಯ ಜೀವನದುದ್ದಕ್ಕೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಒಂದು ವೇಳೆ ಅಡ್ಜಸ್ಟ್‌ಮೆಂಟ್ ರಾಜಕಾರಣ' ಮಾಡಿರುವುದನ್ನು ಯಾರಾದರೂ ಸಾಬೀತುಪಡಿಸಿದರೆ ತಕ್ಷಣ ರಾಜಕೀಯ ನಿವೃತ್ತಿಯಾಗಿಬಿಡುತ್ತೇನೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಿಮ್ಮನ್ನು ಆಯ್ಕೆ ಮಾಡುವುದಿಲ್ಲ ಎಂಬ ಮಾಹಿತಿ ನನಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದಾಗ ಸದನದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆಯಿತು.

I will retire from politics if adjustment politics proves: CM Siddaramaiah

ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಿದ್ದಾಗ ಮನೆಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಕುರಿತು ಸ್ಪಷ್ಟನೆ ನೀಡಲು ಮುಖ್ಯಮಂತ್ರಿ ಮಧ್ಯಪ್ರವೇಶಿಸುತ್ತಿರುವಾಗ ಈ ಎರಡೂ ವಿಷಯಗಳು ಪ್ರಸ್ತಾಪವಾದವು.

ಆಗ ಸಿದ್ದರಾಮಯ್ಯ ಅವರು "ಮಿಸ್ಟರ್ ಯತ್ನಾಳ್, ನೀವು ಉತ್ತಮ ಸಂಸದೀಯ ಪಟು ಎಂದು ನಾನು ಭಾವಿಸಿದ್ದೆ, ಆದರೆ ನೀವು ಪದೇ ಪದೇ ಮಧ್ಯಪ್ರವೇಶಿಸುವುದರಿಂದ ನೀವು ಉತ್ತಮ ಸಂಸದೀಯ ಪಟುವಾಗುವುದಿಲ್ಲ. ವಿರೋಧ ಪಕ್ಷದ ನಾಯಕರಾಗುವ ಆಕಾಂಕ್ಷಿಗಳಲ್ಲಿ ನೀವೂ ಒಬ್ಬರು ಎಂದು ನನಗೆ ತಿಳಿದಿದೆ. ಪದೇ ಪದೇ ಆಕ್ಷೇಪ ಎತ್ತುವ ಮತ್ತು ಮಧ್ಯಸ್ಥಿಕೆ ವಹಿಸಿದರೆ ನಿಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಿಮ್ಮನ್ನು ವಿಪಕ್ಷ ನಾಯಕನನ್ನಾಗಿ ಮಾಡಲ್ಲ, ದಯವಿಟ್ಟು ಕುಳಿತುಕೊಳ್ಳಿ. ಅವರು (ಬಿಜೆಪಿ ಹೈಕಮಾಂಡ್‌) ಅವರು ಯಾರನ್ನು ಬೇಕಾದರೂ ಆಯ್ಕೆ ಮಾಡುತ್ತಾರೆ. ನೀವು ಪದೇ ಪದೇ ಮಧ್ಯಪ್ರವೇಶಿಸುತ್ತೀರಿ ಎಂಬ ಕಾರಣಕ್ಕೆ ನಿಮ್ಮನ್ನು ವಿಪಕ್ಷ ನಾಯಕನನ್ನಾಗಿ ಮಾಡುತ್ತಾರೆ ಎಂಬ ತಪ್ಪು ಕಲ್ಪನೆಗೆ ಒಳಗಾಗಬೇಡಿ. ನನಗಿರುವ ಮಾಹಿತಿಯ ಪ್ರಕಾರ ಅವರು ನಿಮ್ಮನ್ನು ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

I will retire from politics if adjustment politics proves: CM Siddaramaiah

ವಿಧಾನಮಂಡಲದ ಕಲಾಪ ಆರಂಭವಾಗಿ ಎರಡನೇ ವಾರವಾಗಿದ್ದರೂ, ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ನೇಮಿಸಿಲ್ಲ. 2018ರ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಪದೇ ಪದೇ ಭವಿಷ್ಯ ನುಡಿದಿದ್ದರು. ಆದರೆ ಚುನಾವಣೆಯ ನಂತರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಗೆ ಏರಿದರು ಎಂದು ಯತ್ನಾಳ್ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಮುಂದುವರಿದು ನಾನೀಗ ವಿರೋಧ ಪಕ್ಷದ ನಾಯಕನಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದೀರಾ. ಅಂದರೆ ನಾನು ನೂರಕ್ಕೆ ನೂರು ಆಗುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಆಗ ಯತ್ನಾಳ್ ವಿಪಕ್ಷ ನಾಯಕನಾಗುವುದಿಲ್ಲ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ ಬಿಜೆಪಿಯ ಹಿರಿಯ ಶಾಸಕರಾದ ಆರ್.ಅಶೋಕ ಮತ್ತು ಸಿ.ಎನ್.ಅಶ್ವಥ್ ನಾರಾಯಣ್ ಅವರಂತಹ ಇತರ ಆಕಾಂಕ್ಷಿಗಳು ಇದ್ದಾರೆ ಎಂದು ಸೂಚಿಸಿದರು.

ನಂತರ ಯತ್ನಾಳ್ ಅವರು, ಪಕ್ಷದೊಳಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಬೇಡಿ ಎಂದರು. ಬಿಜೆಪಿ ನಾಯಕರನ್ನು ಪ್ರಚೋದಿಸಲು ಮತ್ತು ಅವರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುವುದರಿಂದ ಅದು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಹೇಳಿದರು. ನಾನು ವಿಪಕ್ಷ ನಾಯಕನಾಗುವುದಿಲ್ಲ ಆಗುವುದಿಲ್ಲ ಎಂಬ ಮಾಹಿತಿ ನಿಮಗೆ (ಸಿದ್ದರಾಮಯ್ಯ) ಇದೆ ಎಂದರೆ ನೀವು ಯಾರೊಂದಿಗಾದರೂ (ಬಿಜೆಪಿಯಲ್ಲಿ) ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂದರ್ಥ ಎಂದರು.

ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ನಾನು ಪ್ರತಿಪಕ್ಷದಲ್ಲಿದ್ದಾಗ ಯಾವುದೇ ಮುಖ್ಯಮಂತ್ರಿ ಅಥವಾ ಸಚಿವರ ಮನೆಗೆ ಹೋಗಿ ಮಾತನಾಡಿದ್ದೀರಾ ಎಂದು ನೀವು ಯಾರನ್ನು ಬೇಕಾದರೂ ಕೇಳಬಹುದು ಎಂದರು.

"ನನಗೆ ಅಂತಹ ಅಭ್ಯಾಸವಿಲ್ಲ, ನನ್ನ ರಾಜಕೀಯ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅಭ್ಯಾಸವಿಲ್ಲ. ನಾನು 1983 ರಿಂದ ಈ ವಿಧಾನಸಭೆಯಲ್ಲಿ ಇದ್ದೇನೆ, ಯಡಿಯೂರಪ್ಪ (ಬಿಜೆಪಿ ಹಿರಿಯ) ಮತ್ತು ನಾನು ಒಟ್ಟಿಗೆ ಈ ವಿಧಾನಸಭೆಗೆ ಪ್ರವೇಶಿಸಿದ್ದೇವೆ. 1983 ರಿಂದ ಇಂದಿನವರೆಗೂ ನಾನು ಎದುರಾಳಿ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದು ಸಾಬೀತಾದರೆ ತಕ್ಷಣ ರಾಜಕೀಯ ನಿವೃತ್ತಿ ಹೊಂದುತ್ತೇನೆ, ನನ್ನ ಜೀವನದಲ್ಲಿ ಇವತ್ತಿನವರೆಗೂ ಅಂತಹದರಲ್ಲಿ ತೊಡಗಿಲ್ಲ'' ಎಂದು ಹೇಳಿದರು.

ವಿಧಾನಸಭೆ ಚುನಾವಣೆಯ ಸೋಲಿನ ನಂತರ ಹಲವು ಬಿಜೆಪಿ ನಾಯಕರು ಇತ್ತೀಚೆಗೆ ತಮ್ಮ ಸಹೋದ್ಯೋಗಿಗಳನ್ನು ಟೀಕಿಸಿ, ಕಾಂಗ್ರೆಸ್ ನಾಯಕರ ಒಂದು ವಿಭಾಗದ ಹೊಂದಾಣಿಕೆ ರಾಜಕಾರಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಯಿತು ಎಂಬ ಹೇಳಿಕೆಗಳೊಂದಿಗೆ ರಾಜಕೀಯ ಕಿಡಿ ಹೊತ್ತಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+