ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತಕ್ಕೆ ಕವಚವಾಗಿ I.N.D.I.A: BJP

ಬೆಂಗಳೂರು, ಜುಲೈ 18: ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಎಲ್ಲ ವಿಪಕ್ಷಗಳ ಒಕ್ಕೂಟಕ್ಕೆ I.N.D.I.A ಎಂಬ ಹೆಸರನ್ನು ನೀಡಿರುವ ಹಿನ್ನೆಲೆಯಲ್ಲಿ ಆ ಹೆಸರನ್ನು ಕರ್ನಾಟಕ ಬಿಜೆಪಿ ತಮ್ಮ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತವನ್ನು ಜನಮಾನಸದಿಂದ ಮರೆಮಾಚಲು I-N-D-I-A ಎಂಬ ಹೊಸ ಹೆಸರಿನ ಕವಚ ತೊಡಿಸಿದ್ದಾರೆ ಎಂದು ಟೀಕಿಸಿದೆ.

ಯು.ಪಿ.ಎ ಸರ್ಕಾರವು ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಅಭಿವೃದ್ಧಿ ಹೀನ, ಕೆಟ್ಟ ಆಡಳಿತ ಸೇರಿದಂತೆ ದೇಶ ವಿರೋಧಿ ಚಟುವಟಿಕೆಗಳಿಗೆ ಸುಭದ್ರ ತಾಣವಾಗಿತ್ತು. ಯು.ಪಿ.ಎ ಹೆಸರಿನಲ್ಲಿ ಈ ಹಿಂದೆ "ಕೈ" ಸುಟ್ಟುಕೊಂಡಿದ್ದ ಅವಕಾಶವಾದಿ ರಾಜಕಾರಣಿಗಳಿಗೆ, ಮತ್ತೊಮ್ಮೆ ಯು.ಪಿ.ಎ ಹೆಸರಿನೊಂದಿಗೆ ಮುಂದುವರೆದರೇ, ತಮ್ಮ ಕ್ಷುಲ್ಲಕ ಹಾಗೂ ಕುತಂತ್ರ ರಾಜಕಾರಣ ಅಂತ್ಯವಾಗುತ್ತದೆ ಎಂಬ ಭಯ ಸಹಜವಾಗಿಯೇ ಬಂದಿದೆ ಎಂದು ಟ್ವೀಟ್‌ ಮಾಡಿದೆ.

Alliance of Opposition Parties

ಈ ಹಿನ್ನೆಲೆಯಲ್ಲಿ "ಹಳೇ ಮದ್ಯವನ್ನು ಹೊಸ ಬಾಟಲಿಯಲ್ಲಿ ತುಂಬಿದಂತೆ" ತಮ್ಮ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತವನ್ನು ಜನಮಾನಸದಿಂದ ಮರೆಮಾಚಲು I-N-D-I-A ಎಂಬ ಹೊಸ ಹೆಸರಿನ ಕವಚ ತೊಡಿಸಿದ್ದಾರೆ. 2004-2014 ರ ಅವಧಿಯಲ್ಲಿ ಯು.ಪಿ.ಎ ಸರ್ಕಾರಗಳು ಹಗರಣಗಳ ತವರು ಮನೆಯಾಗಿತ್ತು. A ಯಿಂದ ಆರಂಭವಾಗಿ Z ತನಕ ಹಗರಣಗಳನ್ನು ನಡೆಸಿದ ಕಾರಣ, ಜನ ಯು.ಪಿ.ಎ ಎಂದರೇ ಹಗರಣ ಎನ್ನುತ್ತಾರೆ ಎಂಬ ಕಾರಣಕ್ಕೆ, ಯು.ಪಿ.ಎ ಹೆಸರನ್ನು ಬದಲಾಯಿಸುವ ಅನಿವಾರ್ಯತೆ ಇತ್ತು.

ಯು.ಪಿ.ಎ ಸರ್ಕಾರವು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಇದ್ದಂತಹ ಸ್ವಾರ್ಥಿಗಳ ತಾಣವಾಗಿತ್ತು. ಇವರುಗಳ ಕುಟುಂಬ ರಾಜಕಾರಣಕ್ಕೆ ಜನತೆ ತಕ್ಕ ಪಾಠ ಕಲಿಸಿದ ಪರಿಣಾಮ, ಪುನಃ ಯು.ಪಿ.ಎ ಹೆಸರಿನೊಂದಿಗೆ ಮುನ್ನಡೆದರೇ, ಜನ ಮತ್ತೊಮ್ಮೆ ತಮ್ಮನ್ನು ಕುಟುಂಬ ರಾಜಕಾರಣಿಗಳು ಎಂದು ಪರಿಗಣಿಸುತ್ತಾರೆ ಎನ್ನುವ ಕಾರಣಕ್ಕೆ ಯು.ಪಿ.ಎ ಹೆಸರು ಬದಲಿಸುವ ಸಂದಿಗ್ಧತೆ ಎದುರಾಗಿತ್ತು.

ಯು.ಪಿ.ಎ ಸರ್ಕಾರದ ಅವಧಿಯಲ್ಲಿ ನಡೆದ ವಿಧ್ವಂಸಕ ಕೃತ್ಯಗಳು, ಭಯೋತ್ಪಾದಕ ದಾಳಿಗಳು, ಭಾರತೀಯರೂ ಎಂದಿಗೂ ಮರೆಯದ 26/11 ಮುಂಬೈ ದಾಳಿ, ಕಾಶ್ಮೀರದ ಸೈನಿಕರ ಮೇಲೆ ಕಲ್ಲು ತೂರಾಟ ಹೀಗೆ ಎಲ್ಲವೂ ಭಾರತೀಯರ ಮನಸ್ಸಿನಲ್ಲಿಯೇ ಅಚ್ಚಳಿಯದೆ ಉಳಿದಿದೆ.

ಯು.ಪಿ.ಎ ಎಂದರೇ ಭಾರತೀಯರಿಗೆ ಆ ಅವಧಿಯಲ್ಲಿ ನಡೆದ ಕೆಟ್ಟ ಘಟನೆಗಳು ಕಣ್ಣ ಮುಂದೆ ಬರುತ್ತವೆ ಎಂಬ ಕಾರಣಕ್ಕೆ ಯು.ಪಿ.ಎ ಹೆಸರನ್ನು ಬದಲಾಯಿಸಿದರೇ ಮಾತ್ರ ತಮಗೆ ಉಳಿಗಾಲವಿದೆ ಎಂಬ ಭ್ರಮೆಯಲ್ಲಿ ಅವಕಾಶವಾದಿ ರಾಜಕಾರಣಿಗಳು ತೇಲುತ್ತಿದ್ದಾರೆ.

ಈ ಕಾರಣಕ್ಕಾಗಿ ತಾವು ಹಿಂದಿನ ಅವಧಿಯಲ್ಲಿ ಮಾಡಿದಂತಹ ತಪ್ಪುಗಳನ್ನು, ನೀಡಿದ ಕೆಟ್ಟ ಆಡಳಿತವನ್ನು ಮರೆಮಾಚಲು I-N-D-I-A ಎಂಬ ಗುರಾಣಿಯ ಮೊರೆ ಹೋಗಿದ್ದಾರೆ. ಇವರುಗಳು ಹೆಸರನ್ನು ಬದಲಿಸಬಹುದು, ಆದರೇ ಭಾರತೀಯರು ಇವರ ಆಡಳಿತದಲ್ಲಿ ಅನುಭವಿಸಿದ ಕೆಟ್ಟ ಕ್ಷಣಗಳನ್ನು ಎಂದಿಗೂ ಮರೆಯಲಾರರು ಎಂದು ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಟ್ವಿಟ್‌ರ್‌ ಖಾತೆಯಲ್ಲಿ ಬರೆಯಲಾಗಿದೆ.

26 ವಿರೋಧ ಪಕ್ಷಗಳ ಸಭೆಯಲ್ಲಿ I.N.D.I.A ಹೆಸರನ್ನು ಮಮತಾ ಬ್ಯಾನರ್ಜಿ ಸೂಚಿಸಿದರು. ನಂತರ ರಾಹುಲ್ ಗಾಂಧಿಯವರು ಹೆಚ್ಚು ಮನ್ನಣೆ ನೀಡಿದ್ದರಿಂದ ಈ ಹೆಸರು ಅಂತಿಮವಾಯಿತು. ಮೋದಿಯವರು ಭಾರತವನ್ನು ಹೇಗೆ ವಿರೋಧಿಸುತ್ತಾರೆ ಮತ್ತು ಎನ್‌ಡಿಎಯನ್ನು ವಿರೋಧಿಸುವವರು ಐಎನ್‌ಡಿಐಎ ಜೊತೆಗಿದ್ದಾರೆ ಎಂದು ರಾಹುಲ್ ಹೆಸರನ್ನು ಭಾವೋದ್ರಿಕ್ತವಾಗಿ ಸಮರ್ಥಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+