ಗಲಭೆ ಆರೋಪಿಗಳ ಪ್ರಕರಣ ವಾಪಸ್; ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಾರ್ಟಿ ಎಂದು ಪ್ರಲ್ಹಾದ್ ಜೋಶಿ ವಾಗ್ದಾಳಿ
ಹುಬ್ಬಳ್ಳಿ, ಅಕ್ಟೋಬರ್ 11: ಹಳೇ ಹುಬ್ಬಳ್ಳಿಯ ಗಲಾಟೆ ಪ್ರಕರಣದಲ್ಲಿ16 C 18,20 ರ ಅಡಿ NIA ಚಾರ್ಜ್ ಶೀಟ್ ಫೈಲ್ ಆಗಿತ್ತು ಆದರೆ ಈಗ ಇದನ್ನ ರಾಜ್ಯ ಸರ್ಕಾರ ತೆಗೆದು ಹಾಕಿದ್ದು ಇದೊಂದು ಸಂಘಟಿತ ಭಯೋತ್ಪಾದಕ ಕೃತ್ಯ ಎಂದು ಚಾರ್ಜ್ ಶೀಟ್ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಲ್ಹಾದ್ ಜೋಶಿ ಮಾತನಾಡಿ, ಸರ್ಕಾರ ಕ್ಕೆ ಸಮಾಜದ ಹಿತ ಇದ್ರೆ ಕೇಸ್ ವಾಪಸ್ ಪಡೆಯೋಕೆ ಸಾಧ್ಯ ಇಲ್ಲ ಆದರೆ ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಾರ್ಟಿ ಆಗಿದ್ದು,ಕೇಸ್ ವಾಪಸ್ ಪಡೆದು ಬಹುದೊಡ್ಡ ಕಂಟಕ ತಂದಿದ್ದಾರೆ. ನನಗೆ ಇದರ ಬಳಿ ಆರ್ಡರ್ ಕಾಪಿ ಇಲ್ಲ ಆದರೆ ನಾನು ಮಾಹಿತಿ ಆಧರಿಸಿ ಮಾತಾಡುತ್ತಿದ್ದೇನೆ ಎಂದು ಹೇಳಿದರು.

ಕೇಸ್ ವಾಪಸ್ ಪಡೆಯುತ್ತಾರೆ ಅಂದ್ತೆ ಇವರ ಉದ್ದೇಶ ಏನೂ ದೇಶದಲ್ಲಿ 95 ಪರ್ಸೆಂಟ್ ನಕ್ಸಲ್ ಚಟುವಟಿಕೆ ಕಡಿಮೆ ಆಗಿದ್ದುಭಾರತ ಸರ್ಕಾರದ ಬಿಗಿಯಾದ ಕ್ರಮದಿಂದ ಕಡಿಮೆ ಆಗಿದೆ. ಕಾಂಗ್ರೆಸ್ ಸರ್ಕಾರ ಭಯೋತ್ಪಾದಕ ಕೃತ್ಯವನ್ನು ಮಾಡಲು ಪ್ರಯತ್ನ ಪಟ್ಟವರ ಕೇಸ್ ವಾಪಸ್ ಪಡತಿರೋದು ನಾನು ಖಂಡಿಸುತ್ತೇನೆ. ಆದರೆ, ಭಯೋತ್ಪಾದಕ ಇಸ್ಲಾಂ ಪರ ಕಾಂಗ್ರೆಸ್ ಇದ್ದುಇದು ಜನತೆಯ ಸುರಕ್ಷೆಯ ಪ್ರಶ್ನೆ ಆಗಿದೆ. ಏನೇ ಆಗಲಿ ಸರ್ಕಾರ ಇದನ್ನು ಗಂಭೀರವಾಗಿ ತಗೆದುಕೊಳ್ಳಬೇಕು. ಇದು ಕಾಂಗ್ರೆಸ್ ಬಿಜೆಪಿ ಪ್ರಶ್ನೆ ಅಲ್ಲ ಇದನ್ನು ನೋಡಿದ್ರೆ ಯಾವ ಪ್ರಮಾಣದಲ್ಲಿ ಮತಾಂಧತೆಯ ಪಿತ್ತ ನೆತ್ತಗೇರಿದೆ ಅನ್ನೋದು ಗೊತ್ತಾಗತ್ತದೆ ಎಂದರು.
ಇದು ಅಕಸ್ಮಾತ್ ನಿಜ ಆದರೆ ನಾವು ಕಾನೂನು ಹೋರಾಟ ಮಾಡತೀವಿ, ನಾಳೆ ಇಸ್ಲಾಂ ಮತಾಂಧ ಶಕ್ತಿಗಳು ಪೊಲೀಸ್ ಠಾಣೆ ಸುಟ್ಟು ಹಾಕಬಹುದು. ನಾವು ಹೋರಾಟ ಮಾಡ್ತೀವಿ, ನಾವು ಕೋರ್ಟ್ ನಲ್ಲಿ ಪ್ರಶ್ನೆ ಮಾಡತೀವಿ. ನಾಳೆ ಇದಕ್ಕೆ ಸರ್ಕಾರ ಮಾಹಿತಿ ನೀಡದೆ ಹೋದರೆ ಹೋರಾಟ ಮಾಡತೀವಿ. ಮೊದಲ ಹಂತದಲ್ಲಿ ಸೋಮವಾರ ಹೋರಾಟ ನನಗಿರೋ ಮಾಹಿತಿ ಪ್ರಕಾರ NIA ಕೇಸ್ ಯಾವ ರಾಜ್ಯದವರು ವಾಪಸ್ ಪಡೆದಿಲ್ಲ. ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ರಾಜ ಕಾರಣಕ್ಕೆ ಏನಾದರೂ ಮಾಡಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು . ಇನ್ನು ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ನಾವು ಅನ್ನ ಭಾಗ್ಯದಲ್ಲಿ ಪೌಷ್ಠಿಕಾಂಶದ ಅಕ್ಕಿ ಕೊಡತೀದಿವಿ ಪ್ರಾಯೋಗಿಕವಾಗಿ ಮೂರು ಜಿಲ್ಲೆಯಲ್ಲಿ ಕೊಟ್ಟಿದ್ವೀ ಇದೀಗ ಅದನ್ನು ಐದು ವರ್ಷ ಮುಂದುವರೆಸುತ್ತೇವೆ ಎಂದರು.
ದುಷ್ಟ ಶಕ್ತಿಗಳ ವಿರುದ್ಧ ಸತ್ಯದ ಜಯ ಎಂಬ ಜಾಹೀರಾತು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ದುಷ್ಟ ಶಕ್ತಿಗಳು ಯಾರು? ಭಯೋತ್ಪಾದಕ ಕೇಸ್ ವಾಪಸ್ ಪಡೆತಿರೋದು ನೀವು ಎಂದ ಅವರು, ಭ್ರಷ್ಟಾಚಾರ ಮಾಡಿದ್ದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರದ್ದು ಗಂಭೀರ ಕೇಸ್ ಆಗಿದ್ದು, ಸರ್ಕಾರ ಮುನಿರತ್ನ ವಿಷಯದಲ್ಲಿ ಯಾಕೆ ಹೀಗೆ, ಆದರೆ ನನಗೆ ಇದ್ದ ಮಾಹಿತಿ ಅನ್ವಯ ಸಿದ್ದರಾಮಯ್ಯ ಹೋಗಲಿ ಎಂದು ಎಲ್ಲರೂ ವೇಟ್ ಮಾಡುತ್ತಿದ್ದಾರೆ. ಐದು ವರ್ಷ ಸಿಎಂ ಆಗಿ ಇರ್ತಾರೆ ಎಂದವರ ಎಲ್ಲರೂ ವೇಟ್ ಮಾಡತೀದಾರೆ.
ಕೋವಿಡ್ ಹಗರಣದ ಸಮಿತಿ ವಿಚಾರವಾಗಿ ಮಾತನಾಡಿ, ಇಲ್ಲಿವರೆಗೂ ಕತ್ತೆ ಕಾಯತೀದ್ರಾ ಅವರು. ಇದು ಬ್ಲಾಕ್ ಮೇಲ್ ತಂತ್ರ ಆಗಿದೆ, ಇವರು ಅನಾಚಾರ ಮಾಡಿದ್ರು ಸುಮ್ಮನಿರಬೇಕು. ಅಕಸ್ಮಾತ್ ಪ್ರಶ್ನೆ ಮಾಡಿದ್ರೆ ಬ್ಲಾಕ್ ಮೇಲ್ ತಂತ್ರ. ನಾವು ಈ ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಇನ್ನು ಹರಿಯಾಣದಲ್ಲಿ ಸ್ಪಷ್ಟವಾದ ಬಹುಮತ ಸಿಕ್ಕಿದ್ದುಈ ಬಾರಿ ಲೋಕಸಭೆಯಲ್ಲಿ ನಮಗೆ ಬಂದಿರೋ ಸೀಟ್ ನಷ್ಡು ಕಾಂಗ್ರೆಸ್ ಮೂರು ಲೋಕಸಭೆ ಚುನಾವಣೆಯಲ್ಲಿ ಬಂದಿಲ್ಲ. ಬಾಲ ಬುದ್ದಿಯ ರಾಹುಲ್ ಗಾಂಧಿ ಯವರು ಮಾತಾಡತೀದಾರೆ. ಹರಿಯಾಣದಲ್ಲಿ ಗೆದ್ದೇ ಬಿಟ್ವಿ ಅಂತಾ ಜಿಲೇಬಿ ಹಂಚಿದ್ರು ಕಾಶ್ಮೀರ್ ದಲ್ಲಿ ಕೇವಲ 6 ಸೀಟ್ ಗೆದ್ದಿದ್ದಾರೆ. ಇದು ಕಾಂಗ್ರೆಸ್ ಗೆಲವು ಅಂತಾರೆ. ಎಷ್ಟು ಹುಚ್ಚರಿದಾರೆ ಇವರು, ಜಮ್ಮುದೊಳಗೆ ಕಾಂಗ್ರೆಸ್ ಗೆ ಏನೂ ಇಲ್ಲ ಅಲ್ಲಿ ಗೆದ್ದಿದ್ದು ಬಿಜೆಪಿ. ಇವರು ಎಷ್ಟು ಬಾಲಿಶ ಇದ್ದಾರೆ,ಇವರದು ಬಾಲ ಬುದ್ದಿ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ದ ಜೋಶಿ ವಾಗ್ದಾಳಿ ನಡೆಸಿದರು.












Click it and Unblock the Notifications