HD Kumaraswamy: ಗ್ಯಾರಂಟಿ ಕೊಡೋದಾದ್ರೆ ನಾನು 10,000 ರೂ. ಕೊಡುತ್ತೇನೆ: ಹೆಚ್‌ ಡಿ ಕುಮಾರಸ್ವಾಮಿ

ಮೈಸೂರು, ಫೆಬ್ರವರಿ 25: ನನಗೆ ಒಮ್ಮೆ 20 ತಿಂಗಳು, ಇನ್ನೊಮ್ಮೆ 14 ತಿಂಗಳು ಜನಪರ ಆಡಳಿತ ನಡೆಸಿದ ಬಗ್ಗೆ ತೃಪ್ತಿ ಇದೆ. ನೀವು ಗ್ಯಾರಂಟಿ ಎಂದು ಮಾಡಿದ್ದೀರಿ. ನಿಮ್ಮ ಮನೆ ಹಣದಿಂದ ಯೋಜನೆ ಮಾಡಿದ್ದೀರಾ? ಗ್ಯಾರೆಂಟಿ‌ ಯೋಜನೆಗೆ ಯಾರಪ್ಪನ‌ ದುಡ್ಡು ಬಳಕೆ ಮಾಡುತ್ತಿದ್ದೀರಿ? ಮೆಟ್ರೋ ದರ‌, ಬಸ್ ಪ್ರಯಾಣ ದರ, ಮದ್ಯದ ದರ, ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಏರಿಕೆ ಮಾಡಿ ಗ್ಯಾರಂಟಿ ಕೊಡಲಿಕ್ಕೆ ನೀವೇ ಬೇಕಾ? ಈ ರೀತಿ ಗ್ಯಾರಂಟಿ ಕೊಡುವುದಿದ್ದರೆ ನಾನು ತಿಂಗಳಿಗೆ ₹10,000 ಗ್ಯಾರಂಟಿ ಕೊಡುತ್ತೇನೆ ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುವ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್ ಡಿ ಕುಮಾರಸ್ವಾಮಿ ಅವರು, ನಮ್ಮ ಮನೆಗೆ ಬಂದು ಯಾರೂ ಜಾತಿಗಣತಿ ಮಾಡಿಲ್ಲ ಎಂದು ಚನ್ನಗಿರಿ ಕಾಂಗ್ರೆಸ್ ಎಂಎಲ್ ಎ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಹೇಳಿರುವ ಮಾತಿದು. ಧೈರ್ಯವಿದ್ದರೆ ಜಾತಿ ಗಣತಿ ವರದಿ ಬಿಡುಗಡೆ ಮಾಡಿ. ಆಮೇಲೆ ಏನು ನಡೆಯುತ್ತದೆ ಎನ್ನುವುದನ್ನು ನೋಡಿ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ಕೊಟ್ಟರು.

I Will Give Rs 10 000 If You Give Me A Guarantee Said HD Kumaraswamy

ಬಹಳ ದಿನಗಳಿಂದ ಜಾತಿ ಗಣತಿ ವರದಿ ಗುಮ್ಮ ಬಿಡಲಾಗುತ್ತಿದೆ. ವರದಿ ಕೈ ಸರ್ಕಾರದ ಕೈ ಸೇರಿದೆ. ಬಿಡುಗಡೆ ಮಾಡುವುದು ಬಿಟ್ಟು ಮಾಧ್ಯಮಗಳ ಮೂಲಕ ಬಿಡುಗಡೆ ಏಕೆ ಸೋರಿಕೆ ಮಾಡಲಾಗುತ್ತಿದೆ. ಜಾತಿಗಣತಿ ವರದಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದೀರಾ ಹೇಗೆ? ಎಂದು ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು. ಯಾವುದನ್ನು ಕಾಂಗ್ರೆಸ್ ನವರಿಂದ ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ಕರ್ನಾಟಕ ಲೋಕಸೇವಾ ಆಯೋಗವನ್ನು ಹಾಳು ಮಾಡಿದಿರಿ. ಕೇವಲ ಒಬ್ಬ ಹೆಣ್ಣು ಮಗಳಿಗಾಗಿ 370 ಮಕ್ಕಳ ಕುಟುಂಬಗಳನ್ನು ಬೀದಿಗೆ ತಂದಿ ನಿಲ್ಲಿಸಿದಿರಿ. ಕೆಪಿಎಸ್‌ಸಿ ಈವತ್ತು ಏನಾಗಿದೆ? ಬೇವಿನಮರ‌ ನೆಟ್ಟು‌ ಮಾವಿನ ಹಣ್ಣು ಕೇಳಿದರೆ ಸಿಗುತ್ತಾ? ಕೆಪಿಎಸ್‌ ಸಿ ಭ್ರಷ್ಟ ಕೂಪವಾಗಿದೆ ಎಂದು ಆರೋಪ ಮಾಡಿದರು.

ಮೈಸೂರಿನ ಉದಯಗಿರಿ ಗಲಭೆಯ ಗಲಭೆಕೋರರು ಯಾರೇ ಆಗಿದ್ದರೂ ಅವರನ್ನು ನಿರ್ದಯವಾಗಿ ಶಿಕ್ಷೆಗೆ ಗುರಿ ಮಾಡಬೇಕು. ಪೊಲೀಸ್ ವಾಹನಗಳ ಮೇಲೆ ಕಲ್ಲು ಹೊಡೆಯುತ್ತಾರೆ ಎಂದರೆ ನಮ್ಮ ರಾಜ್ಯದ ಶಾಂತಿ ಸುವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದನ್ನು ಗಮನಿಸಬಹುದು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಕರ್ನಾಟಕ ಕುವೆಂಪು ಅವರ ಸಂದೇಶದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಉಳಿಯಬೇಕು. ಬಿಜೆಪಿ ಸ್ನೇಹಿತರಿಗೆ ನಾನು ಮನವಿ ಮಾಡಿಕೊಳ್ತೀನಿ. ನಮ್ಮ ಸಮಾಜಕ್ಕೆ ರಕ್ಷಣೆ ನೀಡಬೇಕೆಂದು‌ ನೀವು ಹೋಗುತ್ತೀರಿ. ನಿಮ್ಮ ಒಳ್ಳೆಯ ಉದ್ದೇಶವನ್ನು ದುರುಪಯೋಗ ಮಾಡಿಕೊಂಡು ಅವರು‌ ಭದ್ರವಾಗುತ್ತಾ ಹೋಗುತ್ತಿದ್ದಾರೆ. ಎರಡೂ ಪಕ್ಷದ ನಾಯಕರಿಗೆ ನಾನು ಮನವಿ ಮಾಡಿಕೊಳ್ಳುವೆ. ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಿ. ಶಾಂತಿ, ನೆಮ್ಮದಿ ಹಾಳು ಮಾಡುವ ಇಂಥ ಗಲಭೆಕೋರ ಶಕ್ತಿಗಳನ್ನು ಮಟ್ಟ ಹಾಕಿ ಎಂದು ಸರ್ಕಾರವನ್ನು ಒತ್ತಾಯ ಮಾಡಿದರು.

ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದವರನ್ನ ಬಲಿ ಹಾಕಬೇಕು. ಎಷ್ಟು ದಿನ ಅಂತ ಇಂತಹವರನ್ನು ಸಹಿಸಿಕೊಳ್ತೀರಿ. ಯಾರನ್ನೋ ಓಲೈಸಲು ಸರ್ಕಾರ ಇರುವುದಲ್ಲ. ಎಲ್ಲರ ಸರ್ಕಾರ ಎಂಬುದನ್ನು ಕಾಂಗ್ರೆಸ್ ಮರೆಯಬಾರದು. ಕಾನೂನು‌ ಬಾಹಿರ ಚಟುವಟಿಕೆ ನಡೆಸುವವನು‌ ಯಾರೇ ಇರಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಮೂಟೆಗಟ್ಟಲೆ ಕಲ್ಲು ತಂದು ಹೊಡೆದವರನ್ನು ರಕ್ಷಣೆ ಮಾಡಬೇಕಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯರಾದ ಯದುವೀರ ಚಾಮರಾಜ ಒಡೆಯರ್, ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಾಜಿ ಮೇಯರ್ ರವಿ ಕುಮಾರ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಮಹೇಶ್ ಸೇರಿದಂತೆ ಅನೇಕ ಗಣ್ಯರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+